ಟೆಹ್ರಾನ್: ಇಲ್ಲಿನ ಎಂಗೆಲಾಬ್ ಚೌಕದಲ್ಲಿ ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷ ಮಲಗಿರುವ ಚಿತ್ರಕ್ಕೆ ‘ನಾವು ಡೊನಾಲ್ಡ್ ಟ್ರಂಪ್ ಕೊಲ್ಲುತ್ತೇವೆ’ ಎಂದು ಕ್ಯಾಪ್ಷನ್ ನೀಡಿರುವ ಫೋಟೊ ವೈರಲ್ ಆಗಿದೆ.
ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಕೊಲ್ಲಲು ಇರಾನ್ (Iran) ಸಂಚು ರೂಪಿಸಿದೆ. ಎಂಗೆಲಾಬ್ ಚೌಕದಲ್ಲಿ ಅಮೆರಿಕದ ಅಧ್ಯಕ್ಷರು ಶವಪೆಟ್ಟಿಗೆಯಲ್ಲಿ ಮಲಗಿರುವ ಜಾಹೀರಾತು ಫಲಕ ಕಾಣಿಸಿಕೊಂಡಿದೆ. ಇದನ್ನೂ ಓದಿ: ಭಾರತದ ಮೇಲೆ 500% ಅಲ್ಲ 100% ಸುಂಕ ವಿಧಿಸುತ್ತಾ ಅಮೆರಿಕ?
ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಯುದ್ಧ ಪ್ರಾರಂಭವಾದಾಗಿನಿಂದ ಟ್ರಂಪ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದೆ.
ಇರಾನ್ ಬಹಳ ಹಿಂದಿನಿಂದಲೂ ಸಾರ್ವಜನಿಕ ಸ್ಥಳಗಳನ್ನು ರಾಜಕೀಯ ಸಂವಹನದ ಸಾಧನವಾಗಿ ಬಳಸುತ್ತಿದೆ. ಆದರೆ ಫೆಬ್ರವರಿ ಅಂತ್ಯದಲ್ಲಿ ಅಮೆರಿಕ-ಇಸ್ರೇಲಿ ಪಡೆಗಳ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ, ಕ್ರಾಂತಿಕಾರಿ ಚಿತ್ರಣ, ಯುದ್ಧ ಸ್ಮಾರಕಗಳು ಮತ್ತು ಸೈದ್ಧಾಂತಿಕ ಸಂದೇಶಗಳನ್ನು ಪ್ರತಿಬಿಂಬಿಸುವ ದೈತ್ಯ ಜಾಹೀರಾತು ಫಲಕಗಳನ್ನು ಇಸ್ಲಾಮಿಕ್ ಗಣರಾಜ್ಯದ ಹಲವು ಭಾಗಗಳಲ್ಲಿ ಅಳವಡಿಸಲಾಗಿದೆ. ಇದನ್ನೂ ಓದಿ: ಮೊಜ್ತಬಾ ಖಮೇನಿ 90% ಗಾನ್ – ಸಂಚಲನ ಸೃಷ್ಟಿಸಿದ ಟ್ರಂಪ್ ಹೇಳಿಕೆ
