ಲಕ್ನೋ: ಗಂಡನ (Husband) ಮೇಲೆ ಆಸಿಡ್ ಎರಚಿದ (Acid Attack) ಮಹಿಳೆಗೆ ಉತ್ತರ ಪ್ರದೇಶದ (Uttara Pradesh) ಸಂಭಾಲ್ ಜಿಲ್ಲೆಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.75 ಲಕ್ಷ ದಂಡ ವಿಧಿಸಿದೆ.
ಕಹಕಂಶಾ (30) ಶಿಕ್ಷೆಗೆ ಗುರಿಯಾದ ಮಹಿಳೆ. ಈಕೆ 2025ರ ಮಾ. 7 ರಂದು ಪತಿ ಮುಜಾಫರ್ (35) ಮಲಗಿದ್ದ ವೇಳೆ ಹತ್ಯೆ ಮಾಡುವ ಉದ್ದೇಶದಿಂದ ಮುಖಕ್ಕೆ ಆಸಿಡ್ ಸುರಿದಿದ್ದಳು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಮತ್ತೆ ಮತ್ತೆ ಆತನ ಮೇಲೆ ಆಸಿಡ್ ದಾಳಿ ನಡೆಸಿದ್ದಳು. ಇದರಿಂದ ಮುಖ ಸಂಪೂರ್ಣವಾಗಿ ವಿರೂಪಗೊಂಡು ಎರಡೂ ಕಣ್ಣುಗಳ ದೃಷ್ಟಿಯನ್ನು ಆತ ಕಳೆದುಕೊಂಡಿದ್ದ. ಇದನ್ನೂ ಓದಿ: ಮಂಗಳೂರು| ಬುದ್ದಿಮಾತು ಹೇಳಿದ್ದಕ್ಕೆ ಚಿಕ್ಕಪ್ಪನನ್ನೇ ಬಿಯರ್ ಬಾಟಲಿಯಿಂದ ತಿವಿದು ಹತ್ಯೆ
ಚಂದೌಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಗೋಪಾಲ್ ಜಿ ಕಹಕಂಶಾಳನ್ನು ಮೇ 27 ರಂದು ದೋಷಿ ಎಂದು ಘೋಷಿಸಿತ್ತು. ಇಂದು (ಜೂ.1) ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಿದೆ.
ವಿವಾಹೇತರ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿ, ವಿಚ್ಛೇದನವನ್ನೂ ಬಯಸಿದ್ದರು. ಆಗಾಗ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಇದೇ ಕಾರಣಕ್ಕೆ ಪತ್ನಿ ದಾಳಿ ನಡೆಸಿದ್ದಳು. ನಖಾಸಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಸಿಟಿವಿಯಿಂದ ಪತ್ನಿ, ಅಪ್ರಾಪ್ತ ಪುತ್ರನ ಕ್ರೌರ್ಯ ಬಯಲು – ಇದಕ್ಕೇನಾ ಶವ ಸುಡಲು ಪಟ್ಟುಹಿಡಿದಿದ್ದು ವೀಣಾ?
