ಅಹಮದಾಬಾದ್: ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್(Josh Hazlewood) ಫೈನಲ್ ಪಂದ್ಯದಲ್ಲಿ ಮೈದಾನಕ್ಕಿಳಿದರೆ ಆ ತಂಡಕ್ಕೆ ಅದೃಷ್ಟ ಒಲಿಯುತ್ತದೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.
ತಮ್ಮ ಉತ್ತಮ ಬೌಲಿಂಗ್ ಲಯ ಹಾಗೂ ಅದೃಷ್ಟದ ಬಲದಿಂದ ಜೋಶ್ ಹೇಜಲ್‌ವುಡ್ ಈವರೆಗೂ ತಮ್ಮ ವೃತ್ತಿಜೀವನದಲ್ಲಿ ಆಡಿದ ಎಲ್ಲಾ 10 ಪ್ರಮುಖ ಫೈನಲ್ ಪಂದ್ಯಗಳಲ್ಲೂ (Final Match) ಚಾಂಪಿಯನ್ (Champion) ಪಟ್ಟ ಅಲಂಕರಿಸಿ ಅಜೇಯ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: IPL Prize Money List | ಕಪ್ ಮೇಲೆ ಕಪ್ ಗೆದ್ದ RCB ಗೆ ಸಿಕ್ಕ ಬಹುಮಾನ ಎಷ್ಟು?

10 ಐತಿಹಾಸಿಕ ಪ್ರಶಸ್ತಿಗಳ ವಿವರ:
2010: ಅಂಡರ್-19 ವಿಶ್ವಕಪ್ ಚಾಂಪಿಯನ್
2012: ಚಾಂಪಿಯನ್ಸ್ ಲೀಗ್ ಟಿ20 (ಸಿಡ್ನಿ ಸಿಕ್ಸರ್ಸ್)
2015: ಐಸಿಸಿ ಏಕದಿನ ವಿಶ್ವಕಪ್ (ಆಸ್ಟ್ರೇಲಿಯಾ)
2020: ಬಿಗ್‌ಬ್ಯಾಶ್ ಲೀಗ್ ಟಿ20(ಸಿಡ್ನಿ ಸಿಕ್ಸರ್ಸ್)
2021: ಐಪಿಎಲ್ ಚಾಂಪಿಯನ್ (ಚೆನ್ನೈ ಸೂಪರ್ ಕಿಂಗ್ಸ್)
2021: ಐಸಿಸಿ ಟಿ20 ವಿಶ್ವಕಪ್ (ಆಸ್ಟ್ರೇಲಿಯಾ)
2023: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಆಸ್ಟ್ರೇಲಿಯಾ)
2023: ಐಸಿಸಿ ಏಕದಿನ ವಿಶ್ವಕಪ್ (ಆಸ್ಟ್ರೇಲಿಯಾ)
2025: ಐಪಿಎಲ್ ಚಾಂಪಿಯನ್
2026: ಪ್ರಸಕ್ತ ಸಾಲಿನ ಐಪಿಎಲ್ ಚಾಂಪಿಯನ್
ಕಳೆದ ವರ್ಷ ಹಾಗೂ ಈ ಬಾರಿಯ (2026) ಐಪಿಎಲ್ ಫೈನಲ್‌ನಲ್ಲೂ ಆರ್‌ಸಿಬಿ(RCB) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಹೇಜಲ್‌ವುಡ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ 13 ಪಂದ್ಯವಾಡಿದ ಹೇಜಲ್‌ವುಡ್ 15 ವಿಕೆಟ್ ಪಡೆದಿದ್ದಾರೆ. ದೆಹಲಿ ವಿರುದ್ಧ ಏಪ್ರಿಲ್ 27 ರಂದು ನಡೆದ ಲೀಗ್ ಪಂದ್ಯದಲ್ಲಿ ಅವರು 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಇದನ್ನೂ ಓದಿ: 15 ವರ್ಷಕ್ಕೆ 5 ಪ್ರಶಸ್ತಿ – 45 ಲಕ್ಷ ಕ್ಯಾಶ್ ಜೊತೆ ಸೂರ್ಯವಂಶಿಗೆ ಸಿಕ್ತು ಸಿಯೆರಾ ಕಾರು!
