– ಸದನ ನಡೆದರೆ ಪ್ರತಿಯೊಂದು ಪ್ರಶ್ನೆಗೂ ಅಮಿತ್ ಶಾ ಉತ್ತರ ಕೊಡ್ತಾರೆ
– ರಾಹುಲ್ ಗಾಂಧಿ ದಿನಕ್ಕೊಂದು ರೀತಿ ಬೇಡಿಕೆ ಬದಲಾಯಿಸ್ತಿದ್ದಾರೆ
ನವದೆಹಲಿ: ಜಂತರ್ ