ಪತಿಯನ್ನು ಕಾನೂನು ಸಂಕಷ್ಟದಿಂದ ಪಾರುಮಾಡುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋಗುತ್ತಿರುವ ಪ್ರಕ್ರಿಯೆ ಮುಂದುವರೆದಿದೆ. ಚಿಕ್ಕಬಳ್ಳಾಪುರದ ಆದಿಯೋಗಿ ಕೇಂದ್ರಕ್ಕೆ ಇದೀಗ ವಿಜಯಲಕ್ಷ್ಮಿ ಭೇಟಿಕೊಟ್ಟಿದ್ದು ಅಲ್ಲಿನ ದೃಶ್ಯವನ್ನ ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಇದರೊಂದಿಗೆ ʻನಿನ್ನ ಚಿಂತೆಗಳನ್ನೆಲ್ಲ ಅವನಿಗೆ ಒಪ್ಪಿಸಿಬಿಡು, ಅವನ ಸಮಯದಲ್ಲಿ ನಂಬಿಕೆಯಿಡುʼ ಎಂದು ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ದರ್ಗಾಕ್ಕೂ ಭೇಟಿಕೊಟ್ಟಿದ್ದರು. ಹೀಗಾಗಿ ಪತಿಯ ಕಷ್ಟಗಳನ್ನ ಪಾರು ಮಾಡು ಎಂದು ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ವಿಜಯಲಕ್ಷ್ಮಿ ಭೇಟಿ ಕೊಡುವ ಕೆಲಸ ಮುಂದುವರೆಸುತ್ತಲೇ ಬಂದಿದ್ದಾರೆ. ಇದೀಗ ಆದಿಯೋಗಿ ಸ್ಥಳಕ್ಕೂ ಭೇಟಿ ಕೊಟ್ಟಿರುವುದು ಗಮನಾರ್ಹ.

