ವಾಷಿಂಗ್ಟನ್/ಟೆಹ್ರಾನ್: ಅಮೆರಿಕ – ಇರಾನ್ ನಡುವಿನ ಯುದ್ಧದ ಸನ್ನಿವೇಶ ತೀವ್ರಗೊಂಡಿರುವ ಹೊತ್ತಿನಲ್ಲೇ ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ 90% ಗಾನ್ ಎನ್ನುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆ ಸಂಚಲನ ಸೃಷ್ಟಿಸಿದೆ.
ಮಾಧ್ಯಮವೊಂದಕ್ಕೆ ನೀಡ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ತನ್ನ ನೌಕಾಪಡೆ, ವಾಯುಪಡೆ, ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಉನ್ನತ ಮಿಲಿಟರಿ ಕಮಾಂಡರ್‌ಗಳನ್ನ ಕಳೆದುಕೊಂಡಿದೆ. ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ 90% ಗಾನ್ ಆಗಿದ್ದಾರೆ. ಸಂಘರ್ಷದ ಸಮಯದಲ್ಲಿ ಇರಾನ್‌ನ ಮಿಲಿಟರಿ (Iran’s Military) ಸಾಮರ್ಥ್ಯಗಳು ತೀವ್ರವಾಗಿ ದುರ್ಬಲಗೊಂಡಿವೆ. ಅವರ ಬಳಿ ಇನ್ನೇನೂ ಉಳಿದಿಲ್ಲ ಎಂದು ಹೇಳಿದ್ದಾರೆ.

ಟಾಪ್ ಲೀಡರ್‌ಗಳೇ ಇಲ್ಲ
ಇರಾನ್‌ನ ಟಾಪ್ ಲೀಡರ್‌ಗಳು ಕೊಲ್ಲಲ್ಪಟ್ಟಿದ್ದಾರೆ, ಆಯತೊಲ್ಲಾ ಅಲಿ ಖಮೇನಿ ಅವರ ಮಗ ಮೊಜ್ತಬಾ ಖಮೇನಿ 90% ಗಾನ್ ಆಗಿದ್ದಾರೆ. ವೈಮಾನಿಕ ದಾಳಿಯಲ್ಲಿ ಉಂಟಾದ ಗಾಯಗಳಿಂದ ಮೊಜ್ತಬಾ ಖಮೇನಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ತಿಂಗಳು ಇರಾನ್ ಮತ್ತು ಇರಾಕ್‌ನಲ್ಲಿ ನಡೆದ ಅವರ ತಂದೆಯ ಅಂತ್ಯಕ್ರಿಯೆ ಸಮಾರಂಭಗಳಿಗೂ ಅವರು ಗೈರಾಗಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆ ಮೊಜ್ತಬಾ ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರಾ ಅನ್ನೋದ್ರ ಬಗ್ಗೆ ಸಂಶಯ ಮೂಡಿಸಿದೆ.
