– 80 ಕೆಜಿ ತೂಕದ ಡಮ್ಮಿ ಬಳಸಿ ಮರುಸೃಷ್ಟಿ
ಭೋಪಾಲ್: ಮಾಡೆಲ್, ನಟಿ ತ್ವಿಶಾ ಶರ್ಮಾ (Twisha Sharma) ನಿಗೂಢ ಸಾವು ಪ್ರಕರಣ ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಸಿಬಿಐ (CBI) ತನಿಖೆಯನ್ನು ತ್ರೀವಗೊಳಿಸಿದ್ದು, ಇಂದು (ಜೂ.1) ಪತಿ, ಅತ್ತೆಯನ್ನು ಮನೆಗೆ ಕರೆತಂದು ಅಪರಾಧ ದೃಶ್ಯವನ್ನು ಮರುಸೃಷ್ಟಿ ಮಾಡಿದ್ದಾರೆ.
ಭೋಪಾಲ್ (Bhopal) ಕಟಾರಾ ಹಿಲ್ಸ್ (Katara Hills) ಪ್ರದೇಶದಲ್ಲಿರುವ ಪತಿಯ ಮನೆಯಲ್ಲಿ ಡಮ್ಮಿಗಳನ್ನು ಬಳಸಿ ಅಪರಾಧ ದೃಶ್ಯ ಮರುಸೃಷ್ಟಿ ಮಾಡಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಸಿಬಿಐ ಕಸ್ಟಡಿಯಲ್ಲಿರುವ ತ್ವಿಶಾ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ಅನ್ನು ವಿಧಿವಿಜ್ಞಾನ ತಂಡದ ಸಹಾಯದಿಂದ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಘಟನೆ ನಡೆದ ದಿನ ಏನಾಯಿತು? ತ್ವಿಶಾ ಆತ್ಮಹತ್ಯೆಯ ನಂತರ ಏನಾಯಿತು ಎಂದು ವಿವರವಾಗಿ ಮರು-ಅಭಿನಯಿಸಿ ತೋರಿಸುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: Twisha Sharma Case | ಅತ್ತೆ ವಿಧಿವಿಜ್ಞಾನ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇದೆ – ಹೈಕೋರ್ಟ್

ತ್ವಿಶಾ ಶರ್ಮಾ ದೇಹದ ತೂಕಕ್ಕೆ ಸರಿಸಮನಾದ ಡಮ್ಮಿ ಬೊಂಬೆಯನ್ನು ಬಳಸಿ ತನಿಖಾಧಿಕಾರಿಗಳು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಿದರು. ಈ ಮೂಲಕ ಆರೋಪಿಗಳು ನೀಡಿದ ಹೇಳಿಕೆಗಳ ಸತ್ಯತೆಯನ್ನು ಪರಿಶೀಲಿಸುವುದು ಮತ್ತು ಸಾಯುವಾಗ ಏನೆಲ್ಲ ನಡೆಯಿತು ಎಂದು ನಿಮಿಷದಿಂದ ನಿಮಿಷಕ್ಕೆ ಘಟನಾವಳಿಗಳ ಟೈಮ್‌ಲೈನ್‌ಗಳನ್ನು ಸಿದ್ಧಪಡಿಸಲಾಗುತ್ತದೆ.
ಆಗಿದ್ದೇನು?
ಮೇ 12ರ ರಾತ್ರಿ ಸುಮಾರು 10:20ಕ್ಕೆ ತ್ವಿಶಾ ಮನೆಯಲ್ಲಿ ನೇಣಿಗೆ ಶರಣಾದರು. ನಂತರ ಅವರನ್ನು ಭೋಪಾಲ್‌ನ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಪತಿ ಸಮರ್ಥ್ ಸಿಂಗ್ ತಿಳಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಮೇ 13ರಂದು ಮಧ್ಯರಾತ್ರಿ 12:05ಕ್ಕೆ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ತ್ವಿಶಾ ಶರ್ಮಾ ಸಾವು ಕೇಸ್; ನಟಿಯ ಅತ್ತೆ & ನಿವೃತ್ತ ಜಡ್ಜ್ ಬಂಧನ
2025ರ ಡಿ.9ರಂದು ವಿವಾಹವಾದ ನಂತರ ತ್ವಿಶಾಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯ ಎಸಗಿದ್ದಾರೆ ಎಂದು ತ್ವಿಶಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಸಾವನ್ನಪ್ಪಿದ ದಿನ ರಾತ್ರಿ 9:41ಕ್ಕೆ ತ್ವಿಶಾ ತಮ್ಮ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಆ ಸಮಯದಲ್ಲಿ ಅವರ ಪತಿ ಜೋರಾಗಿ ಕಿರುಚಾಡುತ್ತಿರುವುದು ಕೇಳಿಸಿತ್ತು ಮತ್ತು ಅಷ್ಟರಲ್ಲೇ ಫೋನ್ ಕರೆ ಕೂಡ ಕಟ್ ಆಗಿತ್ತು. ಬಳಿಕ ತ್ವಿಶಾ ಕುಟುಂಬಸ್ಥರು ಸತತವಾಗಿ ಕರೆ ಮಾಡಿದಾಗ, ಒಮ್ಮೆ ಕಾಲ್ ರಿಸೀವ್ ಮಾಡಿದ ಅತ್ತೆ, ತ್ವಿಶಾ ಸಾವನ್ನಪ್ಪಿರುವುದಾಗಿ ಹೇಳಿ, ಕಟ್ ಮಾಡಿದ್ದರು ಎಂದು ತಿಳಿಸಿದ್ದಾರೆ,

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿದ್ದರೂ ಕೂಡ ದೇಹದ ಇತರ ಭಾಗಗಳ ಮೇಲೆ ಹಲ್ಲೆ ನಡೆಸಿದ ಗಾಯದ ಗುರುತುಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ತ್ವಿಶಾ ಕುಟುಂಬಸ್ಥರ ಹೇಳಿಕೆಗಳ ಆಧಾರದ ಮೇಲೆ ಮೇ 15ರಂದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.ಇದನ್ನೂ ಓದಿ: 20 ಲಕ್ಷ ಮೌಲ್ಯದ ಷೇರಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಅತ್ತೆ ನಿವೃತ್ತ ಜಡ್ಜ್?
