– ನಮ್ಮಿಬ್ಬರ ಮಧ್ಯೆ ಅಂತಹ ಮಾತುಕತೆಯೇ ಆಗಿಲ್ಲ
ದಾವಣಗೆರೆ: ಜಮೀರ್ ಅಹಮ್ಮದ್ (Zameer Ahmed) ಹೆಸರಿಗೆ ಮಸಿ ಬಳಿಯೋಕೆ ಯಾರೋ ಆಡಿಯೋ ಬಿಟ್ಟಿದ್ದಾರೆ ಎಂದು ಮೊಹಮ್ಮದ್ ಸಿರಾಜ್ (Mohammed Siraj) ಆರೋಪಿಸಿದ್ದಾರೆ.
ದಾವಣಗೆರೆ ಉಪಚುನಾವಣೆ (Davanagere South Byelection) ವಿಚಾರವಾಗಿ ವೈರಲ್ ಆಗಿರುವ ಆಡಿಯೋ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆ ಅವರು ಮಾತನಾಡಿದರು. ಈ ವೇಳೆ, ಸಾಹೇಬ್ರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕಾಂಗ್ರೆಸ್‌ಗಾಗಿ ಶ್ರಮಿಸಿದ್ದಾರೆ. ಜಮೀರ್ ಹೆಸರಿಗೆ ಮಸಿ ಬಳಿಯಲು ಯಾರೋ ಈ ಪ್ರಯತ್ನ ಮಾಡಿದ್ದಾರೆ ಎಂದರು. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್? – ಕಾಂಗ್ರೆಸ್‌ನಲ್ಲಿ ಆಡಿಯೋ ಸಂಚಲನ
ನಮ್ಮಿಬ್ಬರ ಮಧ್ಯೆ ಅಂತಹ ಚರ್ಚೆಗಳೇ ನಡೆದಿಲ್ಲ. ಯಾರೋ ಈ ರೀತಿ ಮಾಡಿದ್ದಾರೆ. ನನಗೆ ಈ ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಪಕ್ಷದಿಂದ ಯಾರೂ ನನಗೆ ಈ ವಿಚಾರವಾಗಿ ಕೇಳಿಲ್ಲ.
ಪಕ್ಷದಲ್ಲಿರುವವರೇ ಜಮೀರ್‌ಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಅಂತಹವರು ಪಕ್ಷದಲ್ಲೂ ಇದ್ದಾರೆ. ದಾವಣಗೆರೆಯಲ್ಲೂ ಇದ್ದಾರೆ. ಜಮೀರ್ ಅವರು ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ ನಡೆಯುತ್ತಿದೆ.
ದಾವಣಗೆರೆಯಲ್ಲಿ ಜಮೀರ್ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡಿದ್ದಾರೆ. ಆಡಿಯೋ ವೈರಲ್ ಬಗ್ಗೆ ದೂರು ಕೊಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್
