ಕೊಪ್ಪಳ: ಪಾಠ ಕಲಿಸಿ, ಜೀವನದಲ್ಲಿ ಮುನ್ನಡೆಯುವಂತೆ ಹೇಳಿಕೊಟ್ಟ ಗುರುವಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಚಿನ್ನದುಂಗುರ ಉಡುಗೊರೆ ನೀಡಿದ್ದಾರೆ.
ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ (Kanakagiri) ತಾಲೂಕಿನ ಕನಕಾಪುರದ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಗುರುನಮನ ಸಲ್ಲಿಸಿದ್ದಾರೆ. ಹನುಮಗೌಡ ಪಾಟೀಲ ಎಂಬ ಶಿಕ್ಷಕರು ಕನಕಾಪುರದಲ್ಲಿದ್ದಾಗ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಸದ್ಯ ನಿವೃತ್ತಿ ಹೊಂದುತ್ತಿದ್ದು, ಈ ವೇಳೆ ತಮಗೆ ಪಾಠ ಕಲಿಸಿದ ಗುರುಗಳಿಗೆ ಚಿನ್ನದ ಉಂಗುರ ಉಡುಗೊರೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭ – ಸಂಭ್ರಮದಿಂದ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು
ನಿವೃತ್ತಿಗೂ ಮುನ್ನ ಕುಷ್ಟಗಿ ತಾಲೂಕಿನ ಹಾಗಲದಾಳದಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
