DistrictsKarnatakaLatestMain PostShivamogga

ಈ ಸಲ ಕಪ್ ನಮ್ದೆ – ಕಾರ್ ಮೇಲೆ ಆರ್​ಸಿಬಿ ಖದರ್

ಶಿವಮೊಗ್ಗ: ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯೂ ರಾಯಲ್ ಚಾಲೆಂಜರ್ಸ್‌ ಕ್ರೇಜ್ ಜೋರಾಗಿದ್ದು, ಜಿಲ್ಲೆಯ ಸಾಗರದಲ್ಲಿ ಆರ್​ಸಿಬಿ ಅಭಿಮಾನಿಯೊಬ್ಬರು ತಂಡಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ಕಾರ್‌ಗೆ ಹೊಸ ರೂಪ ಕೊಟ್ಟಿದ್ದಾರೆ.

ಸಾಗರ ಪಟ್ಟಣದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಸಂತೋಷ್ ಆರ್​ಸಿಬಿಯ ಅಪ್ಪಟ ಅಭಿಮಾನಿ. ಇದೇ ಕಾರಣಕ್ಕೆ ತಮ್ಮ ಫಿಯಟ್ ಕಾರ್‌ಗೆ ಆರ್​ಸಿಬಿ ಲೋಗೋ, ಹೆಸರು ಸಹಿತ ಈ ಸಲ ಕಪ್ ನಮ್ದೆ ಎಂದು ಬರೆಸಿ ಹೊಸ ಲುಕ್ ಕೊಟ್ಟಿದ್ದಾರೆ. ಈ ಕಾರ್ ಇದೀಗ ಸಾಗರ ಜನತೆಯ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:  ಈ ಸಲ ಕಪ್ ನಮ್ದೆ – ಹೋಟೆಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸಿದ ಮಾಲೀಕ

ಸಂತೋಷ್, ಹಳೆಯದ್ದನ್ನೆಲ್ಲಾ ಉಳಿಸಿಕೊಂಡು ಹೋಗಬೇಕು ಎಂಬ ಕಾರಣಕ್ಕೆ 1980ರ ಮಾಡೆಲ್‍ನ ಫಿಯಟ್ ಕಾರ್ ಖರೀದಿಸಿ, ಕಾರಿಗೆ ಆರ್​ಸಿಬಿ ಲೋಗೋ, ಹೆಸರು ಸಹಿತ ಈ ಸಲ ಕಪ್ ನಮ್ದೆ ಎಂದು ಸ್ಟಿಕ್ಕರ್‌ ಮಾಡಿಸಿದ್ದಾರೆ. ಕಾರಿನ ಮುಂಭಾಗದ ಬಾನೆಟ್ ಮೇಲೆ ಈ ಸಲ ಕಪ್ ನಮ್ದೆ ಎಂದು ಬರೆಸಿದ್ದಾರೆ. ಬಾನೆಟ್ ಮುಂಭಾಗ ನಟ ಡಾ. ರಾಜಕುಮಾರ್ ಅವರ ಭಾವಚಿತ್ರ, ಕಾರಿನ ಮೇಲೆ ಡಾ.ಪುನೀತ್ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಫೋಟೋ ಹಾಕಿದ್ದಾರೆ. ಈ ಹೊಸ ಲುಕ್‌ನಲ್ಲಿರುವ ಕಾರಿನ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

ಕಳೆದ ಬಾರಿ ತಮ್ಮ ಹಳೆಯ ಬಜಾಜ್ ಸ್ಕೂಟರ್‌ಗೆ ಐಪಿಎಲ್ ಸ್ಟಿಕ್ಕರ್ ಮಾಡಿಸಿ ಗಮನ ಸೆಳೆದಿದ್ದರು. ಅಲ್ಲದೇ ಸಾಗರದಲ್ಲಿರುವ ತಮ್ಮ ಮಾಲೀಕತ್ವದ ಹೋಟೆಲ್‍ನ ಬಿಲ್‌ನಲ್ಲಿಯೂ ಈ ಸಲ ಕಪ್ ನಮ್ದೆ ಎಂದು ಪ್ರಿಂಟ್ ಹಾಕಿಸಿದ್ದರು.

Leave a Reply

Your email address will not be published. Required fields are marked *

Back to top button