– 500 ರೂ. ನಿಂದ 25,000 ರೂ. ವರೆಗೂ ದಂಡ
ಬೆಂಗಳೂರು: ಇನ್ಮುಂದೆ ನಮ್ಮ ಮೆಟ್ರೋದಲ್ಲಿ (Namma Metro) ನಿಯಮ ಉಲ್ಲಂಘಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ. ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುವುದು, ಟ್ರ್ಯಾಕ್ ಮೇಲೆ ಓಡಾಡುವುದು ಹಾಗೂ ಟಿಕೆಟ್ ಅಥವಾ ಪಾಸ್‌ಗಳ ದುರ್ಬಳಕೆ ಮಾಡಿದರೆ 5,000 ರೂ. ನಿಂದ 25,000 ರೂ.ವರೆಗೂ ದಂಡ (Fine) ವಿಧಿಸಲಾಗುತ್ತದೆ.
ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ (BMRCL) ನಮ್ಮ ಮೆಟ್ರೋದಲ್ಲೂ ಈ ಹೊಸ ದಂಡದ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಮೆಟ್ರೋ ರೈಲು ಅಥವಾ ಮೆಟ್ರೋ ನಿಲ್ದಾಣಗಳಲ್ಲಿ ಅನುಮತಿ ಇಲ್ಲದೇ ವ್ಯಾಪಾರ ನಡೆಸಿದರೆ 5,000 ರೂ. ದಂಡ ವಿಧಿಸಲಿದೆ. ಇದನ್ನೂ ಓದಿ: ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆದ್ರೆ ಸರ್ಕಾರಿ ಯೋಜನೆಗಳ ಸೌಲಭ್ಯ ಸಿಗಲ್ವಾ? – ಸುಪ್ರೀಂ ಹೇಳಿದ್ದೇನು?

ಯಾವ ಕೃತ್ಯಕ್ಕೆ ಎಷ್ಟು ದಂಡ?
ಇದುವರೆಗೆ ಮೆಟ್ರೋ ರೈಲಿನಲ್ಲಿ ರೀಲ್ಸ್ (Reels) ಮಾಡುವುದು, ಊಟ-ತಿಂಡಿ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ಜೋರಾಗಿ ಮ್ಯೂಸಿಕ್ ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದರೆ 500 ರೂ. ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದಂತೆ ಇಂತಹ ಉಲ್ಲಂಘನೆಗಳಿಗೆ 2,500 ರೂ. ನಿಂದ 10,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: ಸದ್ಯಕ್ಕಿಲ್ಲ GBA ಎಲೆಕ್ಷನ್; ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯಾವಕಾಶ ನೀಡಿದ ಸುಪ್ರೀಂ
ಇದಲ್ಲದೆ, ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬರೆಯುವುದು, ಪೋಸ್ಟರ್ ಅಂಟಿಸುವುದು ಅಥವಾ ಚಿತ್ರ ಬಿಡಿಸುವಂತಹ ಕೃತ್ಯಗಳಿಗೆ ಈ ಹಿಂದೆ 1,000 ರೂ. ವಿಧಿಸುತ್ತಿದ್ದ ದಂಡದ ಮೊತ್ತವನ್ನು ಇನ್ಮುಂದೆ 10,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಮೆಟ್ರೋ ರೈಲಿನಲ್ಲಿ ಮದ್ಯಪಾನ ಮಾಡಿ ಪ್ರಯಾಣಿಸುವುದು, ಜಗಳವಾಡುವುದು ಅಥವಾ ಉಗುಳುವುದು ಸೇರಿದಂತೆ ಸೆಕ್ಷನ್ 59(1) ಅಡಿಯಲ್ಲಿ ಬರುವ ಉಲ್ಲಂಘನೆಗಳಿಗೆ 500 ರೂ. ಗಳಷ್ಟಿದ್ದ ದಂಡದ ಮೊತ್ತವನ್ನ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ.

ಅದೇ ರೀತಿ ಸೆಕ್ಷನ್ 60(1) ಅಡಿಯಲ್ಲಿ ಪಟಾಕಿ, ಸ್ಫೋಟಕ ವಸ್ತುಗಳು ಅಥವಾ ಅಪಾಯಕಾರಿ ರಾಸಾಯನಿಕಗಳನ್ನು ತೆಗೆದುಕೊಂಡು ಮೆಟ್ರೋದಲ್ಲಿ ಪ್ರಯಾಣಿಸಿದರೆ, ಈ ಹಿಂದೆ ಇದ್ದ 500 ರೂ. ದಂಡ ವಿಧಿಸಲಾಗುತ್ತಿತ್ತು. ಹೊಸ ನಿಯಮದ ಅನ್ವಯ 2,500 ರೂ. ವಿಧಿಸಲಾಗುತ್ತದೆ. ಇದಲ್ಲದೆ, ಈ ಎಲ್ಲಾ ದಂಡದ ಮೊತ್ತವನ್ನು ಪ್ರತಿ 3 ವರ್ಷಗಳಿಗೊಮ್ಮೆ ಶೇ.10ರಷ್ಟು ಹೆಚ್ಚಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಹೇಳಿದೆ. ಇದನ್ನೂ ಓದಿ: ಮಹಿಳೆಯರ ಚಪ್ಪಲಿ, 9 ಸೀರೆ ಜೊತೆ 10,000 ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಎಪಿಪಿ
