ಬೊಗೋಟಾ: ಕೊಲಂಬಿಯಾದ (Colombia) ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಲ್ಲಿ (Earthquake) ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಜನರು ಸಿಲುಕಿಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಸಾಧನೆ – ಉದ್ಯಮಿ ಸತೀಶ್ ರೊಟ್ಟಿ ಕುಟುಂಬಕ್ಕೆ ಕ್ರೀಡಾ ಇಲಾಖೆಯಿಂದ ಗೌರವ ಸನ್ಮಾನ
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಬೊಗೋಟಾದಿಂದ (Bogota) ಪಶ್ಚಿಮಕ್ಕೆ 400 ಕಿಲೋಮೀಟರ್ ದೂರದಲ್ಲಿರುವ ಸುಮಾರು 4,800 ಜನರಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮರ್‌ನಲ್ಲಿ (San Jose del Palmar) ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 107 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕಂಪನಗಳು ನೆರೆಯ ಈಕ್ವೆಡಾರ್‌ಗೂ ಅನುಭವವಾಗಿವೆ. ಇದನ್ನೂ ಓದಿ: ‘ಜಂತರ್ ಮಂತರ್‌ನಲ್ಲಿ ಗುಂಡೇ ಹಾರಿಸಿಲ್ಲ’ – ರಾಹುಲ್ ದೇಶದ, ಜನರ ದಾರಿ ತಪ್ಪಿಸ್ತಿದ್ದಾರೆ: ಜೆ.ಪಿ. ನಡ್ಡಾ ತಿರುಗೇಟು
Manizales, Colombia. Terremoto. pic.twitter.com/BzKcaWIHm1
— Jupac (@Jupacg) August 10, 2026
ಮೃತಪಟ್ಟವರ ಪೈಕಿ 18 ಮಂದಿ ಪೆರೆರಾ ಪಟ್ಟಣದವರಾಗಿದ್ದಾರೆ. ನಗರದ ಪರಿಸ್ಥಿತಿ `ಗಂಭೀರವಾಗಿದೆ’ ಎಂದು ಪೆರೆರಾ ನಗರದ ಮೇಯರ್ ಮೌರಿಸಿಯೋ ಸಲಜಾರ್ ಅವರು ಕ್ಯಾರಕೋಲ್ ರೇಡಿಯೋಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ʻಆಪರೇಷನ್ ಕಚಡಾ ಫುಡ್ʼ – 2 ವರ್ಷದಷ್ಟು ಹಿಂದಿನ ಚಿಕನ್, 1 ವರ್ಷದಷ್ಟು ಹಿಂದಿನ ಮೀನು ಮಾಂಸ ಪತ್ತೆ
ಸ್ಥಳೀಯ ಮಾಧ್ಯಮಗಳು ಹಂಚಿಕೊಂಡಿರುವ ದೃಶ್ಯಗಳಲ್ಲಿ ಪೆರೆರಾ, ಕಾಲಿ ಮತ್ತು ಕ್ವಿಬ್ಡೊ ನಗರಗಳಲ್ಲಿ ಮನೆಗಳು ಹಾಗೂ ಸಣ್ಣ ಕಟ್ಟಡಗಳು ಕುಸಿಯುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಕೈಗಾರಿಕಾ ಅಪಘಾತಗಳ ತಡೆ, ತುರ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ – ಜಂಟಿ ನಿರ್ದೇಶಕರಿಗೆ ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ
ಭೂಕAಪದ ಬಳಿಕ ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ‘ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ತಪ್ಪು’ – ತಮ್ಮದೇ ಮೈತ್ರಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ

