– ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಹೈಕೋರ್ಟ್
– ತ್ವಿಶಾ ಮೃತ ದೇಹದ ಕೈ, ಬೆರಳು ಮತ್ತು ತಲೆಯ ಮೇಲೆ ಆರು ಗಾಯಗಳು ಪತ್ತೆ
ಭೋಪಾಲ್: ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಅತ್ತೆ ಹಾಗೂ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಹಾಗೂ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಪಡಿಸಿದೆ.
33 ವರ್ಷದ ತ್ವಿಶಾ ಶರ್ಮಾ 2025ರ ಡಿಸೆಂಬರ್ 9ರಂದು ವಕೀಲ ಸಮರ್ಥ್ ಸಿಂಗ್‌ರನ್ನು ಮದುವೆಯಾಗಿದ್ದರು. ಮದುವೆಯಾದ ಐದು ತಿಂಗಳಲ್ಲೇ, 2026ರ ಮೇ 12ರಂದು ಭೋಪಾಲ್‌ನಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಹಿಂದುಳಿದವರಿಗೆ ನಂಬಿಕೆ ದ್ರೋಹ – ಬೊಮ್ಮಾಯಿ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ, ಕೆಳ ನ್ಯಾಯಾಲಯವು ಪ್ರಮುಖ ಸಾಕ್ಷ್ಯಗಳನ್ನು ಪರಿಗಣಿಸದೇ ಜಾಮೀನು ನೀಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ: ಡಿಕೆಶಿಗೆ ಅಜ್ಜಯ್ಯ ಸೂಚನೆ
ವಾಟ್ಸಾಪ್ ಚಾಟ್‌ಗಳು ಮತ್ತು ಸಾಕ್ಷಿದಾರರ ಹೇಳಿಕೆಗಳ ಪ್ರಕಾರ, ತ್ವಿಶಾಳಿಗೆ ಗರ್ಭಧಾರಣೆ ವಿಚಾರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಗರ್ಭದಲ್ಲಿದ್ದ ಮಗುವಿನ ಪಿತೃತ್ವದ ಬಗ್ಗೆ ಪತಿ ಮತ್ತು ಮನೆಯವರು ಅನುಮಾನ ವ್ಯಕ್ತಪಡಿಸಿದ್ದರ ಜೊತೆಗೆ ಗರ್ಭಪಾತಕ್ಕೆ ಒತ್ತಡ ಹೇರಲಾಗುತ್ತಿತ್ತು ಎಂದು 17 ಪುಟಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್: ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ
ನಾನು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದೇನೆ. ಇಲ್ಲಿ ಶಾಂತಿಯಿಂದ ಬದುಕಲು, ಅಳಲು ಕೂಡ ಅವಕಾಶ ಇಲ್ಲ ಎಂದು ತ್ವಿಶಾ ತಮ್ಮ ಕುಟುಂಬದವರಿಗೆ ಹೇಳಿದ್ದರು ಕೋರ್ಟ್ ಹೇಳಿದೆ. ಇದನ್ನೂ ಓದಿ: ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ: ಕಾಂಗ್ರೆಸ್ ಟ್ವೀಟ್
ಮರಣೋತ್ತರ ಪರೀಕ್ಷೆಯಲ್ಲಿ ತ್ವಿಶಾ ದೇಹದ ಮೇಲೆ ನೇಣು ಬಿಗಿದ ಗುರುತುಗಳ ಜೊತೆಗೆ ಕೈ, ಬೆರಳು ಮತ್ತು ತಲೆಯ ಮೇಲೆ ಆರು ಗಾಯಗಳು ಪತ್ತೆಯಾಗಿವೆ. ಈ ಗಾಯಗಳು ಮೃತದೇಹ ಕೆಳಗಿಳಿಸುವಾಗ ಅಥವಾ ಆಸ್ಪತ್ರೆಗೆ ಸಾಗಿಸುವಾಗ ಆಗಿರುವುದಲ್ಲ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ರಾಜೀನಾಮೆ ಬೆಂಗಳೂರಿನಲ್ಲಿ – ನೋವು ಕೇಳಿಸಿದ್ದು ಸಿದ್ದರಾಮನಹುಂಡಿಯಲ್ಲಿ!
ಸೈಬರ್ ಕ್ರೈಂ ಮತ್ತು ವಿಧಿ ವಿಜ್ಞಾನ ವಿಷಯದಲ್ಲಿ ಪರಿಣಿತಿ ಹೊಂದಿರುವ ಗಿರಿಬಾಲಾ ಸಿಂಗ್ ಅವರು ತಮ್ಮ ಅನುಭವ ಬಳಸಿ ಸಾಕ್ಷ್ಯ ನಾಶ ಮಾಡುವ ಅಥವಾ ತನಿಖೆಯ ದಿಕ್ಕು ಬದಲಿಸುವ ಸಾಧ್ಯತೆ ಇದೆ ಎಂಬ ಕುಟುಂಬಸ್ಥರ ಆರೋಪವನ್ನೂ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಇದಲ್ಲದೆ, ಮನೆಯ ಸಿಸಿಟಿವಿ ದೃಶ್ಯಾವಳಿಗಳ ಕೆಲವು ಭಾಗಗಳನ್ನು ಮಾತ್ರ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. ಇದು ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ ಮೋದಿ, ರಾಷ್ಟ್ರಪತಿ
ಪೊಲೀಸರು ಹಲವು ಬಾರಿ ನೋಟಿಸ್ ನೀಡಿದರೂ ಗಿರಿಬಾಲಾ ಸಿಂಗ್ ತನಿಖೆಗೆ ಸಂಪೂರ್ಣ ಸಹಕರಿಸಲಿಲ್ಲ. ಬದಲಾಗಿ ಮಾಧ್ಯಮಗಳ ಮುಂದೆ ತ್ವಿಶಾಳ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಪ್ರಕರಣದ ಗಂಭೀರತೆ, ವರದಕ್ಷಿಣೆ ಕಿರುಕುಳ, ಗರ್ಭಪಾತದ ಒತ್ತಡ ಹಾಗೂ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ನಿರೀಕ್ಷಣಾ ಜಾಮೀನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ಮೇ 15ರಂದು ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿದೆ. ಇದನ್ನೂ ಓದಿ: ಆರ್‌ಸಿಬಿ ಪಂದ್ಯದಲ್ಲಿ ಅನುಷ್ಕಾ ಧರಿಸಿದ್ದ ಉಂಗುರ ವೈರಲ್ ಆಗ್ತಿರೋದೇಕೆ? – ಡಿವೈಸ್ ವಿಶೇಷತೆ ಏನು?
