ದಾವಣಗೆರೆ: ಜಮೀರ್ (Zameer Ahmed) ಹಾಗೂ ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಅವರದ್ದು ಎನ್ನಲಾದ ಆಡಿಯೋ ವಿಚಾರವಾಗಿ ಸಮರ್ಥ ಶಾಮನೂರು (Samarth Shamanur) ಬೇಸರ ಹೊರಹಾಕಿದ್ದಾರೆ.
ನಗರದಲ್ಲಿ (Davanagere) ʻಪಬ್ಲಿಕ್ ಟಿವಿʼ ಜೊತೆ ಅವರು ಮಾತನಾಡಿದರು. ಈ ವೇಳೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ (Davanagere South Byelection) ವೇಳೆ ಸಚಿವ ಜಮೀರ್ ಅಹಮ್ಮದ್ ಹಾಗೂ ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಸೇರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ನಡೆಸಿದ್ದರು ಎನ್ನಲಾದ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದರು. ಜಮೀರ್ ಅವರನ್ನು ನಂಬಿದ್ದೆ ಆದರೆ ಈ ರೀತಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ವೈರಲ್ ಆಗಿರೋದು AI ಆಡಿಯೋ, ಯಾವ ತನಿಖೆ ಬೇಕಾದ್ರೂ ಆಗಲಿ – ಜಮೀರ್ ಸವಾಲು
ಆಡಿಯೋದಲ್ಲಿ ಇರುವುದು ಸತ್ಯ. ಇದೆಲ್ಲ ಓಪನ್ ಸೀಕ್ರೆಟ್ ಈಗ ಸಾಕ್ಷಿ ಮುಂದೆ ಬಂದಿದೆ. ಈ ಕ್ಲಿಪ್ ನೋಡಿದ್ರೆ ಗೊತ್ತಾಗುತ್ತದೆ ನಮ್ಮವರು ಮಾತ್ರ ಅಲ್ಲ ಎಸ್‌ಡಿಪಿಐ, ಪಕ್ಷೇತರ ಹಾಗೂ ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ. ಎಲ್ಲರೂ ಎಷ್ಟು ಒಗ್ಗಟ್ಟಿನಿಂದ ಷಡ್ಯಂತ್ರ ನಡೆಸಿದ್ದಾರೆ ಎಂದು ಇದರಿಂದ ಗೊತ್ತಾಗಲಿದೆ. ದುಗ್ಗಮ್ಮನ ಆಶೀರ್ವಾದದಿಂದ ಈಗ ಎಲ್ಲಾ ಹೊರಗೆ ಬಂದಿದೆ. ಎಲ್ಲಾ ದೇವರು ನೋಡಿಕೊಳ್ಳುತ್ತಾರೆ.
ಜಮೀರ್ ಅವರು ಮನೆಗೆ ಬಂದು ಮಾತನಾಡಿದ್ದನ್ನು ನಾನು ನಂಬಿದ್ದೆ. ಅವರು ಹೀಗೆ ಮಾಡ್ತಾರೆ ಅಂತ ನಾನು ಅಂದು ಕೊಂಡಿರಲಿಲ್ಲ. ಏನೇ ಮಾಡಿದ್ರು ನಮ್ಮ ಊರಿನ ಜನರು ನನ್ನನ್ನು ಕಾಪಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೇಳಿದ್ದರು. ಜನರು ನಮಗೆ ಮೋಸ ಮಾಡಿಲ್ಲ ಆದರೆ ಲೀಡರ್‌ಗಳು ಅವರ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ರು. ಮುಸ್ಲಿಂ ಸಮುದಾಯದ ಮತಗಳು ನಮಗೆ ಬಿದ್ದಿವೆ. ಶೇಮ್‌ಲೆಸ್ ಲೀಡರ್‌ಗಳು ಷಡ್ಯಂತ್ರ ಮಾಡಿದ್ದಾರೆ. ಪಾರ್ಟಿ ಯಾರಿಗೆ ನಿರ್ಧಾರ ಮಾಡುತ್ತೋ ಅವರಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಒಳಗೊಳಗೆ ಮೋಸ ಮಾಡಿದ್ರೆ ಏನು ಮಾಡೋದು ಹೇಳಿ. ಇದರ ಬಗ್ಗೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅವರಿಗೆ ಬಿಟ್ಟಿದ್ದು, ಆದರೆ ನಮ್ಮನ್ನು ಕಾಯಕವೇ ಕಾಪಾಡುತ್ತದೆ. ಯಾರೇ ಷಡ್ಯಂತ್ರ ನಡೆಸಿದರೂ ನಮ್ಮ ಮತದಾರರು ಕೈ ಹಿಡಿದಿದ್ದಾರೆ. ಬಿಜೆಪಿ, ಎಸ್‌ಡಿಪಿಐ ಪಕ್ಷೇತರರು ಒಂದೇ ಪಾರ್ಟಿಯಾಗಿ ಕೆಲಸ ಮಾಡಿದ್ದಾರೆ. ಆದರೂ ಕೂಡ ಅವರು ಗೆಲ್ಲಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಮೀರ್ ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ – ವೈರಲ್ ಆಡಿಯೋ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ
