Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Indian Navy Day 2024 | ಏನಿದರ ಮಹತ್ವ, ಇತಿಹಾಸ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Indian Navy Day 2024 | ಏನಿದರ ಮಹತ್ವ, ಇತಿಹಾಸ?

Latest

Indian Navy Day 2024 | ಏನಿದರ ಮಹತ್ವ, ಇತಿಹಾಸ?

Public TV
Last updated: December 3, 2024 10:06 pm
Public TV
Share
4 Min Read
INDIAN NAVY 1
SHARE

ಇಂದು ಭಾರತೀಯ ನೌಕಾಪಡೆ (Indian Navy) ದಿನ. ನಮ್ಮ ದೇಶದಲ್ಲಿ ಪ್ರತಿವರ್ಷ ಡಿಸೆಂಬರ್‌ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ಭಾರತದ ಜಲಗಡಿಯಲ್ಲಿ ದೇಶ ಕಾಯುವ ಸೈನಿಕರನ್ನು ನೆನೆಯುವ ಹಾಗೂ ವಿವಿಧ ಕಾರ್ಯಾಚರಣೆಗಳಲ್ಲಿ ವೀರಮರಣ ಹೊಂದಿದ ನೌಕಾಯೋಧರನ್ನು ಸ್ಮರಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷ ನೌಕಪಡೆ ದಿನ ಅಂಗವಾಗಿ ಒಡಿಶಾದ ಪುರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನೌಕಾಬಲದ ಶಕ್ತಿ ಪ್ರದರ್ಶನಗೊಳ್ಳಲಿದೆ. ನೌಕಾಪಡೆಯ ಕಾರ್ಯಾಚರಣೆ ಪ್ರಾತ್ಯಕ್ಷಿಕೆಯಲ್ಲಿ ಮಿಗ್-29 ಯುದ್ಧ ವಿಮಾನ, ಎಲ್‌ಸಿಎ ಸೇರಿದಂತೆ 40 ವಿಮಾನಗಳು ಮತ್ತು 25 ಯುದ್ಧನೌಕೆಗಳು ಶಕ್ತಿ ಪ್ರದರ್ಶನ ನಡೆಸಲಿವೆ. ಇದೇ ಮೊದಲ ಬಾರಿ ಒಡಿಶಾದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಆಕರ್ಷಕ ಪರೇಡ್‌ ನಡೆಯಲಿದೆ. 

3

ವಿಶೇಷವಾಗಿ 1971ರ ಭಾರತ ಹಾಗೂ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಲು ಭಾರತೀಯ ನೌಕಾಪಡೆ ಪ್ರಾರಂಭಿಸಿದ ʻಆಪರೇಷನ್‌ ಟ್ರೈಡೆಂಟ್‌ʼನ್ನು (Operation Trident) ಈ ಸಂದರ್ಭದಲ್ಲಿ ನೆನೆಯಲಾಗುತ್ತದೆ.

ಭಾರತೀಯ ನೌಕಾಪಡೆ ದಿನದ ಇತಿಹಾಸವೇನು? 

1971ರ ಡಿಸೆಂಬರ್‌ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಕರಾಚಿ ಗಡಿಯಲ್ಲಿ ಭಾರತೀಯ ನೌಕಪಡೆಯ ಯೋಧರು ದೇಶಕ್ಕಾಗಿ ಹೋರಾಡಿದ್ದರು. `ಆಪರೇಷನ್‌ ಟ್ರೈಡೆಂಟ್‌’ ಹೆಸರಿನ ಈ ಕಾರ್ಯಾಚರಣೆಯಲ್ಲಿ ಹಲವಾರು ಸೈನಿಕರು ವೀರಮರಣ ಹೊಂದಿದ್ದರು. ಅವರ ಸ್ಮರಣಾರ್ಥ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. 

2

ಡಿಸೆಂಬರ್‌ 3 ರಂದು ಪಾಕಿಸ್ತಾನ ಭಾರತದ ಜಲಗಡಿಗಳಲ್ಲಿ ಆಕ್ರಮಣ ಮಾಡಲು ಆರಂಭಿಸಿತ್ತು. ಆ ಸಮಯದಲ್ಲಿ ಭಾರತೀಯ ನೌಕಾಪಡೆ ಪಿಎನ್‌ಎಸ್‌ ಖೈಬರ್‌ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡುಗುಗಳನ್ನು ಹೊಡೆದುರುಳಿಸಿತ್ತು. ಈ ವೇಳೆ ದೇಶಕ್ಕಾಗಿ ಹಲವರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಆ ವೀರ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್‌ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. 

ಆಚರಣೆ ಹೇಗೆ?

ಯುದ್ಧನೌಕೆಗಳು ಮತ್ತು ವಿಮಾನಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುತ್ತದೆ. ಕಾರ್ಯಕ್ರಮದಲ್ಲಿ ಯುದ್ಧವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತವೆ. ಅಂದು ಸಶಸ್ತ್ರ ಪಡೆಯ ಮುಖ್ಯಸ್ಥರು ರಾಜಧಾನಿ ದೆಹಲಿಯಲ್ಲಿರುವ ನ್ಯಾಷನಲ್‌ ವಾರ್‌ ಮೆಮೊರಿಯಲ್‌ನಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಹೀಗೆ ನೌಕಾಪಡೆಯ ವತಿಯಿಂದ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಬಾರತದ ನೌಕಾಪಡೆಯ ಮಹತ್ವವೇನು? 

