ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗುಜರಾತ್ ಟೈಟಾನ್ಸ್ (GT) ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆದ್ದು ಈ ಬಾರಿಯೂ ಹಾಲಿ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡಿತು. ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ (Virat Kohli) 18ನೇ ಓವರ್‌ನ ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ತಂಡದ ಮುಡಿಗೇರಿಸಿದರು.
ಪಂದ್ಯ ಮುಗಿದ ಬಳಿಕ ಫಿಲ್ ಸಾಲ್ಟ್ (Phil Salt) ಸೇರಿದಂತೆ ಹಲವು ಆರ್‌ಸಿಬಿ ಆಟಗಾರರು ತಮ್ಮ ಮುಖ್ಯ ಕೋಚ್ ಆ್ಯಂಡಿ ಫ್ಲವರ್ (Andy Flower) ಅವರ ಮೇಲೆ ಐಸ್ ಕ್ಯೂಬ್ ಸುರಿದು ಐಸ್‌ಬಾತ್ ಮಾಡಿಸಿ ಸಂಭ್ರಮಾಚರಣೆ ಮಾಡಿದರು. ಕಳೆದ ಋತುವಿನ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಮಯಾಂಕ್ ಅಗರ್ವಾಲ್ ಅವರು ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ಐಸ್ ಬಾತ್ ಮಾಡಿಸಿದ್ದರು.
ಆರ್‌ಸಿಬಿಯ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಜಿಂಬಾಬ್ವೆ ತಂಡದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಹಾಗೂ ಮಾಜಿ ನಾಯಕ. 2023ರ ಆಗಸ್ಟ್‌ನಲ್ಲಿ ಆರ್‌ಸಿಬಿ ತಂಡದ ಕೋಚ್ ಆಗಿ ನೇಮಕವಾದ ಫ್ಲವರ್ ತಮ್ಮ ಅನುಭವವನ್ನು ತಂಡದ ಆಟಗಾರರಿಗೆ ಧಾರೆಯೆರೆದು ಅತ್ಯುತ್ತಮ ತರಬೇತಿ ನೀಡುವುದರ ಮೂಲಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಶ್ವದ ಹಲವು ತಂಡಗಳಿಗೆ ತರಬೇತುದಾರರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಇವರು ಎದುರಾಳಿಗಳನ್ನು ಮಣಿಸಲು ತಂತ್ರಗಾರಿಕೆ, ಯುವ ಆಟಗಾರರಿಗೆ ಒತ್ತಡ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಪ್ರೇರೇಪಿಸುತ್ತಿದ್ದಾರೆ. ಇಂಗ್ಲೆಂಡ್ ತಂಡದ ಕೋಚ್ ಆಗಿ ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ತಂಡವನ್ನು ಅಗ್ರಸ್ಥಾನಕ್ಕೇರಿಸಿದ್ದರು.
Look at the way Phil Salt and Tim David poured an ice bucket over Andy Flower during the victory celebrations. 😂
Virat Kohli giving flying kisses to Anushka after hitting the winning six. ❤️
Rajat Patidar and Krunal Pandya kissing the IPL trophy. 🏆 pic.twitter.com/mjmzeL5kZU
— Sonu (@Cricket_live247) May 31, 2026
ಕಿಂಗ್ ಕೊಹ್ಲಿ ಭರ್ಜರಿ ಆಟ:
ಗುಜರಾತ್ ನೀಡಿದ್ದ 156 ರನ್‌ಗಳ ಸಾಧರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ್ ಐಯ್ಯರ್ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿದರು. 16 ಎಸೆತಗಳಲ್ಲಿ 32 ರನ್ ಕಲೆಹಾಕಿದ ವೆಂಕಟೇಶ್ ಮಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಇತ್ತ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಚೇಸ್ ಮಾಸ್ಟರ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿದರು.
