ಅಹಮದಾಬಾದ್: ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟಾನ್ಸ್ ತಂಡ (Gujarat Titans Players) ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಸಂಕಷ್ಟದಿಂದ ಪಾರಾಗಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿಸಿ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಗುಜರಾತ್ ಟೈಟನ್ಸ್ ತಂಡ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಇದರಿಂದ ಸುಮಾರು 1 ಗಂಟೆಗಳ ಕಾಲ ಆಟಗಾರರು ಬಸ್‌ನಲ್ಲೇ ಸಿಲುಕಿದ್ದಾರೆ. ಬಳಿಕ, ಆಟಗಾರರನ್ನ ಬೇರೆ ಬಸ್‌ಗೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಒತ್ತಡದ ಶೆಡ್ಯೂಲ್‌ನಲ್ಲೇ ಪ್ರಯಾಣಿಸಿದ್ದ ಜಿಟಿ!
ಪ್ಲೇಆಫ್ಸ್ ತಲುಪಿದಾಗಿನಿಂದ ಗುಜರಾತ್ ಟೈಟನ್ಸ್ ಪ್ರಯಾಣ ಅಷ್ಟೇನೂ ಸುಖಕರವಾಗಿರಲಿಲ್ಲ. ಒತ್ತಡದ ಶೆಡ್ಯೂಲ್‌ನಲ್ಲಿ ತಂಡ ಸಂಚರಿಸಿತ್ತು. ಮೇ 27 ರಂದು ಆರ್‌ಸಿಬಿ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯ ಸೋತ ಜಿಟಿ ಮೇ 29ಕ್ಕೆ 2ನೇ ಕ್ವಾಲಿಫೈಯರ್ ಆಡಲು ಮುಲ್ಲನಪುರಕ್ಕೆ ಬಂದಿತ್ತು. ಅಲ್ಲಿಯೂ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್‌ಗೇರಿತ್ತು. ಫೈನಲ್ ಆಡಲು ಅಹಮದಾಬಾದ್‌ಗೆ ಬರಬೇಕಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಪ್ರತಿಕೂಲ ವಾತಾವರಣ ಅಡ್ಡಿಯಾಗಿತ್ತು. ಹಾಗಾಗಿ, ಮೇ 30ರಂದು ರಾತ್ರಿ 10 ಗಂಟೆ ಸುಮಾರಿಗೆ ಜಿಟಿ ತಂಡ ಅಹಮದಾಬಾದ್ ತಲುಪಿತ್ತು. ಸತತ ಬಿಗ್ ಮ್ಯಾಚ್‌ಗಳನ್ನು ಎದುರಿಸಿದ ಗುಜರಾತ್ ತಂಡಕ್ಕೆ ಸೂಕ್ತ ವಿಶ್ರಾಂತಿ ಮತ್ತು ಅಭ್ಯಾಸಕ್ಕೆ ಸಮಯ ಸಿಕ್ಕಿಲ್ಲ ಎಂದು ವರದಿಗಳು ತಿಳಿಸಿವೆ.

ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 155 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ 18 ಓವರ್‌ಗಳಲ್ಲೇ 161 ರನ್ ಬಾರಿಸಿ ಚಾಂಪಿಯನ್ ಪಟ್ಟಕ್ಕೇರಿತು.
