– ಫೀಲ್ಡ್ ವೆರಿಫಿಕೇಷನ್‌ಗೆ 5 ತಂಡ ರಚನೆ
ಬೆಂಗಳೂರು: ರಾಜ್ಯದಲ್ಲಿ ನಡೀತಿರುವ ಮತಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿ (SIR) ಅಕ್ರಮಗಳು, ಲೋಪಗಳಾಗ್ತಿವೆ. ಹೀಗಾಗಿ, ಮರುಪರಿಷ್ಕರಣೆ ಮಾಡಬೇಕು ಅಂತ ಬಿಜೆಪಿ-ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಇವತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ (Chief Electoral Officer Anbukumar) ಸುದ್ದಿಗೋಷ್ಠಿ ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಾವು ನಿಯಮದ ಪ್ರಕಾರವೇ ಕೆಲಸ ಮಾಡ್ತಿದ್ದೇವೆ. ಕೇಂದ್ರದ ನಿರ್ದೇಶನ ಪಾಲಿಸ್ತೇವೆ ಅಂದರು. ಇದುವರೆಗೂ 4.41 ಕೋಟಿ ಎನಮ್ಯೂರೇಷನ್ ಫಾರಂ (79.73%) ವಿತರಣೆ ಆಗಿದೆ. 1.12 ಕೋಟಿ ಗಣತಿ ನಮೂನೆ ಫಾರಂ ವಿತರಣೆ (20.27%) ಬಾಕಿ ಇದೆ. ಇದರೊಂದಿಗೆ ನಿಯಮ ಪಾಲಿಸದ 35 ಬಿಎಲ್‌ಓಗಳ ಮೇಲೆ ಇದುವರೆಗೂ ಕ್ರಮ ಆಗಿದೆ ಅಂದರು.

ಫೀಲ್ಡ್ ವೆರಿಫಿಕೇಷನ್‌ಗೆ 5 ತಂಡ ರಚನೆ
53 ಸಾವಿರ ಮತದಾರರ ಸಾವು, 54 ಸಾವಿರ ಮತದಾರರು ಶಿಫ್ಟ್ ಮಾಡಿಕೊಂಡಿದ್ದಾರೆ. ಫೀಲ್ಡ್ ವೆರಿಫಿಕೇಷನ್‌ಗೆ 5 ತಂಡ ರಚನೆ ಮಾಡಿದ್ದು, ಬಿಎಲ್‌ಓಗಳ ಕಾರ್ಯ ವೈಖರಿ ಚೆಕ್ ಮಾಡ್ತಾರೆ. ಮಂದಿರ, ಮಸೀದಿ, ಚೌಟ್ರಿಗಳು, ಸಮುದಾಯ ಭವನಗಳಲ್ಲಿ ಗುಂಪು ಗುಂಪಾಗಿ ವಿತರಣೆ ಮಾಡುವ ಆಗಿಲ್ಲ. ಮಾಡಿದರೆ ಕ್ರಮ ಆಗುತ್ತೆ. ಮನೆ ಮನೆಗೆ ಹೋಗಿ ವಿತರಣೆ ಮಾಡಬೇಕು. ಫಾರಂ ಅನ್ನು ಬೇರೆ ಅವರಿಗೆ ಕೊಡುವ ಆಗಿಲ್ಲ ಅಂತ ಸ್ಪಷ್ಟಪಡಿಸಿದರು.
ತುಂಬಾ ಜನ ಆನ್‌ಲೈನ್‌ನಲ್ಲಿ ಅಪ್ಲೈ ಮಾಡ್ತಿದ್ದಾರೆ ಅಂತ ವಿವರಿಸಿದರು. ಈ ಮಧ್ಯೆ, ಕೇಂದ್ರ ಚುನಾವಣಾ ಆಯೋಗ ರಾಜ್ಯಕ್ಕೆ ಭೇಟಿ ಬಳಿಕ ಬೆಂಗಳೂರಿನಲ್ಲಿ ಎಸ್‌ಐಆರ್‌ಗೆ ಹೊಸ ಮಾರ್ಗಸೂಚಿ ಪ್ರಕಟವಾಗಿದೆ.
ಎಸ್‌ಐಆರ್ ಹೊಸ ಮಾರ್ಗಸೂಚಿ ಏನಿದೆ?
> ಮತದಾರರು ಸ್ಥಳಾಂತರಗೊಂಡಿದ್ದರೆ ಫಾರಂ 6 ವಿತರಣೆಗೆ ಸೂಚನೆ
> ಪ್ರಸ್ತುತ ವಾಸವಿರುವ ಸ್ಥಳದ ವಿಳಾಸ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡಿಸಿಕೊಳ್ಳುವಂತೆ ತಿಳಿಸಬಹುದು
> ಸ್ಥಳಾಂತರಗೊಂಡಿರುವ ಮತದಾರರ ವಿವರಗಳನ್ನ ಬಿಎಲ್‌ಎಗಳಿಗೆ ನೀಡಬೇಕು
> ಮತದಾರನ ಸಮ್ಮುಖದಲ್ಲಿ ಮಹಜರು ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು
> ಒಂದು ಪ್ರತಿಯನ್ನು ಬಿಎಲ್‌ಓ ಆ್ಯಪ್‌ನಲ್ಲಿ ಅಪ್ ಲೋಡ್ ಮಾಡಬೇಕು
> ಬಿಎಲ್‌ಓಗಳು, ಬಿಎಲ್‌ಎಗಳ ಜೊತೆ ಸಮನ್ವಯಕ್ಕೆ ಮತಗಟ್ಟೆ ಮೇಲ್ವಿಚಾರಕರ ಸಭೆ ನಡೆಸಬೇಕು.
