ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಲಡ್ಕಿ ಬಹೀನ್ (Ladki Bahin) ಯೋಜನೆಯಲ್ಲಿ 80 ಲಕ್ಷ ಮಹಿಳೆಯರನ್ನು ಫಡ್ನವೀಸ್ ಸರ್ಕಾರ ಕೈಬಿಟ್ಟಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ಮಹಿಳಾ ಮತ ಸೆಳೆಯಲು ಮೈತ್ರಿಕೂಟ ಪ್ರತಿಮಹಿಳೆಗೆ ಮಾಸಿಕ 1500 ರೂ. ಕೊಡೋದಾಗಿ ಘೋಷಿಸಿತ್ತು. ಇದೀಗ ನಕಲಿ ಫಲಾನುಭವಿಗಳ ಪತ್ತೆಗೆ ಇ-ಕೆವೈಸಿ ಕಡ್ಡಾಯಗೊಳಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸದ 80 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಡಲಾಗಿದೆ. ಯೋಜನೆಯಲ್ಲಿ ಈ ಮೊದಲಿದ್ದ 2.5 ಕೋಟಿ ಫಲಾನುಭವಿಗಳ ಸಂಖ್ಯೆ ಈಗ 1.7 ಕೋಟಿಗೆ ಇಳಿದಿದೆ. ಇದನ್ನೂ ಓದಿ: ಜಮೀರ್ ಅಹ್ಮದ್ ಭವಿಷ್ಯ ರಾಹುಲ್ ಗಾಂಧಿ ಕೈಯಲ್ಲಿ?
ಸುಮಾರು 50-55 ಲಕ್ಷ ಮಹಿಳೆಯರು ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಸುಮಾರು 12 ಲಕ್ಷ ಮಹಿಳೆಯರು 2.5 ಲಕ್ಷ ವಾರ್ಷಿಕ ಆದಾಯ ಮಿತಿ ಮೀರಿದ್ದು, ಐಟಿ ಪಾವತಿಸುವವರಾಗಿದ್ದಾರೆ. 4.5 ಲಕ್ಷಕ್ಕೂ ಹೆಚ್ಚು ಮಹಿಳೆಯರು 65 ವರ್ಷ ವಯೋಮಿತಿ ಮೀರಿದ್ದರೆ, ಸುಮಾರು 5 ಲಕ್ಷ ಮಹಿಳೆಯರು ಈಗಾಗಲೇ `ನಮೋ ಶೇತ್ಕರಿ’ (ರೈತ) ಯೋಜನೆ ಸೌಲಭ್ಯ ಪಡೀತಿದ್ದಾರೆ. ವಿಪಕ್ಷಗಳು ಕಿಡಿಕಾರಿದ್ದು, ಇ-ಕೆವೈಸಿ ಮಾಡಿರುವ ಫಲಾನುಭವಿಗಳಿಗೂ ಹಣ ಬರುತ್ತಿಲ್ಲ ಎಂದಿದೆ. ಇದನ್ನೂ ಓದಿ: ಜಮೀರ್ ಅವರನ್ನು ನಂಬಿದ್ದೆ ಆದ್ರೆ ಈ ರೀತಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ: ಸಮರ್ಥ್ ಶಾಮನೂರು ಬೇಸರ