ಭಾರತದ ನೌಕಾಪಡೆಯು ದೇಶದ ಕರಾವಳಿ ತೀರ, ಸಮುದ್ರ ಗಡಿಯನ್ನು ಶತ್ರುಗಳಿಂದ ರಕ್ಷಣೆ ಮಾಡುವುದರ ಜೊತೆಗೆ ಬೇರೆ ದೇಶಗಳ ಬಂದರು ಭೇಟಿ, ಜಂಟಿ ಕವಾಯತು, ವಿಪತ್ತು ಪರಿಹಾರ ಮುಂತಾದ ರೀತಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧವನ್ನು ವೃದ್ಧಿಸುವ ಕೆಲಸ ಮಾಡುತ್ತದೆ.

ಮೊದಲು ನೌಕಪಡೆಯನ್ನು ರಾಯಲ್‌ ಇಂಡಿಯನ್‌ ನೇವಿ ಎಂದು ಕರೆಯಲಾಗುತ್ತಿತ್ತು. ಈಸ್ಟ್‌ ಇಂಡಿಯಾ ಕಂಪನಿಯು 1612ರಲ್ಲಿ ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ನೌಕಾ ಶಾಖೆಯನ್ನು ಸ್ಥಾಪಿಸಿತ್ತು. ಸ್ವಾತಂತ್ರ್ಯ ನಂತರ 1950ರ ಜನವರಿ 26 ರಂದು ಭಾರತೀಯ ನೌಕಾಪಡೆ ಎಂದು ಮರುನಾಮಕರಣ ಮಾಡಲಾಯಿತು

1

ಇತ್ತೀಚೆಗೆ ಭಾರತೀಯ ನೌಕಾಪಡೆ ತನ್ನ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್​ಎಸ್​ ಅರಿಘಾಟ್‌ನಿಂದ K-4 SLBMನ್ನು ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಈ ಕ್ಷಿಪಣಿಯ ವ್ಯಾಪ್ತಿ 3,500 ಕಿಲೋ ಮೀಟರ್ ಆಗಿದೆ. ಭೂಮಿಯ ಮೇಲಿನ ಪರಿಸ್ಥಿತಿ ಉತ್ತಮವಾಗಿಲ್ಲದೇ ಇದ್ದರೆ ಜಲಾಂತರ್ಗಾಮಿ ನೌಕೆಯ ಮೂಲಕ ನೀರೊಳಗಿನಿಂದಲೇ ದಾಳಿ ಮಾಡಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ.

ಐಎನ್​ಎಸ್​ ಅರಿಹಂತ್ ಮತ್ತು ಅರಿಘಾಟ್ ಜಲಾಂತರ್ಗಾಮಿ ನೌಕೆಗಳು ನಾಲ್ಕು ವರ್ಟಿಕಲ್​ ಲಾಂಚಿಂಗ್​ ಸಿಸ್ಟಮ್​ ಹೊಂದಿವೆ. ಈ ಕ್ಷಿಪಣಿ 17 ಟನ್ ತೂಕ ಮತ್ತು 39 ಅಡಿ ಉದ್ದವಿದೆ. ಇದರ ವ್ಯಾಸ 4.3 ಮೀಟರ್ ಆಗಿದ್ದು, 2,500 ಕೆ.ಜಿ ತೂಕದ ಆಯಕಟ್ಟಿನ ಪರಮಾಣು ಸಿಡಿತಲೆಗಳೊಂದಿಗೆ ಹಾರುವ ಸಾಮರ್ಥ್ಯ ಹೊಂದಿದೆ. 

ನೌಕಾಪಡೆಯ ಸಾಮರ್ಥ್ಯ‌

ಭಾರತೀಯ ನೌಕಪಡೆ 2 ಪರಮಾಣು ದಾಳಿಯ ಜಲಾಂತರ್ಗಾಮಿ, 30 ಗಸ್ತು ಹಡಗುಗಳು, 5 ಫ್ಲೀಟ್‌ ಟ್ಯಾಂಕರ್‌ಗಳು ಸೇರಿದಂತೆ ಹಲವು ಬಗೆಯ ಹಡಗುಗಳು, ಯುದ್ಧ ನೌಕೆಗಳು, ನೌಕಾ ವಾಹನಗಳನ್ನೂ ಭಾರತೀಯ ನೌಕಪಡೆ ಹೊಂದಿದೆ. ಇನ್ನೂ ನೌಕಾಪಡೆಯು ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿಕ್ರಾಂತ್ ಎಂಬ ಎರಡು ಪ್ರಬಲ ವಿಮಾನವಾಹಕ ನೌಕೆಗಳನ್ನು ಹೊಂದಿದೆ. ಇವನ್ನು ಭಾರತೀಯ ನೌಕಾಪಡೆಯ ಬೆನ್ನೆಲುಬು ಎಂದು ಕರೆಯಲಾಗುತ್ತದೆ. 

