ಅಹಮದಾಬಾದ್: ಇಡೀ ಕ್ರಿಕೆಟ್ ಜಗತ್ತು ಈಗ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ಮಾತನಾಡುತ್ತಿದೆ. ಐಪಿಎಲ್ 2026 ರ ಋತುವಿನಲ್ಲಿ ವಿಶ್ವದ ಅತ್ಯುತ್ತಮ ಆಟಗಾರರನ್ನೇ ಹಿಂದಿಕ್ಕಿ, 15ರ ಬಾಲಕ ಆರೆಂಜ್ ಕ್ಯಾಪ್ ಗೆದ್ದಿದ್ದಾನೆ. ಈ ಸೂಪರ್‌ಸ್ಟಾರ್ ಆಟಗಾರನ ಬಗ್ಗೆ ಎಬಿ ಡಿವಿಲಿಯರ್ಸ್ (AB de Villiers) ಜೊತೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದ ಬಳಿಕ ನಡೆದ ಸಮಾರಂಭದಲ್ಲಿ ಸೂರ್ಯವಂಶಿ ವೇದಿಕೆಯ ಮೇಲೆ ಬಂದಾಗ, ಕೊಹ್ಲಿ (Virat Kohli) ತಮ್ಮ ಮಾಜಿ ಆರ್‌ಸಿಬಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗೆ ಸೂರ್ಯವಂಶಿ ಕುರಿತು ಮಾತನಾಡಿದರು. ಆರೆಂಜ್ ಕ್ಯಾಪ್ ಗೆದ್ದ ಹುಡುಗನ ಬಗ್ಗೆ ಕೊಹ್ಲಿ ಹೇಳಿದ್ದನ್ನು ಎಬಿಡಿ ಬಹಿರಂಗಪಡಿಸಿದರು. ಇದನ್ನೂ ಓದಿ: ಹದಿಹರೆಯದ ಸೂಪರ್‌ಸ್ಟಾರ್ ಸೂರ್ಯವಂಶಿಗೆ ಕ್ರಿಕೆಟ್ ಬಗ್ಗೆ ಟಿಪ್ಸ್ ಕೊಟ್ಟ ಕಿಂಗ್ ಕೊಹ್ಲಿ
Virat Kohli × Vaibhav Sooryavanshi.
Defining the current era and shaping the next.#ViratKohli #RCBvsGT #IPLFinal pic.twitter.com/GhITcXZoly
— Football Trendz (@FootballTrendz_) June 1, 2026
‘ನಾನು ವಿರಾಟ್ ಜೊತೆ ಸ್ವಲ್ಪ ಹೊತ್ತು ಮಾತನಾಡಿದ್ದೆ. ವೈಭವ್ ಆರೆಂಜ್ ಕ್ಯಾಪ್ ಟ್ರೋಫಿ ಸ್ವೀಕರಿಸಲು ವೇದಿಕೆಯತ್ತ ಹೋದಾಗ ವಿರಾಟ್ ತನ್ನ ಹುಬ್ಬನ್ನು ಮೇಲಕ್ಕೆತ್ತಿ ಆತನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು. ಎಬಿ ಈ ಹುಡುಗ ಬಹಳ ವಿಶೇಷ. ಈತ ಚೆನ್ನಾಗಿ ಆಡಬಲ್ಲ ಎಂದು ಹೇಳಿದ್ರು’ ಅಂತ ಡಿವಿಲಿಯರ್ಸ್ ತಿಳಿಸಿದ್ದಾರೆ.
ಆರ್‌ಸಿಬಿ ಸತತ ಎರಡನೇ ಪ್ರಶಸ್ತಿ ಗೆಲ್ಲಲು 42 ಎಸೆತಗಳಲ್ಲಿ 75 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದ ಕೊಹ್ಲಿ ಬಗ್ಗೆ ಡಿವಿಲಿಯರ್ಸ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೈನಲ್‌ನಲ್ಲಿ ಜಿಟಿ ನಾಯಕ ಶುಭ್‌ಮನ್ ಗಿಲ್ ಮಾಡಿದ ತಪ್ಪುಗಳ ಬಗ್ಗೆಯೂ ಎಬಿಡಿ ಮಾತನಾಡಿದ್ದಾರೆ. ಇದನ್ನೂ ಓದಿ: ನನಗೂ ಟೆಸ್ಟ್ ಕ್ರಿಕೆಟ್ ಆಡೋ ಆಸೆಯಿದೆ ಎಂದ ಸೂರ್ಯವಂಶಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗ್ತಾರಾ ಬಿಗ್ ಹಿಟ್ಟರ್?
