ಅಹಮದಾಬಾದ್: ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ವಿರಾಟ್ ಕೊಹ್ಲಿ (Virat Kohli), ಬಾಲಕ ಸೂಪರ್‌ಸ್ಟಾರ್ ವೈಭವ್ ಸೂರ್ಯವಂಶಿ (Vaibhav Sooryavanshi) ಭೇಟಿಯಾಗಿ ಕ್ರಿಕೆಟ್ ಬಗ್ಗೆ ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ.
ಈ ಋತುವಿನಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ ಸೂರ್ಯವಂಶಿಗೆ ಐದು ಪ್ರಶಸ್ತಿಗಳು ಒಲಿದು ಬಂದವು. ಪಂದ್ಯದ ಬಳಿಕ ಸೂರ್ಯವಂಶಿಯನ್ನು ಕಿಂಗ್ ಕೊಹ್ಲಿ ಭೇಟಿಯಾದರು. 15ರ ಪೋರನ ಹೆಗಲ ಮೇಲೆ ಕೈ ಹಾಕಿ ಕ್ರಿಕೆಟ್ ಕುರಿತು ಒಂದಷ್ಟು ಸಲಹೆ ಸೂಚನೆಗಳನ್ನು ಕೊಹ್ಲಿ ನೀಡಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸ್ಫೋಟಕ ಅರ್ಧಶತಕದ ಬಗ್ಗೆ ಪ್ರಶ್ನೆ – ಹೆಸರು ಹೇಳದೇ ಸೂರ್ಯವಂಶಿ ಆಟ ಪ್ರಸ್ತಾಪಿಸಿ ಉತ್ತರ ಕೊಟ್ಟ ಕೊಹ್ಲಿ
ಸೂರ್ಯವಂಶಿಗೆ ಕೊಹ್ಲಿ ಏನು ಟಿಪ್ಸ್ ಕೊಟ್ಟಿದ್ದಾರೆಂಬುದು ಕೇಳಿಬಂದಿಲ್ಲ. ಆದರೆ, ಬಾಲಕನಿಗೆ ತನ್ನ ವೃತ್ತಿ ಜೀವನದಲ್ಲಿ ಸಾಧನೆಯತ್ತ ಗಮನವನ್ನು ಹೆಚ್ಚು ಕೇಂದ್ರೀಕರಿಸುಂತೆ ಸಲಹೆ ನೀಡಿದ್ದಾರೆನ್ನಲಾಗಿದೆ. ಕೊಹ್ಲಿ ಮಾತುಗಳು ಕೇಳಿಸದಿದ್ದರೂ, ಅವರ ಸನ್ನೆಗಳು ಎಲ್ಲವನ್ನೂ ಹೇಳುತ್ತಿದೆ. ಕ್ರಿಕೆಟ್ ದಿಗ್ಗಜ ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಂಡ ಬಳಿಕ ಸೂರ್ಯವಂಶಿ ‘ಆಯ್ತು’ ಎಂದು ಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ.
Anyone can tell what conversation is going between them.
❝ 𝙁𝙤𝙘𝙪𝙨 𝙍𝙠𝙝𝙤 𝙎𝙖𝙗 𝙎𝙚𝙩 𝙍𝙖𝙝𝙚𝙜𝙖❞#ViratKohli #Sooryavanshi #RCBvsGT pic.twitter.com/w4rStA2S46— Pardєєp ӄumar ( प्रदीप कुमार )☣ (@NomadTrending) May 31, 2026
ಗುಜರಾತ್ ಟೈಟನ್ಸ್‌ನ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಫೈನಲ್‌ನಲ್ಲಿ ಕ್ರಮವಾಗಿ 10, 12 ರನ್ ಗಳಿಸಿ ಔಟಾದ್ದರಿಂದ ಸೂರ್ಯವಂಶಿ ಅಧಿಕೃತವಾಗಿ ಆರೆಂಜ್ ಕ್ಯಾಪ್ ವಿಜೇತರಾದರು. ರಾಜಸ್ಥಾನ್ ರಾಯಲ್ಸ್‌ನ ಆರಂಭಿಕ ಆಟಗಾರ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ದಾಖಲೆ ಬರೆದಿದ್ದಾರೆ. ಆ ಮೂಲಕ ಸುದರ್ಶನ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 2025ರಲ್ಲಿ ಸಾಯಿ ಸುದರ್ಶನ್ 23 ವಯಸ್ಸಿಗೆ ಆರೆಂಜ್ ಕ್ಯಾಪ್ ಧರಿಸಿದ್ದ ಅತಿ ಕಿರಿಯ ಎಂಬ ದಾಖಲೆ ಬರೆದಿದ್ದರು. 2023ರಲ್ಲಿ ಶುಭಮನ್ ಗಿಲ್ ಹೊಂದಿದ್ದ ದಾಖಲೆಯನ್ನು ಸುದರ್ಶನ್ ಮುರಿದಿದ್ದರು.
ಸೂರ್ಯವಂಶಿ ಈ ಸೀಸನ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ 237.31 ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೇ, 72 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಕ್ರಿಸ್ ಗೇಲ್ (ಒಂದೇ ಆವೃತ್ತಿಯಲ್ಲಿ 59 ಸಿಕ್ಸರ್) ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಇದನ್ನೂ ಓದಿ: ನನಗೂ ಟೆಸ್ಟ್ ಕ್ರಿಕೆಟ್ ಆಡೋ ಆಸೆಯಿದೆ ಎಂದ ಸೂರ್ಯವಂಶಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗ್ತಾರಾ ಬಿಗ್ ಹಿಟ್ಟರ್?
ಕೊಹ್ಲಿ ದಾಖಲೆ ಬ್ರೇಕ್ ಅವಕಾಶ ಮಿಸ್
ಒಂದೇ ಋತುವಿನಲ್ಲಿ ನಾಲ್ಕು ಶತಕ ಸಿಡಿಸಿದ ಕೊಹ್ಲಿ ಅವರ ದಾಖಲೆ ಬ್ರೇಕ್ ಮಾಡುವ ಅವಕಾಶವನ್ನು ಸೂರ್ಯವಂಶಿ ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡರು. ಈ ಸೀಸನ್‌ನಲ್ಲಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ 97, ಎಲಿಮಿನೇಟರ್ ಮ್ಯಾಚ್‌ನಲ್ಲಿ 97, ಕ್ವಾಲಿಫೈಯರ್ 2 ಪಂದ್ಯದಲ್ಲಿ 96 ರನ್ ಗಳಿಸಿದ್ದ ವೈಭವ್ ಕೆಲವೇ ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. ಎಸ್‌ಆರ್‌ಹೆಚ್ ವಿರುದ್ಧ ಮಾತ್ರ ಅಬ್ಬರದ ಶತಕ ಸಿಡಿಸಿದರು.
