ಟೆಹ್ರಾನ್/ವಾಷಿಂಗ್ಟನ್: ಶಾಂತಿ ಮಾತುಕತೆಗಳ ಪ್ರಯತ್ನದ ಹೊರತಾಗಿಯೂ ಅಮೆರಿಕ, ಇರಾನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಕಳೆದ 1 ವಾರದಲ್ಲಿ 3-4 ಭಾರೀ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇರಾನಿನ ಡ್ರೋನ್‌ಗಳು ಹಾಗೂ ಅನೇಕ ರೇಡಾರ್ ಕೇಂದ್ರಗಳನ್ನ ಧ್ವಂಸಗೊಳಿಸಿದೆ.
ಹಾರ್ಮುಜ್ ಜಲಸಂಧಿಯನ್ನು ಗುರಿಯಾಗಿಸಿಕೊಂಡು ಹಾರಿಸಿದ್ದ ಇರಾನ್‌ನ ಡೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ. ಜೊತೆಗೆ ಕೆಶ್ಮ್ ದ್ವೀಪದಲ್ಲಿರುವ ಇರಾನಿನ ಕರಾವಳಿ ಕಣ್ಗಾವಲು ರೇಡಾರ್ ತಾಣಗಳ ಮೇಲೂ ದಾಳಿ ನಡೆಸಿದ್ದು, ಇರಾನಿನ ಮಿಲಿಟರಿ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೊಂಡಿದೆ. ಇದನ್ನೂ ಓದಿ: ಯುದ್ಧದ ಮಧ್ಯೆಯೂ ಶೇ.7.7ಕ್ಕೆ ತಲುಪಿದ ಭಾರತದ ಜಿಡಿಪಿ

ಹಾರ್ಮುಜ್ ಜಲಸಂಧಿಯತ್ತ ಉಡಾಯಿಸಿದ್ದ ಇರಾನ್‌ನ 4 ಡೋನ್‌ಗಳನ್ನು ಹೊಡೆದುರುಳಿಸಿದ್ದೇವೆ. ದಾಳಿಗೆ ಪ್ರತಿಯಾಗಿ ಜಲಸಂಧಿಯಲ್ಲಿರುವ 1 ದ್ವೀಪ ಸೇರಿದಂತೆ ಇರಾನ್‌ನ ಕರಾವಳಿ ಕಣ್ಣಾವಲು ರೇಡಾರ್ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ತಿಳಿಸಿದೆ.
ಇರಾನ್ ಉಡಾಯಿಸಿದ್ದ ಡೋನ್‌ಗಳು ಹಾರ್ಮುಜ್‌ನಲ್ಲಿ ಹಡಗುಗಳ ಸಂಚಾರಕ್ಕೆ ಆತಂಕ ತಂದೊಡ್ಡಿದ್ದವು. ಹೀಗಾಗಿ ಮುಂದಿನ ದಾಳಿಗಳನ್ನು ತಡೆಯುವ ಉದ್ದೇಶದಿಂದ ಯುಎಸ್ ಮಿಲಿಟರಿ ಗೋರುಕ್ ಮತ್ತು ಕೆಶ್ಮ್ ದ್ವೀಪಗಳಲ್ಲಿನ ಇರಾನಿನ ಕರಾವಳಿ ಕಣ್ಗಾವಲು ರೇಡಾರ್ ತಾಣಗಳ ಮೇಲೆ ದಾಳಿ ನಡೆದಿದೆ. ಕ್ವೆಶ್ಮ್ ದ್ವೀಪಗಳು ಬಂದರ್ ಅಬ್ಬಾಸ್ ಮತ್ತು ಲಾರೆಕ್ ಬಳಿ ಇವೆ. ದಾಳಿ ಬಳಿಕ ಇದು ಸ್ವರಕ್ಷಣೆಗಾಗಿ ಅಮೆರಿಕ ಮಿಲಿಟರಿ ಪ್ರತಿಕ್ರಿಯಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.

ಇರಾನ್ ಮೇಲಿನ ಟ್ರಂಪ್ ಆಡಳಿತದ ಒತ್ತಡ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಪ್ರಸ್ತುತ ಇರುವ ಕದನ ವಿರಾಮಕ್ಕೆ ಮತ್ತಷ್ಟು ಅಪಾಯ ಎದುರಾಗಿದೆ. ಇದನ್ನೂ ಓದಿ: ಭಾರತಕ್ಕೆ Su-57 ಸ್ಟೆಲ್ತ್ ಫೈಟರ್ ಜೆಟ್ ಆಫರ್ ನೀಡಿದ ಪುಟಿನ್
ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇನೆಯು ಇರಾನ್‌ನ ಬಂದರುಗಳ ಮೇಲೆ ದಿಗ್ವಂಧನ ವಿಧಿಸುತ್ತಿದೆ. ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿವೆ.
