ತುಮಕೂರು: ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ನೊಣವಿನಕೆರೆ ಅಜ್ಜಯ್ಯ (Nonavinakere Ajjayya) ಸಲಹೆ ಕೊಟ್ಟಿದ್ದಾರೆ. ಅಜ್ಜಯ್ಯನ ಸೂಚನೆಯಂತೆ ಡಿಕೆ ಶಿವಕುಮಾರ್ ಮೌನ ವಹಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಯಾವುದೇ ಮಾತನಾಡದಂತೆ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಎಚ್ಚರಿಕೆ ಕೊಟ್ಟಿದ್ದಾರೆ. ಮಾತಾಡಿದರೆ ಮುತ್ತು ಒಡೆದು ಹೋಗಲಿದೆ. ಅರ್ಥಾತ್ ಕೆಲಸ ಕೆಡಲಿದೆ ಎಂಬ ಸಂದೇಶವನ್ನು ಶ್ರೀಗಳು ಡಿಕೆಶಿಗೆ ಕೊಟ್ಟಿದ್ದಾರೆ. ಹಾಗಾಗಿ ಡಿಕೆಶಿ ಬೆಂಬಲಿಗರಿಗೂ ಯಾವುದೇ ಹೇಳಿಕೆ ಕೊಡದಂತೆ ತಾಕೀತು ಮಾಡಲಾಗಿದೆ. ಈ ಹಿನ್ನೆಲೆ ಡಿಸಿಎಂ ಡಿಕೆಶಿ ಬ್ರೇಕ್‌ಫಾಸ್ಟ್ ಸಭೆ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್: ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ
ಮುಖ್ಯಮಂತ್ರಿಯಾಗಿ ಪದಗ್ರಹಣಕ್ಕೂ ಮುನ್ನ ಡಿಸಿಎಂ ಡಿಕೆಶಿಯವರನ್ನ ಭೇಟಿಯಾಗುವ ಸಲುವಾಗಿ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಬೆಂಗಳೂರಿನತ್ತ ಹೊರಟಿದ್ದಾರೆ. ಬೆಂಗಳೂರಿನ ಮಠದಲ್ಲೇ ಡಿಕೆಶಿ ಸ್ವಾಮೀಜಿಯವರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ: ಕಾಂಗ್ರೆಸ್ ಟ್ವೀಟ್
ಇದಕ್ಕೂ ಮೊದಲು ದೆಹಲಿಗೆ ಹೋಗುವ ಮುನ್ನ ಡಿಸಿಎಂ ಡಿಕೆಶಿ ಒಂದೇ ದಿನ ಎರಡು ಬಾರಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದು ಆಶೀರ್ವಾದ ಪಡೆದಿದ್ದರು. ಅಜ್ಜಯ್ಯನ ಅಪ್ಪಣೆ ಪಡೆಯದೇ ನಾನು ಯಾವ ಕೆಲಸವನ್ನೂ ಮಾಡಲ್ಲ ಎಂದು ಈ ಹಿಂದೆ ಡಿಕೆಶಿ ಹಲವು ಬಾರಿ ಹೇಳಿದ್ದರು. ಇದನ್ನೂ ಓದಿ: ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಕೆಶಿ ಮನವಿ
