ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮವಾಗಿ ಉಗ್ರರು ನುಸುಳುತ್ತಿದ್ದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿ, ಮೂವರನ್ನು ಹತ್ಯೆ ಮಾಡಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ಕಮಲಕೋಟ್ ಪ್ರದೇಶದಲ್ಲಿರುವ ಮದಿಯಾನ್ ನಾಯಕ್ ಪೋಸ್ಟ್ ಸಮೀಪ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ.
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಸೇನೆ ಮತ್ತು ಬಾರಾಮುಲ್ಲಾ ಪೊಲೀಸರು ಉರಿ ವಲಯದ ಮದಿಯಾನ್ ನಾಯಕ್ ಪೋಸ್ಟ್ ಸಮೀಪ ಮೂವರು ನುಸುಳುಕೋರರ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: BJPಯವರ ಭ್ರಷ್ಟಾಚಾರ ನೋಡಿದ್ರೆ ರಾಜ್ಯಕ್ಕೆ 10-15 ಪರಪ್ಪನ ಅಗ್ರಹಾರ ಜೈಲು ಬೇಕು: HDK
Advertisement
Army and Baramulla Police #neutralised 03 #infiltrators (FTs) near Madiyan Nanak post in #Kamalkote sector of #Uri. More details to be followed.@JmuKmrPolice
— Kashmir Zone Police (@KashmirPolice) August 25, 2022
Advertisement
ದಕ್ಷಿಣ ರಜೌರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಿಯಂತ್ರಿತ ಕಾಶ್ಮೀರದಿಂದ ದಾಟಿದ ಭಯೋತ್ಪಾದಕನನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಸೆರೆಹಿಡಿದ ನಾಲ್ಕು ದಿನಗಳ ನಂತರ ಇತ್ತೀಚಿನ ಘಟನೆ ನಡೆದಿದೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- 3 ದಿನದೊಳಗೆ ಎರಡನೇ ಬಾರಿ ಅರೆಸ್ಟ್ ಆದ ಶಾಸಕ ರಾಜಾಸಿಂಗ್