ವೆಂಕಟೇಶ್ ಅಯ್ಯರ್ ಔಟ್ ಆದ ಬಳಿಕ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ದೇವದತ್ ಪಡಿಕ್ಕಲ್ ಕೇವಲ 1 ರನ್‌ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಇತ್ತ ನಾಯಕ ರಜತ್ ಪಟಿದಾರ್ 13 ಎಸೆತಗಳಲ್ಲಿ 1 ಬೌಂಟರಿ ಹಾಗೂ 1 ಸಿಕ್ಸರ್‌ನೊಂದಿಗೆ 15 ರನ್ ಸಿಡಿಸಿ ಔಟ್ ಆದರು. ಕೃನಾಲ್ ಪಾಂಡ್ಯ ಅವರ ಬ್ಯಾಟ್‌ನಿಂದ ರನ್ ಬರಲಿಲ್ಲ. ಬಳಿಕ ಕೊಹ್ಲಿ ಜೊತೆಗೂಡಿದ ಟಿಮ್ ಡೇವಿಡ್ 17 ಎಸೆತಗಳಲ್ಲಿ 24 ರನ್ ಬಾರಿಸಿ ಅರ್ಷದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ಜಿತೇಶ್ ಶರ್ಮಾ 14 ಎಸೆತಗಳಲ್ಲಿ 11 ರನ್ ಬಾರಿಸಿ ತಂಡದ ಗೆಲುವಿಗೆ ಕೊಹ್ಲಿಯವರೊಂದಿಗೆ ಸಾಥ್ ನೀಡಿದರು. ಇದನ್ನೂ ಓದಿ: ಮುಂದಿನ ಬಾರಿ RCB ತವರು ಮೈದಾನ ಯಾವುದು?
Virat Kohli and Krunal Pandya were seen hugging each other joyfully in the middle after the completion of IPL 2025 final. At that very moment, Mayank Agarwal came in with a box of ice cubes and poured them over the two, giving them an ‘ice bath.’ 🧊 😅#ViratKohli #KrunalPandya… pic.twitter.com/HT5pjWPR2f
— InsideSport (@InsideSportIND) June 5, 2025
ವೈಫಲ್ಯ ಅನುಭವಿಸಿದ ಜಿಟಿ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಎದುರಾಳಿ ಗುಜರಾತ್ ತಂಡ ಆರ್‌ಸಿಬಿ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿತು. 8 ವಿಕೆಡ್ ನಷ್ಟಕ್ಕೆ ಕೇವಲ 155 ರನ್‌ಗಳನ್ನಷ್ಟೇ ಕಲೆಹಾಕಲು ಶಕ್ತವಾಯಿತು. ವಾಷಿಂಗ್ಟನ್ ಸುಂದರ್ ಒಬ್ಬರನ್ನು ಬಿಟ್ಟರೆ ಉಳಿದೆಲ್ಲಾ ಜಿಟಿ ಬ್ಯಾಟರ್‌ಗಳು ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಯನ್ ಕಡೆ ನಡೆದರು. ಟೂರ್ನಿಯುದ್ದಕ್ಕೂ ಜಿಟಿಗೆ ಉತ್ತಮ ಆರಂಭ ಒದಗಿಸಿದ್ದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ ಆರ್‌ಸಿಬಿ ಬೌಲರ್‌ಗಳ ಎದುರು ಮಂಡಿಯೂರಿತು.
ಜೋಶ್ ಬಟ್ಲರ್ ಹಾಗೂ ನಿಶಾಂತ್ ಸಿಂಧು ಕ್ರೀಸ್‌ನಲ್ಲಿ 26 ಎಸೆತಗಳಲ್ಲಿ 29 ರನ್‌ಗಳ ಜೊತೆಯಾಟ ಕಲೆಹಾಕಿ ಜಿಟಿಗೆ ಕಮ್‌ಬ್ಯಾಕ್ ಆಸೆ ಮೂಡಿಸಿದರು. ಬಳಿಕ ಕೃನಾಲ್ ಪಾಂಡ್ಯ ಅವರು ಈ ಬಟ್ಲರ್ ವಿಕೆಟ್ ಕಬಳಿಸುವ ಮೂಲಕ ಈ ಜೊತೆಯಾಟಕ್ಕೆ ಅಂತ್ಯ ಹಾಡಿದರು. ಇತ್ತ ರಾಸಿಕ್ ಸಲಾಂ ಜಿಟಿಯ ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನ ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾದರು.
