ಅಹಮದಾಬಾದ್: 19ನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟ್ರೋಫಿ ಗೆಲ್ಲುವುದರೊಂದಿಗೆ ಮುಕ್ತಾಯಗೊಂಡಿದೆ. ಈ ಬಾರಿಯ ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಜಾಗತಿಕ ಕ್ರಿಕೆಟ್ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಹೊಡಿ-ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಸೂರ್ಯವಂಶಿ ಅವರನ್ನು ಭಾರತ ತಂಡದಲ್ಲಿ ನೋಡುವುದು ಯಾವಾಗ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಐಪಿಎಲ್ ಫೈನಲ್ (IPL Final) ಪಂದ್ಯ ಮುಗಿದ ಬಳಿಕ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಜೊತೆ ಮಾತನಾಡಿರುವ ವೈಭವ್ ಸೂರ್ಯವಂಶಿ, ತಮಗೆ ಟೆಸ್ಟ್ ಕ್ರಿಕೆಟ್ ಆಡುವ ತೀವ್ರ ಬಯಕೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 41 ಕೋಟಿಯ ಬೌಲಿಂಗ್ ಬ್ರಿಗೇಡ್ ಸೂಪರ್ ಹಿಟ್: ಆರ್‌ಸಿಬಿಗೆ ಡಬಲ್ ಟ್ರೋಫಿ ತಂದುಕೊಟ್ಟ ಬೌಲರ್ಸ್
Looks Like Vaibhav Sooryavanshi got offended on Ashwin’s statement
-Ashwin said if you want to play red ball cricket you will have to hit on the ground
-Vaibhav replied I’m practicing for test cricket at this time nobody has seen my red ball game so pic.twitter.com/UCXTNRvPZo
— Gagan🐉 (@choudharyji_gen) June 1, 2026
ಈ ಸೀಸನ್‌ನಲ್ಲಿ ಆಡಿದ 16 ಪಂದ್ಯಗಳಿಂದ ವೈಭವ್ ಒಟ್ಟು 776 ರನ್ ಚಚ್ಚಿದ್ದಾರೆ. ಇದರಲ್ಲಿ 1 ಭರ್ಜರಿ ಶತಕ ಹಾಗೂ 5 ಆಕರ್ಷಕ ಅರ್ಧಶತಕಗಳು ಸೇರಿವೆ. ಟೂರ್ನಿಯುದ್ದಕ್ಕೂ ಇವರ ಬ್ಯಾಟ್‌ನಿಂದ 63 ಬೌಂಡರಿ ಹಾಗೂ 72 ಸಿಕ್ಸರ್‌ಗಳ ಮಳೆಯೇ ಹರಿದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿದ್ದ ವೈಭವ್, ಅದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 47 ಎಸೆತಗಳಲ್ಲಿ 96 ರನ್ ಬಾರಿಸಿ ಕೇವಲ 4 ರನ್‌ಗಳಿಂದ ಶತಕ ವಂಚಿತರಾಗಿದ್ದರು.
