ಕಲಬುರಗಿ: ಇಲ್ಲಿನ (Kalaburagi) 5ನೇ JMFC ನ್ಯಾಯಾಲಯದ (Court) ಎಪಿಪಿ ಸಂತೋಷ್ ಕುಮಾರ್ ಲೋಖಂಡೆ ಲಂಚ ಪಡೆಯುವಾಗ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.
ಪ್ರಕರಣವೊಂದರಲ್ಲಿ ಕೋರ್ಟ್‌ಗೆ ರಾಜಿ ಅರ್ಜಿ ಸಲ್ಲಿಕೆ ವಿಚಾರವಾಗಿ ರಾಹುಲ್ ಹೈದರಾಬಾದ್ ಎಂಬವರ ಬಳಿ 10,000 ರೂ. ನಗದು, 9 ಸೀರೆಗಳು, 4 ಶರ್ಟ್, 4 ಲಂಡನ್ ಜಿನ್ಸ್ ಪ್ಯಾಂಟ್, 1 ಜೊತೆ ಶೂ, 4 ಮಹಿಳೆಯರ ಡ್ರೆಸ್, 6 ಜೊತೆ ಮಹಿಳೆಯರ ಚಪ್ಪಲ್‌ಗಾಗಿ ಬೇಡಿಕೆ ಇಟ್ಟಿದ್ದರು. ಅದರಂತೆ ದೂರುದಾರರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 5 ಲಕ್ಷ ಲಂಚಕ್ಕೆ ಕೈಯೊಡ್ಡಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ʻಲೋಕಾʼ ಬಲೆಗೆ
ಲೋಕಾಯುಕ್ತ ಇನ್ಸ್‌ಪೆಕ್ಟರ್ ಅರುಣ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದೇವರ ದರ್ಶನಕ್ಕೆಂದು ಕರೆದೊಯ್ದು ಪತಿಯ ಕೊಲೆ – ಪ್ರಿಯಕರನಿಗೆ ಲೈವ್ ಲೊಕೇಷನ್ ಕಳುಹಿಸಿದ್ದ ಪತ್ನಿ
