ಟೆಹ್ರಾನ್: ಅಮೆರಿಕದ ಹಲವು ಜೆಟ್‌ಗಳನ್ನು (US Jets) ನಾಶಪಡಿಸಿದ್ದೇವೆ. ಮತ್ತೊಂದಷ್ಟು ಜೆಟ್‌ಗಳಿಗೆ ಗಂಭೀರ ಹಾನಿ ಮಾಡಲಾಗಿದೆ ಎಂದು ಇರಾನ್ (Iran) ಹೇಳಿಕೊಂಡಿದೆ.
ಇಸ್ಲಾಮಿಕ್ ಗಣರಾಜ್ಯದ ಹಲವು ಸ್ಥಳಗಳ ಮೇಲೆ ರಾತ್ರಿಯಿಡೀ ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಜೋರ್ಡಾನ್‌ನಲ್ಲಿ ನೆಲೆಗೊಂಡಿದ್ದ ಹಲವಾರು ಅಮೆರಿಕದ ಮಿಲಿಟರಿ ವಿಮಾನಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ. ಇದನ್ನೂ ಓದಿ: ಇರಾನ್ ಮೇಲೆ ಮತ್ತೆ ದಾಳಿ – ರೈಲು, ವಿಮಾನ ನಿಲ್ದಾಣ ಟಾರ್ಗೆಟ್ ಮಾಡಿ ಹೊಡೆದ ಅಮೆರಿಕ
ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು (IRGC), ಅಮೆರಿಕದ ಹಲವಾರು ಇಂಧನ ತುಂಬುವ ವಿಮಾನಗಳು ಮತ್ತು ಯುದ್ಧ ವಿಮಾನಗಳನ್ನು ನಾಶಪಡಿಸಿವೆ ಎಂದು ತಿಳಿಸಿದೆ.
ಇರಾನ್‌ಶಹರ್‌ನಲ್ಲಿ ಇರಾನಿನ ಸೈನಿಕರ ಹತ್ಯೆಗೆ ಪ್ರತೀಕಾರವಾಗಿ ಸಿರಿಯಾದ ಅಲ್-ತನ್ಫ್‌ನಲ್ಲಿರುವ ಅಮೆರಿಕದ ವಿಶೇಷ ಕಾರ್ಯಾಚರಣೆ ಕಮಾಂಡ್ ಕೇಂದ್ರದ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ಹೇಳಿದೆ. ಇದನ್ನೂ ಓದಿ: ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷ ಮಲಗಿರುವ ಫೋಟೊ; ‘ಟ್ರಂಪ್ ಕೊಲ್ಲುತ್ತೇವೆ’ ಎಂದ ಇರಾನ್
ಈ ನಡುವೆ, ಸಿರಿಯಾ, ಜೋರ್ಡಾನ್ ಮತ್ತು ಇರಾಕ್‌ಗಳ ತ್ರಿ-ಗಡಿ ಸಂಗಮದಲ್ಲಿರುವ ಅಲ್-ತನ್ಫ್ ನೆಲೆಯಿಂದ ತನ್ನ ಸೈನಿಕರನ್ನು ಹಿಂತೆಗೆದುಕೊಳ್ಳುವಿಕೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಿರುವುದಾಗಿ ಯುಎಸ್ ಸೇನೆ ತಿಳಿಸಿದೆ.
