ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ (RCB) ತಂಡ ಗುಜರಾತ್ ಟೈಟನ್ಸ್(GT) ವಿರುದ್ಧ ಗೆದ್ದು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿ ಮುಂಬೈ ಹಾಗೂ ಚೆನ್ನೈ ದಾಖಲೆ ಸರಿಗಟ್ಟಿದೆ. ವಿರಾಟ್ ಕೊಹ್ಲಿ (Virat Kohli) ಅಮೋಘ ಅರ್ಧಶತಕ ಹಾಗೂ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಜತ್ ಪಾಟಿದಾರ್ ಪಡೆ ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಟ್ಟಿತು.
ಮುಂಬರುವ 20ನೇ ಐಪಿಎಲ್ ಸೀಸನ್‌ನಲ್ಲೂ ಆರ್‌ಸಿಬಿಯೇ ಕಪ್ ಗೆದ್ದು ಹ್ಯಾಟ್ರಿಕ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಲಿ ಎಂಬುದು ಅಭಿಮಾನಿಗಳ ಬಯಕೆ. ಈ ನಡುವೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದ ನವೀಕರಣಕ್ಕೆ ಮುಂದಾಗಿರುವುದರಿಂದ ಮುಂದಿನ ಐಪಿಎಲ್‌ನಲ್ಲಿ ಬೆಂಗಳೂರು ತಂಡಕ್ಕೆ ತವರಿನ ಮೈದಾನ ಯಾವುದು ಎನ್ನುವ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಐಪಿಎಲ್ ಫೈನಲ್ ಸೋಲಿನ ಬೆನ್ನಲ್ಲೇ ಮತ್ತೊಂದು ಆಘಾತ – ಬೆಂಕಿ ಅವಘಡದಿಂದ ಪಾರಾದ ಜಿಟಿ ತಂಡ

52 ವರ್ಷದ ಹಿಂದೆ ನಿರ್ಮಾಣವಾಗಿದ್ದ ಆರ್‌ಸಿಬಿಯ ಹೋಂ ಗ್ರೌಂಡ್ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಸದ್ಯದ 35,000 ಆಸನಗಳ ಸಾಮರ್ಥ್ಯವನ್ನು 55,000 ಆಸನಗಳಿಗೆ ಹೆಚ್ಚಿಸಲು ಕೆಎಸ್‌ಸಿಎ ನಿರ್ಧರಿಸಿದೆ. ಹೀಗಾಗಿ ಇಡೀ ಕ್ರೀಡಾಂಗಣವನ್ನು ಕೆಡವಿ ಹೊಸದಾಗಿ ನಿರ್ಮಿಸುವ ಅನಿವಾರ್ಯತೆ ಇದೆ. ಎಷ್ಟೇ ತ್ವರಿತವಾಗಿ ಕಾಮಗಾರಿ ನಡೆದರೂ ಸಂಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷ ಬೇಕಾಗಬಹುದು. ಈ ಹಿನ್ನೆಲೆ ಮುಂದಿನ ಆವೃತ್ತಿಗೆ ರಾಯ್ಪುರ ಅಥವಾ ಬೇರೆ ಪಿಚ್‌ಗಳನ್ನು ಆರ್‌ಸಿಬಿಯ ತವರು ಮೈದಾನವಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಲಕ್ಕಿ ಸ್ಟಾರ್ ಹೇಜಲ್‌ವುಡ್ – ಆಡಿದ 10 ಫೈನಲ್‌ಗಳಲ್ಲೂ ಗೆದ್ದು ಬೀಗಿದ ಆಸಿಸ್ ವೇಗಿ!
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎರಡು ಪಂದ್ಯಗಳಿಗೆ ರಾಯ್ಪುರವನ್ನು ತನ್ನ ತವರು ಕ್ರೀಡಾಂಗಣವನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಹಾಗಾಗಿ ಮುಂದಿನ ಸೀಸನ್‌ನಲ್ಲಿಯೂ ಆರ್‌ಸಿಬಿ ರಾಯ್ಪುರವನ್ನು ತವರು ಮೈದಾನವಾಗಿ ಮುಂದುವರೆಸುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೈಟೆಕ್ ಟಚ್ – 55 ಸಾವಿರ ಆಸನ ಸಾಮರ್ಥ್ಯ ಹೆಚ್ಚಿಸಲು ಯೋಜನೆ https://t.co/laGv9pL2vS#KSCA #ChinnaswamyStadium #Bengaluru #Karnataka #Cricket #IPL #RCB pic.twitter.com/1zsVfOVSug
— PublicTV (@publictvnews) May 22, 2026
