ಪಾಟ್ನಾ: ನಿತೀಶ್ ಸೇತು (Nitish Setu) ಉದ್ಘಾಟನೆಗೆ ತೇಜಸ್ವಿ ಯಾದವ್ (Tejaswi Yadav) ಅವರನ್ನು ಆಹ್ವಾನಿಸಲಿಲ್ಲ ಎಂದು ಆಕ್ರೋಶಗೊಂಡಿಡು ಮೋದಿ (PM Modi) ಫ್ಲೆಕ್ಸ್ ಹರಿದ ಮೂವರನ್ನು ರುಸ್ತಂಪುರ ಪೊಲೀಸರು (Rustampur police) ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಧೀರಜ್ ಕುಮಾರ್, ಪ್ರಮೋದ್ ಕುಮಾರ್ ಹಾಗೂ ಗೌತಮ್ ಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:‘ನಿತೀಶ್ ಸೇತು’ ಉದ್ಘಾಟನೆಗೆ ತೇಜಸ್ವಿ ಯಾದವ್ ಆಹ್ವಾನ ಕೊಟ್ಟಿಲ್ಲ ಅಂತ ಮೋದಿ ಫ್ಲೆಕ್ಸ್ ಹರಿದು RJD ಕಾರ್ಯಕರ್ತರ ಆಕ್ರೋಶ
ನ.21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ (Bihar) ವೈಶಾಲಿ ಜಿಲ್ಲೆಯ ನಿತೀಶ್ ಸೇತುವೆಯನ್ನು ಉದ್ಘಾಟಿಸಿದ್ದರು. ಪ್ರಧಾನಿ ಅವರು ಅಲ್ಲಿಂದ ನಿರ್ಗಮಿಸಿದ ಬಳಿಕ, ಆರ್ಜೆಡಿ ಬೆಂಬಲಿಗರು (RJD Supporters) ಸೇತುವೆಯ ಮೇಲೆ ಭಾರಿ ಗದ್ದಲ ಎಬ್ಬಿಸಿ ದಾಂಧಲೆ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿ, ಬಿಹಾರ ಸಿಎಂ ಸಾಮ್ರಾಟ್ ಚೌಧರಿ ಹಾಗೂ ಇತರ ಎನ್ಡಿಎ ನಾಯಕರ ಪೋಸ್ಟರ್ಗಳನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 11 ಮಂದಿಯ ಹೆಸರು ಉಲ್ಲೇಖಿಸಿ ಮತ್ತು 100-150 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಘೋಪುರ ಬ್ಲಾಕ್ ಪ್ರದೇಶದ ದೃಶ್ಯಾವಳಿಗಳನ್ನು ಆಧರಿಸಿ ರುಸ್ತಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಮೋದಿ ಭೇಟಿಯಾದ ನೇಪಾಳ ಪ್ರಧಾನಿ – ಭಾರತದಲ್ಲಿ ಸಾಂಪ್ರದಾಯಿಕ ಸ್ವಾಗತ
ಆರ್ಜೆಡಿ ಕಾರ್ಯಕರ್ತರ ಆಕ್ರೋಶ:
ರಾಜ್ಯ ವಿಧಾನಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ರಾಜ್ಯ ಸರ್ಕಾರದಲ್ಲಿದ್ದಾಗ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ರಾಘೋಪುರದ ನಿವಾಸಿಗಳು ಕಿಡಿಕಾರಿದ್ದರು.
ಆರ್ಜೆಡಿ ಧ್ವಜಗಳನ್ನು ಹಿಡಿದ ಕಾರ್ಯಕರ್ತರು ತೇಜಸ್ವಿ ಯಾದವ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ ಸೇತುವೆಯಾದ್ಯಂತ ಮೆರವಣಿಗೆ ನಡೆಸಿದ ದೃಶ್ಯದ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಲ್ಲದೇ ಬ್ಯಾನರ್ಗಳನ್ನು ಹರಿದುಹಾಕಿ ಗದ್ದಲ ಸೃಷ್ಟಿಸಿ, ಬಿಜೆಪಿ ಧ್ವಜಗಳನ್ನು ಬೀಳಿಸಿ ತುಳಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕೆಟ್ಟ ಹವಾಮಾನ – ಪುಣೆಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನ ಲಕ್ನೋನಲ್ಲಿ ತುರ್ತು ಭೂಸ್ಪರ್ಶ
