ಬೆಂಗಳೂರು: ಟಿ.ದಾಸರಹಳ್ಳಿಯ (Dasarahalli) ಬಾಗಲಗುಂಟೆ ಹಾವನೂರು ಬಡಾವಣೆಯಲ್ಲಿ ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ.
ಅಸ್ಥಿಪಂಜರ 50 ವರ್ಷ ವಯಸ್ಸಿನ ದಾಕ್ಷಾಯಿಣಿ ಅವರದ್ದು ಎಂದು ಗುರುತಿಸಲಾಗಿದೆ. ಮೃತಪಟ್ಟು ಒಂದೂವರೆ ವರ್ಷವಾದರೂ ಗೊತ್ತಾಗಿರಲಿಲ್ಲ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಕೇಸ್; ಆರೋಪಿ ಕಾಲಿಗೆ ಗುಂಡೇಟು
10 ವರ್ಷಗಳ ಹಿಂದೆ ಗಂಡ ಉಮೇಶ್ ಮೃತಪಟ್ಟಿದ್ದರು. ಮಗನೂ ಕೂಡಾ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದ. ಬಳಿಕ ದಾಕ್ಷಾಯಿಣಿ ಅವರು ಒಬ್ಬರೇ ವಾಸವಾಗಿದ್ದರು. ಒಂದು ವರ್ಷದಿಂದ ಮನೆ ಇದ್ದ ಹಾಗೆಯೇ ಇತ್ತು.
ರಾತ್ರಿ 8 ಗಂಟೆ ಸುಮಾರಿಗೆ ಮನೆ ಡೋರ್ ಓಪನ್ ಆಗಿರೋದನ್ನ ನೋಡಿ ಸ್ಥಳೀಯರು, ಪೊಲೀಸರಿಗೆ ಕರೆ ಮಾಡಿದರು. ಯಾರೋ ಕಳ್ಳತನ ಮಾಡಲು ಬಂದಿರಬಹುದು ಎಂದು ಕರೆ ಮಾಡಿದ್ದರು. ಪೊಲೀಸರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯ ಬಾತ್ ರೂಂನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲಿಸಿದ ಬಾಗಲಗುಂಟೆ ಪೊಲೀಸರು, ಅಸ್ಥಿಪಂಜರವನ್ನ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ.