ನೌಕಾಪಡೆಯ ಬಳಿ 8 ಟ್ಯಾಂಕ್‌ ಲ್ಯಾಂಡಿಂಗ್‌ ಹಡಗುಗಳು, 12 ವಿಧ್ವಂಸಕ ಕ್ಷಿಪಣಿಗಳು ಮತ್ತು 12 ಫ್ರಿಗೇಟ್‌ಗಳು, 16 ಜಲಾಂತರ್ಗಾಮಿಗಳು ಮತ್ತು 22 ಕಾರ್ವೆಟ್‌ಗಳಿವೆ. 10 ದೊಡ್ಡ ಆಫ್‌ಶೋರ್ ಪೆಟ್ರೋಲಿಂಗ್ ಹಡಗುಗಳಿವೆ. ಭಾರತೀಯ ನೌಕಾಪಡೆಯು ವಿಶ್ವದ 10 ಅತ್ಯಂತ ಪ್ರಬಲ ನೌಕಾಪಡೆಗಳಲ್ಲಿ ಏಳನೇ ಸ್ಥಾನದಲ್ಲಿದೆ.

ಜುಲೈ 2022ರ ಅಂಕಿ ಅಂಶದ ಪ್ರಕಾರ ಪ್ರಕಾರ ಭಾರತದ ನೌಕಾಪಡೆಯಲ್ಲಿ 67,252 ಸಿಬ್ಬಂದಿ, 75,000 ಮೀಸಲು ಸಿಬ್ಬಂದಿ, 150 ಹಡಗುಗಳನ್ನು ಹೊಂದಿದೆ.  2 ವಿಮಾನ ವಾಹಕಗಳನ್ನು, 8 ಲ್ಯಾಂಡಿಂಗ್‌ ಶಿಪ್‌ ಟ್ಯಾಂಕ್‌ಗಳು,, 19 ಕಾರ್ವೆಟ್‌ಗಳು, 19 ಜಲಾಂತರ್ಗಾಮಿಗಳನ್ನು ಹೊಂದಿತ್ತು ಎಂಬ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತ್ತು. 

ಇನ್ನೂ ಈ ಬಾರಿಯ ನೌಕಪಡೆಯ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಜ್ಯಪಾಲ ರಘುಬರ್ ದಾಸ್, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ನೌಕಾಪಡೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಾಚರಣೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅತ್ಯಾಧುನಿಕ ಯುದ್ಧನೌಕೆಗಳು ಮತ್ತು ಯುದ್ಧ ವಿಮಾನಗಳನ್ನು ವೀಕ್ಷಿಸುವ ಅವಕಾಶವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TAGGED:Armyindian navyIndian Navy DayOperation Tridentಭಾರತೀಯ ನೌಕಾಪಡೆ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Tamil Nadu factory blast 20 killed several injured as massive blast rips through firecracker factory in Virudhunagar
Crime

ತಮಿಳುನಾಡಿನಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ – 20 ಸಾವು, ಹಲವರ ಸ್ಥಿತಿ ಚಿಂತಾಜನಕ

Public TV
By Public TV
16 minutes ago
Anurag Thakur
Bengaluru City

ಹಿಂದಿನಿಂದ ಬಂದು ಮಹಿಳೆಯರಿಗೆ ಕಾಂಗ್ರೆಸ್‌ ಚೂರಿ, ದೇಶದ ತಾಯಂದಿರು ಇವರನ್ನು ಕ್ಷಮಿಸಲ್ಲ: ಅನುರಾಗ್‌ ಠಾಕೂರ್‌

Public TV
By Public TV
24 minutes ago
Mallikarjun Kharge 2
Bengaluru City

ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ, ಮೋದಿಯ ಸುಳ್ಳು ಆರೋಪ ಖಂಡಿಸುತ್ತೇನೆ: ಖರ್ಗೆ ಕೆಂಡಾಮಂಡಲ

Public TV
By Public TV
1 hour ago
Tejasvi Surya
Bengaluru City

ನಾರಿಶಕ್ತಿಗೆ ವಿಪಕ್ಷಗಳ ವಿರೋಧ – ಇದರ ಪರಿಣಾಮ ಪ.ಬಂಗಾಳ ಚುನಾವಣೆಯಲ್ಲೇ ಗೊತ್ತಾಗಲಿದೆ: ತೇಜಸ್ವಿ ಸೂರ್ಯ ಭವಿಷ್ಯ

Public TV
By Public TV
1 hour ago
Patahi Airport
Latest

ಬಿಹಾರದಲ್ಲಿ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣ – ಶೀಘ್ರದಲ್ಲೇ ವಿಮಾನ ಸೇವೆ ಆರಂಭ

Public TV
By Public TV
2 hours ago
a man from Belthangady who was going to sabarimala temple fell from the train and died in kerala
Dakshina Kannada

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ದುರ್ಮರಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?