– ಹೊಸಬರಿಗೆ ಅವಕಾಶ ನೀಡುವಂತೆ ರಾಹುಲ್ ಗಾಂಧಿ ಸಲಹೆ
ಬೆಂಗಳೂರು: ಜುಲೈ 20ರ ವರೆಗೆ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಹೈಕಮಾಂಡ್ ಬ್ರೇಕ್ ಹಾಕಿದೆ. ಈ ಸಲ ಹೊಸಬರಿಗೆ ಅವಕಾಶ ನೀಡಬೇಕು. 60:40 ಫಾರ್ಮುಲಾ ಅನುಸರಿಸುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ.
ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು ನಡೆದಿದೆ. ರಾಜ್ಯ ನಾಯಕರು ನೀಡಿದ್ದ ಪಟ್ಟಿಯಲ್ಲಿರುವ ಅದೇ ಹಳೇ ಹೆಸರು ಕಂಡು ರಾಹುಲ್ ಗಾಂಧಿ (Rahul Gandhi) ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಹೊಸಬರಿಗೆ ಅವಕಾಶ ನೀಡಿ. 2ನೇ ಹಂತದ ಹೊಸ ನಾಯಕತ್ವಕ್ಕೆ ಆದ್ಯತೆ ನೀಡಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸಂಪುಟ ವಿಸ್ತರಣೆ ಪ್ರಾಥಮಿಕ ಚರ್ಚೆ; ಪ್ರತ್ಯೇಕ ಪಟ್ಟಿ ಕಳುಹಿಸಲು ಸಿಎಂ, ಮಾಜಿ ಸಿಎಂಗೆ ಸೂಚನೆ
40% ಹಿರಿಯ ಶಾಸಕರು ಮತ್ತು ಮಾಜಿ ಸಚಿವರಿಗೆ ಅವಕಾಶ ನೀಡಿ. ಬಾಕಿ 60% ಶಾಸಕರು ಹೊಸಬರು ಬೇಕೇ ಬೇಕು. ಒಮ್ಮೆಯೂ ಸಚಿವರಾಗದವರಿಗೆ ಅವಕಾಶ ಕೊಡಿ. ಸಮುದಾಯ, ಪ್ರಾದೇಶಿಕವಾರು ಆದ್ಯತೆ ನೀಡಿ. ಹೊಸ ಮುಖಗಳು 60 ವರ್ಷದೊಳಗಿರಲಿ. ಹಳೆಯ ಮುಖಗಳು 70-75 ವರ್ಷವಾದರೂ ಪರಿಗಣಿಸಿ. ಹಳೆಯ ರೆಡಿಮೆಡ್ ಫಾರ್ಮುಲಾ ಬೇಡ. ಪಟ್ಟಿ ಸಿದ್ಧಪಡಿಸಿ ಕಳಿಸಿಕೊಡಿ, ಚರ್ಚೆ ಮಾಡುತ್ತೇವೆ ಎಂದು ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಯುವ ನಾಯಕತ್ವಕ್ಕೆ ಆದ್ಯತೆ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಒಂದು ಅಥವಾ ಎರಡು ಬಾರಿ ಶಾಸಕರಾದವರಿಗೆ ಅವಕಾಶ ಬೇಡ. ಆರೇಳು ಬಾರಿ ಶಾಸಕರಾದವರು ಪಕ್ಷದಲ್ಲಿ ಮಂತ್ರಿಗಳಾಗಿಲ್ಲ. ಈ ನಡುವೆ 1-2 ಬಾರಿ ಶಾಸಕರಾದವರಿಗೆ ಅವಕಾಶ ಬೇಡ ಎಂದು ರಣದೀಪ್ ಸುರ್ಜೆವಾಲ ಹಾಗೂ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಅಗತ್ಯ ಅನಿಸಿದ್ದಲ್ಲಿ ಪ್ರಬಲ ಸಮುದಾಯದ 2-3 ಬಾರಿ ಶಾಸಕರಾದವರಿಗೆ ಆದ್ಯತೆ ನೀಡಬಹುದು. ಒಂದು ವೇಳೆ ಮೊದಲ ಬಾರಿಗೆ ಶಾಸಕರಾದವರ ಹೆಸರು ರಾಹುಲ್ ಗಾಂಧಿ ಸೂಚಿಸಿದರೆ ಈ ಬಗ್ಗೆ ತೀರ್ಮಾನಿಸಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಇ-ಸ್ವತ್ತು ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ: ಈಶ್ವರ್ ಖಂಡ್ರೆ
