ವಿಜಯಪುರ: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ (Almatti Dam) ಬೆಳಕಿನ ಅಲಂಕಾರ ಮಾಡಲಾಗಿದೆ.


80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ವಿಜಯಪುರದ (Vijayapura) ನಿಡಗುಂಡಿ (Nidagundi) ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೇಸರಿ, ಬಳಿ ಹಾಗೂ ಹಸಿರು ಬಣ್ಣಗಳ ಬೆಳಕಿನ ಅಲಂಕಾರ ಮಾಡಲಾಗಿದೆ. ಜೊತೆಗೆ ಬೇರೆ ಬೇರೆ ಬಣ್ಣದ ಲೈಟಿಂಗ್‌ನಿಂದಲೂ ಅಲಂಕರಿಸಲಾಗಿದೆ. ಇದನ್ನೂ ಓದಿ: ಝೆನ್ ಜೀಗಳಿಗೆ ಮೋದಿ ಬಿಗ್ ಗಿಫ್ಟ್ – ದೇಶದ 1 ಕೋಟಿ ಯುವಜನರಿಗೆ ಎಐ ತರಬೇತಿ

ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಹರಿದು ಹೋಗುತ್ತಿರುವ ನೀರಿಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಂದರ ದೃಶ್ಯ ಮೈನವಿರೇಳಿಸುವಂತಿದೆ.
