– ವಿರಾಟ್ ಸ್ಟೆಪ್‌ಗೆ ಅನುಷ್ಕಾ ಖುಷ್
– ಸಂಭ್ರಮದಲ್ಲಿ ಗಮನ ಸೆಳೆದ ವಿರಾಟ್ ಟೀ-ಶರ್ಟ್
ಐಪಿಎಲ್ (IPL) ಸೀಸನ್ 19ರ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್‌ಸಿಬಿ (RCB) ತಂಡ ಎರಡನೇ ಬಾರಿ ಕಪ್ ಗೆದ್ದಿದ್ದಕ್ಕೆ ವಿಶೇಷವಾಗಿ ಸಂಭ್ರಮಿಸಿದೆ. ಆರ್‌ಸಿಬಿ ಗೆಲುವಿನ ಸೆಲೆಬ್ರೇಷನ್‌ನ ಅಪರೂಪದ ಫೋಟೋಗಳನ್ನು ನಟಿ ಅನುಷ್ಕಾ ಶರ್ಮಾ (Anushka Sharma) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಾಗೂ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ಹಾಕಿಕೊಂಡಿದ್ದ ಟೀ-ಶರ್ಟ್ ಸಖತ್ ವೈರಲ್ ಆಗುತ್ತಿದೆ. ಅವರ ಟೀ-ಶರ್ಟ್ ಹಿಂದೆ ‘ಒನ್ ಫೆಲ್ಟ್ ನೈಸ್.. ವೀ ಡಿಟ್ ಇಟ್ ಟ್ವೈಸ್’ ಎಂದು ಬರೆಯಲಾಗಿತ್ತು. ಈ ಮೂಲಕ ಆರ್‌ಸಿಬಿ ತಂಡ ತನ್ನ ಎರಡನೇ ಗೆಲುವನ್ನು ಬಹಳ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದೆ. ಇದನ್ನೂ ಓದಿ: 19 ವರ್ಷ, 19 ಆವೃತ್ತಿ – ಆರ್‌ಸಿಬಿ ಸೋಲು-ಗೆಲುವಿನ ರೋಚಕ ಇತಿಹಾಸ!
𝗞𝗶𝗻𝗴 𝗞𝗼𝗵𝗹𝗶’𝘀 𝗺𝗮𝘀𝘁𝗲𝗿𝗰𝗹𝗮𝘀𝘀 𝗼𝗻 𝘁𝗵𝗲 𝗱𝗮𝗻𝗰𝗲 𝗳𝗹𝗼𝗼𝗿 😉
Pure vibes. Wholesome. And so much more. Anushka Sharma, thank you for being our Day 1. ❤️ pic.twitter.com/7Qmxxv6QtG
— Royal Challengers Bengaluru (@RCBTweets) June 1, 2026
ಆರ್‌ಸಿಬಿಯ ಐತಿಹಾಸಿಕ ಗೆಲುವಿನ ಬಳಿಕ ನಡೆದ ಸಂಭ್ರಮದ ಕ್ಷಣಗಳನ್ನು ಈ ಫೋಟೋದಲ್ಲಿ ಕಾಣಬಹುದಾಗಿದೆ. ಫೋಟೋ ಮತ್ತು ತಂಡದ ಆಟಗಾರರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆ ಸುರಿದಿದೆ.
ಇದರ ಜೊತೆಗೆ ಆರ್‌ಸಿಬಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಸಂಭ್ರಮದ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಂಭ್ರಮದಿಂದ ಡ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್‌ಗೆ ಐಸ್ ಕ್ಯೂಬ್ ಸುರಿದು ಸಂಭ್ರಮಿಸಿದ ಸಾಲ್ಟ್, ಡೇವಿಡ್
