– ಬಸವ ಮಂಟಪ ಪುಸ್ತಕ ಬಿಡುಗಡೆಯಲ್ಲಿ ಭಾಗಿಯಾಗಿದ್ದ ಶಂಕರ್ ಬಿದರಿ
ಬೆಂಗಳೂರು: ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಮಹಾದೇವ ಬಿದರಿ (Shankar Bidari) ಅವರು ಸಚಿವ ಎಂ.ಬಿ ಪಾಟೀಲ್ (MB Patil) ವಿರುದ್ಧ ಕಿಡಿಕಾರಿದ್ದಾರೆ.
ಬಸವ ಮಂಟಪ (Basava Mantapa) ಕೃತಿ ವಿವಾದ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂ.ಬಿ ಪಾಟೀಲ್ (MB Patil) ಅವರು ನನ್ನನ್ನ ಕೊಂಡಿಮಂಚಣ್ಣ ಅಂತಾರೆ. 72 ವರ್ಷದಿಂದ ನಾನು ಬಸವಣ್ಣನ ಸೇವೆ ಮಾಡುತ್ತಾ ಬಂದಿದ್ದೇನೆ. ನನ್ನ ಕನಸಿನಲ್ಲೂ ನಾನು ಬಸವಣ್ಣನ ವಿರುದ್ದ ಮಾತನಾಡಿಲ್ಲ. ನಾನು ಬಸವಣ್ಣರನ್ನ ಕೆಟ್ಟದಾಗಿ ಬಯಸಿದ್ರೇ ನಾನು ಶರಣರ ಸಾಕ್ಷಿಯಾಗಿ ನಾಶವಾಗ್ಲಿ. ಸಮಾಜ ಒಡೆದು ಸಮಾಜದ ನಾಯಕನಾಗಲು, ಮುಖ್ಯಮಂತ್ರಿ ಆಗಲು ಮಾತನಾಡಿದ್ದಾರೆ. ಅವರು ರಾಜಕೀಯ ಲಾಭಕ್ಕೆ ಮಾತನಾಡಿದ್ರೇ ಅವರು ಏನಾಗಬೇಕು ಅಂತ ಸಮಾಜ ನಿರ್ಧಾರ ಮಾಡ್ಲಿ ಎಂದಿದ್ದಾರೆ. ಇದನ್ನೂ ಓದಿ: ವಿಕಾರ, ವಿಕೃತ ಮನಸ್ಸುಳ್ಳವರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ – ಬಸವ ಮಂಟಪ ಕೃತಿಗೆ ಸಿದ್ದಗಂಗಾ ಶ್ರೀ ಖಂಡನೆ
ದೇವರು ಒಳ್ಳೆಯದನ್ನ ಮಾತನಾಡಲಿ ಎಂದು ಬಾಯಿಕೊಟ್ಟಿದ್ದಾನೆ. ಆದರೆ ಅವರು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಇಲ್ಲಿಯವರೆಗೆ ನಾನು ಅವರ ಬಗ್ಗೆ ಮಾತನಾಡಿಲ್ಲ. ನನ್ನ ಬಗ್ಗೆ ಮಾತನಾಡಿದ್ದಿಂದ ನಾನು ಮಾತನಾಡಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಪುಸ್ತಕದ ಬೆಳವಣಿಗೆ ನಡೆದಾಗ ನಾನು ಬೆಂಗಳೂರಲ್ಲಿ (Bengaluru) ಇರಲಿಲ್ಲ. ನ.15ರಂದು ನಡೆದ ಬಸವ ಮಂಟಪ ಪುಸ್ತಕ ಬಿಡುಗಡೆಗೆ ನಾನು ಹೋಗಿದ್ದೆ. ಆಗ ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ. 2017ರಲ್ಲಿ ಲಿಂಗಾಯತ, ವೀರಶೈವ ಅಂತ ಒಡೆಯುವ ಕೆಲಸ ಆಯ್ತು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಎರಡೂ ಒಂದೇ ಎಂದು ಹೇಳಿದ್ರು ಈ ಬಗ್ಗೆಯೇ ಅಂದು ನಾವು ಮಾತಾಡಿದ್ದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಈಗ ಏಷ್ಯಾದ 3ನೇ ಶಕ್ತಿಶಾಲಿ ರಾಷ್ಟ್ರ – ಪ್ರಧಾನಿ ಮೋದಿ 2ನೇ ಪ್ರಭಾವಿ ನಾಯಕ
ಈ ದೇಶದ ಕಾನೂನಿಗೆ ಒಳಪಟ್ಟು ಅವರವರ ಧರ್ಮ ಆಚರಣೆಗೆ ಅವಕಾಶವಿದೆ. ಯಾರೂ ಯಾವ ಧರ್ಮಕ್ಕೂ ಅಪಮಾನ ಮಾಡಬಾರದು. ಈ ಬಸವ ಮಂಟಪ ಕೃತಿಯಲ್ಲಿ ವೀರಶೈವ, ಲಿಂಗಾಯತ ಎರಡೂ ಒಂದೇ ಎನ್ನುವ ವಿಚಾರ ಇದೆ. ಇದೇ ಕಾರಣಕ್ಕೆ ನಾನು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿದು ಬಂದ ನಂತರ ಈ ರೀತಿ ಮಾತನಾಡಿದ್ದಾರೆ ಎಂದು ಗೊತ್ತಾಯ್ತು. ರವಿ ಹಂಜ್ ಯಾವುದೋ ಒಂದು ದಾಖಲೆ ಎಂದು ಈ ರೀತಿ ಅಪಾದನೆ ಮಾಡಿದ್ದಾರೆ. ರವಿ ಹಂಜ್ ಜಾಗ್ರತೆ ವಹಿಸಿಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದೇವೆ. ವೀರಶೈವ, ಲಿಂಗಾಯತ ಮಹಾಸಭಾ ರವಿ ಹಂಜ್ ಅವರನ್ನು ಖಂಡಿಸುತ್ತೆ. ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದ್ರಿಂದ ನಾನು ಉತ್ತರ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ನೀವು ಮಾಡಿಕೊಳ್ಳಿ. ನಿಮ್ಮ ಧರ್ಮ ನೀವು ಪಾಲನೆ ಮಾಡಿಕೊಳ್ಳಿ. ಬಡತನ, ಅನಕ್ಷರತೆ, ದಾರಿದ್ರ್ಯದ ಬಗ್ಗೆ ಮಾತಾಡಿ. ಅದನ್ನ ಬಿಟ್ಟು ಈ ರೀತಿ ಮಾತನಾಡಬೇಡಿ. ಬಸವಣ್ಣ ಅಂದ್ರೇ ನಾನು ಮುಂದಿರುತ್ತೇನೆ. ಬಸವಣ್ಣನ ತತ್ವಗಳು ಸಂವಿಧಾನದಲ್ಲಿ ಇವೆ. ಬಸವಣ್ಣ ಕೇವಲ ಲಿಂಗಾಯತದವ ಮಾತ್ರವಲ್ಲ, 800 ಕೋಟಿ ಜೀವರಾಶಿಗೆ ಬೇಕು. ಬಸವಣ್ಣನವರ ಬಗ್ಗೆ ಮಾತನಾಡಿದ್ದು, ಬರೆದಿದ್ದು ಘನಘೋರ ಅಪರಾಧ. ರವಿ ಹಂಜ್ಗೆ ಕಠಿಣ ಶಿಕ್ಷೆ ಆಗಬೇಕು. ನನಗೆ ಮಾತ್ರ ನಾನು ಶಾಪ ಹಾಕಿಕೊಂಡಿದ್ದೇನೆ. ನಾನು ಬಸವಣ್ಣ ವಿರುದ್ಧ ಮಾಡಿದ್ದರೆ, ಶಾಪ ತಟ್ಟಲಿ. ಅವರು ಮಾತನಾಡಿದ್ರೇ ಸಮಾಜ ನೋಡಲಿ. ನಾನು ಅವರಿಗೆ ಶಾಪ ಹಾಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸೌಜನ್ಯ ಪ್ರಕರಣ ಮರುತನಿಖೆ – SIT ಕಚೇರಿಗೆ ಬ್ಯಾಗ್ ತುಂಬಾ ದಾಖಲೆ ತಂದ ಗಿರೀಶ್ ಮಟ್ಟಣ್ಣನವರ್
