Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್‌

Bengaluru City

7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್‌

Public TV
Last updated: April 14, 2026 11:34 am
Public TV
Share
3 Min Read
Zameer Ahmed 1
SHARE

– ಗೆಲ್ಲಿಸಿಕೊಂಡು ಬರದಿದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ದೆ
– ದಾವಣಗೆರೆಯಲ್ಲಿ ನನ್ನ ಕೆಲಸ ಮಾಡಿದ್ದೇನೆ: ಸಚಿವರ ಸ್ಪಷ್ಟನೆ

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ಗೆಲ್ಲಿಸಿಕೊಂಡು ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಕೆಪಿಸಿಸಿ ಸಭೆಯಲ್ಲಿ ಡಿಕೆ ಶಿವಕುಮಾರ್‌, ಸುರ್ಜೇವಾಲಾ ಅವರ ಎದುರಲ್ಲೇ ಓಪನ್ ಆಗಿ ಹೇಳಿದ್ದೆ ಎಂದು ಸಚಿವ ಜಮೀರ್‌ ಅಹ್ಮದ್‌ (Zameer Ahmed Khan) ತಿಳಿಸಿದರು.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್‌ ಕೊಡದಿದ್ದಕ್ಕೆ ಅಸಮಾಧಾನ ಇದ್ದದ್ದು ನಿಜ, ಆ ನಂತರ ಎಲ್ಲವೂ ಸರಿಹೋಗಿದೆ. ಜಬ್ಬಾರ್‌ ಜೊತೆಗೆ 7 ಮುಸ್ಲಿಂ ನಾಯಕರ (Muslim Leaders) ಹೆಸರು ಕೊಟ್ಟಿದ್ದೆ, ಆದ್ರೆ ಜಬ್ಬಾರ್‌ಗೆ ಟಿಕೆಟ್‌ ಕೊಡಿ ಅಂತ ಕೇಳಲಿಲ್ಲ. ಯಾವುದೇ ಮುಚ್ಚುಮರೆ ಮಾಡಿಲ್ಲ. ಓಪನ್ ಆಗಿ ಕೆಪಿಸಿಸಿ ಸಭೆಯಲ್ಲೇ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಬಿರುಗಾಳಿ – ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ

abdul jabbar d.k.shivakumar

ನನ್ನ ಜವಾಬ್ದಾರಿ ಮೇಲೆ ಟಿಕೆಟ್‌ ಕೇಳಿದ್ದೆ
ದಾವಣಗೆರೆ ಟಿಕೆಟ್‌ ಬಗ್ಗೆ ಓಪನ್ ಆಗಿ ನಾನು ಕೆಪಿಸಿಸಿ ಸಭೆಯಲ್ಲಿ (KPCC Meet) ಡಿಕೆ ಶಿವಕುಮಾರ್‌, ಸುರ್ಜೇವಾಲಾ ಅವರ ಮುಂದೆಯೇ ಹೇಳಿದ್ದೆ. ಜಬ್ಬಾರ್‌ಗೆ ಟಿಕೆಟ್‌ ಕೊಡಿ ಅನ್ನಲಿಲ್ಲ, ಏಕೆಂದ್ರೆ ಜಬ್ಬಾರ್‌ ಎಂಎಲ್‌ಸಿ ಇದ್ದಾರೆ, ಅವರಿಗೆ ಟಿಕೆಟ್‌ ಕೇಳಿದ್ದು ತಪ್ಪು ಅಂತ ಗೊತ್ತಾಯ್ತು. ಜಬ್ಬಾರ್‌ ಬದಲು 7 ಮಂದಿ ಮುಸ್ಲೀಮರಲ್ಲಿ ಯಾರಿಗಾದ್ರೂ ಟಿಕೆಟ್‌ ಕೊಡಿ ಅಂದಿದ್ದೆ. ನಾನು ಗೆಲ್ಲಿಸಿಕೊಂಡು ಬರದಿದ್ರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ಆದ್ರೂ ಟಿಕೆಟ್‌ ಕೊಡಲಿಲ್ಲ. ಅದಕ್ಕೆ ಅಸಮಾಧಾನ ಇದ್ದಿದ್ದು ನಿಜ, ಆಮೇಲೆ ಎಲ್ಲವೂ ಸರಿ ಆಗಿದೆ ಎಂದರು. ಇದನ್ನೂ ಓದಿ: ಟಿಕೆಟ್ ಆಸೆ ಹುಟ್ಟಿಸಿ, ನಮ್ಮದೇ ನಾಯಕರು ಕಾಲೆಳೆಯುವ ಕೆಲಸ ಮಾಡಿದ್ದಾರೆ: ಅಬ್ದುಲ್ ಜಬ್ಬಾರ್

ಇನ್ನೂ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಬ್ಬಾರ್ ರಾಜೀನಾಮೆ ಕೊಟ್ಟಾಗ ನಾನಿರಲಿಲ್ಲ. ನಸೀರ್‌ ಅಹ್ಮದ್‌ಗೆ ಡ್ರಾಪ್ ಮಾಡ್ತೀನಿ ಅಂದಿದ್ದಾರೆ ಏನು ಕಾರಣ ಗೊತ್ತಿಲ್ಲ. ದಾವಣೆಗೆರೆಗೆ ಹೋಗಿಲ್ಲ ಅಂತ ವಿಷಯ ತೆಗೆದಿದ್ದಾರೆ, ಆದ್ರೆ ಯಾರಾದ್ರೂ ಹೆಸರು ಹೇಳಿದ್ದಾರಾ? ಸ್ಥಳೀಯ ಮುಸ್ಲಿಮರಲ್ಲಿ ಅಸಮಾಧಾನ ಇದ್ದಿದ್ದು ನಿಜ. ಆಮೇಲೆ ಸರಿ ಹೋಗಿದ್ದಾರೆ, 100% ಒಳ್ಳೆ ಲೀಡಲ್ಲಿ ಗೆಲ್ತೀವಿ ದಾವಣೆಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದುವರಿದು.. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಜನಗಳ ಮಧ್ಯೆ ಇರುವವನು, ನಾನು ಯಾವತ್ತೂ ಲೀಡರ್ ಆಗೋದಕ್ಕೆ ಹೊರಟಿಲ್ಲ. ನಾನೇ ಲೀಡರ್‌ ಅಂತಲೂ ಹೇಳಿಕೊಂಡಿಲ್ಲ. ನಾನು ಜನ ಸೇವಕ ಅಷ್ಟೇ ಎಂದರು. ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್‌ ರಾಜೀನಾಮೆ

ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ಮಂತ್ರಿಯಾಗುವ ಆಸೆ ಇರೋದು ಸಹಜ. ನನಗೂ ಆಸೆಯಿಲ್ವಾ? ಎಲ್ಲರಿಗೂ ಆಸೆ ಇರೋದು ಸಹಜ. ನನ್ನ ಕೆಲಸ ನಾನು ನಿಭಾಯಿಸಿದ್ದೇನೆ. ದಾವಣಗೆರೆಗೆ ಹೋಗಿ ರೋಡ್‌ ಶೋ ನಡೆಸಿ, ಸುದ್ದಿಗೋಷ್ಠಿ ಮಾಡಿದ್ದೇನೆ. ಮಲ್ಲಿಕಾರ್ಜುನ ಮನೆಯಲ್ಲಿ ಊಟ ಕೂಡ ಮಾಡಿದೆ, ಅಗತ್ಯಬಿದ್ರೆ ಬಾಗಲಕೋಟೆಗೂ ಹೋಗ್ತೀನಿ ಅಂತ ಹೇಳಿದ್ದೆ. ನಸೀರ್ ಅಹಮದ್‌ಗೆ ಬಾಗಲಕೋಟೆ ಜವಾಬ್ದಾರಿ ಕೊಟ್ಟಿದ್ದರು, ಬಾಗಲಕೋಟೆಯಲ್ಲಿ 10 ದಿನ ನಸೀರ್ ಕೆಲಸ ಮಾಡಿದ್ದಾರೆ. ಆರೋಪ ಮಾಡುವುದಾದರೆ ಹೆಸರು ಹೇಳಬೇಕು ತಾನೇ? ಅಂತ ಪ್ರಶ್ನೆ ಮಾಡಿದ್ದಾರೆ.

ನನಗೆ ಹೈಕಮಾಂಡ್ ನಿಂದ ಸ್ಟಾರ್ ಕ್ಯಾಂಪೇನರ್ ಆಗಿ ಕೇರಳ ಜವಾಬ್ದಾರಿ ಕೊಟ್ಟಿದ್ರು. ಏ.7 ರ ತನಕ ಕೇರಳದಲ್ಲಿ ಇರಬೇಕಿತ್ತು, ಆದ್ರೆ ಸಿಎಂ ಸೂಚನೆ ಮೇರೆಗೆ 5ನೇ ತಾರೀಖಿಗೆ ಬಂದೆ. ಪ್ರಚಾರದಲ್ಲಿ ಭಾಗಿಯಾಗಿದ್ದೇನೆ, ಎಲ್ಲರೂ ಅವರವರ ಪ್ರಯತ್ನ ಮಾಡಿದ್ದಾರೆ. ಈಗ ಸಿಎಂ ಕರೆದಿದ್ದಾರೆ. ಯಾವ ಕಾರಣಕ್ಕೆ ಅಂತ ಕೇಳ್ತೇನೆ ಎಂದು ತಿಳಿಸಿದ್ದಾರೆ.

TAGGED:Davangere By ElectionMuslim LeaderssiddaramaiahZameer Ahmed Khanಜಮೀರ್ ಅಹ್ಮದ್ದಾವಣಗೆರೆ ಉಪಚುನಾವಣೆಮುಸ್ಲಿಂ ನಾಯಕರುಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi
Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories

You Might Also Like

krishna river 200361 960 720
Latest

ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ – ಬಲಗೈ ಕಟ್‌

Public TV
By Public TV
40 minutes ago
Vinay Kulkarni 1 1
Bengaluru City

ಸೆಲ್‌ ಒಳಗೆ ಹೋಗ್ತಿದ್ದಂತೆ ಕಣ್ಣೀರು – ಪರಪ್ಪನ ಅಗ್ರಹಾರ ಜೈಲಲ್ಲಿ ಇಡೀ ರಾತ್ರಿ ನಿದ್ದೆ ಮಾಡದ ಕುಲಕರ್ಣಿ

Public TV
By Public TV
1 hour ago
pm modi mann ki baat
Latest

ಮಹಿಳೆಯರನ್ನು ಗೌರವಿಸುವುದು ದೇಶವನ್ನೇ ಗೌರವಿಸಿದಂತೆ: ಮಹಿಳಾ ಮೀಸಲಾತಿ ಕಾನೂನು ಶ್ಲಾಘಿಸಿದ ಮೋದಿ

Public TV
By Public TV
2 hours ago
DK Shivakumar
Bengaluru City

ಕುರ್ಚಿ ಆಸೆಗಾಗಿ ಡಿಕೆಶಿ ವಿರೋಧಿ ಬಣದ ನಾಯಕರನ್ನು ಹೊಂಚು ಹಾಕಿ, ಸಂಚು ರೂಪಿಸಿ ಮುಗಿಸುತ್ತಿದ್ದಾರೆ: ಜೆಡಿಎಸ್ ಕಿಡಿ

Public TV
By Public TV
2 hours ago
Russian firms india
Latest

ರಷ್ಯಾ, ಇರಾನ್‌ ತೈಲ ಖರೀದಿಗೆ ಭಾರತಕ್ಕೆ ಅವಕಾಶ ನೀಡುವ ವಿನಾಯಿತಿಯಲ್ಲಿ ಬದಲಾವಣೆ ಮಾಡಲ್ಲ: ಅಮೆರಿಕ

Public TV
By Public TV
3 hours ago
Raichuru Accident 1
Districts

ಮಂತ್ರಾಲಯ ಬಳಿ ಭೀಕರ ಅಪಘಾತ – ಮೂರು ವರ್ಷದ ಮಗು ಸೇರಿ 8 ಜನ ದುರ್ಮರಣ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?