– ಗುತ್ತಿಗೆದಾರನ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ ಕೃತ್ಯ
ಮೈಸೂರು: ಗ್ಯಾಂಗ್ ಒಂದು ಗುತ್ತಿಗೆದಾರನ ಕಿಡ್ನ್ಯಾಪ್ (Corporater Kidnap) ಮಾಡಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ 16 ಲಕ್ಷ ಹಣ, 3.5 ಲಕ್ಷ ಮೌಲ್ಯದ ಚಿನ್ನ ಕಸಿದು ಪರಾರಿಯಾಗಿದ್ದಾರೆ.
ಮೈಸೂರಿನ (Mysuru) ಹೊರವಲಯದಲ್ಲಿ ಜುಲೈ 15 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು ತಾಲೂಕು ಮುದೇಗೌಡನ ದೊಡ್ಡಿ ಗ್ರಾಮದ ಗುತ್ತಿಗೆದಾರ ರಾಮು ಅಪಹರಕ್ಕೊಳಗಾಗಿದ್ದ ವ್ಯಕ್ತಿ. ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಮೇಲೆಯೇ ಜೀಪ್ ಹತ್ತಿಸಲು ಯತ್ನಿಸಿದ ಆರೋಪ – ಕಳ್ಳ ಬೇಟೆಗಾರರ ಮೇಲೆ ಫೈರಿಂಗ್
ರಾಮು ತಮ್ಮ ತೋಟದಿಂದ ಮನೆಗೆ ವಾಪಸ್ ಬರುವಾಗ ನಾಲ್ವರ ತಂಡ ಕಿಡ್ನ್ಯಾಪ್ ಮಾಡಿದೆ. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿದ್ದಾರೆ. ನಂತರ ರಾಮು ಮೊಬೈಲ್‌ನಿಂದ ಹೆಂಡತಿಗೆ ಕರೆ ಮಾಡಿಸಿ ರಾತ್ರಿ ಮನೆಗೆ ಬರುವುದಿಲ್ಲ ಎಂದು ಹೇಳಿಸಿದ್ದಾರೆ. ರಾಮು ಕತ್ತಿನಲ್ಲಿದ್ದ 30 ಗ್ರಾಂ ಚೈನು, ಕೈಯಲ್ಲಿದ್ದ 10 ಗ್ರಾಂನ ಎರಡು ಉಂಗುರ ಜೇಬಿನಲ್ಲಿದ್ದ 50 ಸಾವಿರ ಹಣ ಕಿತ್ತು ಕೊಂಡಿದ್ದಾರೆ.
ನಿನ್ನನ್ನ ಕೊಲೆ ಮಾಡಲು 9 ಲಕ್ಷಕ್ಕೆ ಸುಫಾರಿ ಕೊಟ್ಟಿದ್ದಾರೆ. ಕೊಲೆ ಮಾಡುವುದ ಬೇಡ ಎಂದರೆ 40 ಲಕ್ಷ ಕೊಡುವಂತೆ ತಲೆಗೆ ಹೊಡೆದಿದ್ದಾರೆ. ಹೆದರಿದ ರಾಮು ನನ್ನ ಬಳಿ 40 ಲಕ್ಷ ಇಲ್ಲ 16 ಲಕ್ಷ ಇದೆ ಎಂದಿದ್ದಾರೆ. ಹೆಂಡತಿಗೆ ಫೋನ್ ಮಾಡಿಸಿದ ಕಿಡ್ನ್ಯಾಪರ್ಸ್ ಬಾಮೈದ ಸುರೇಶ್ ಬರುತ್ತಾನೆ 16 ಹಣ ಕೊಡು ಕಂಟ್ರಾಕ್ಟರ್ ಗೆ ಕೊಡಬೇಕೆಂದು ಹೇಳಿಸಿದ್ದಾರೆ. ಇದನ್ನೂ ಓದಿ: 20 ದಿನಗಳಿಂದ ಉಪವಾಸ ಸತ್ಯಾಗ್ರಹ; ವಾಂಗ್ಚುಕ್ ಆರೋಗ್ಯ ಕ್ಷೀಣ – ಆಸ್ಪತ್ರೆಗೆ ಶಿಫ್ಟ್
ನಂದಗುಂದ ಸೇತುವೆ ಬಳಿ ಕಪ್ಪು ಬಣ್ಣದ ಶರ್ಟ್ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ರಾಮು ಬಾಮೈದ ಹಣ ನೀಡಿದ್ದಾನೆ. ನಂತರ ಒಂದು ಗಂಟೆ ಕಾರಿನಲ್ಲಿ ಸುತ್ತಾಡಿಸಿ ಅಜ್ಞಾನತ ಸ್ಥಳದಲ್ಲಿ ರಾಮು ಬಿಟ್ಟು ಪರಾರಿಯಾಗಿದ್ದಾರೆ. ವಿಷಯವನ್ನ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ರಾಮು ಜೊತೆ ಮಾತುಕತೆ ನಡೆಸಿದ್ದಾರೆ. ಅಪಹರಣಕಾರ ಪತ್ತೆಗೆ ಪೊಲೀಸರು ಮೂರು ತಂಡ ರಚನೆಯಾಗಿದೆ.
