– 187 ಪ್ರಯಾಣಿಕರು ಸೇರಿ 198 ಮಂದಿ ಸೇಫ್
ಲಕ್ನೋ: ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಪುಣೆಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಯೋ ವಿಮಾನ (Pune Patna IndiGo Flight) ಲಕ್ನೋ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂದು (ಸೋಮವಾರ) ನಸುಕಿನ ಜಾವ 2.45ರ ಸುಮಾರಿಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ.
187 ಪ್ರಯಾಣಿಕರು, 5 ಶಿಶುಗಳು ಸೇರಿ ಒಟ್ಟು 198 ಮಂದಿಯನ್ನು ಹೊತ್ತ 6E 653 ಸಂಖ್ಯೆ ವಿಮಾನವು ಪುಣೆಯಿಂದ ಪಾಟ್ನಾಗೆ ಹೊರಟಿತ್ತು. ಪಾಟ್ನಾದಲ್ಲಿ ಪ್ರತಿಕೂಲ ಹವಾಮಾನ (Bad Weather) ಹಾಗೂ ಕಡಿಮೆ ಗೋಚರತೆಯಿಂದ ಲ್ಯಾಂಡಿಂಗ್ಗೆ ಅನುಮತಿ ನಿರಾಕರಿಸಲಾಗಿತ್ತು. ಹೀಗಾಗಿ ಕೂಡಲೇ ವಿಮಾನವನ್ನ ಲಕ್ನೋಗೆ ಡೈವರ್ಟ್ ಮಾಡಲಾಯಿತು.
ಇಂದು ನಸುಕಿನ ಜಾವ 2:45ರ ಸುಮಾರಿಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಕೆಳಗಿಳಿಸಲಾಯಿತು. ಜೊತೆಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗ: ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಹವಾಮಾನ ತಿಳಿಯಾದ ಬಳಿಕ ಬೆಳಗ್ಗೆ 8 ಗಂಟೆಗೆ ಅದೇ ವಿಮಾನ ಪಾಟ್ನಾಗೆ ಪ್ರಯಾಣ ಬೆಳೆಸಿತು.
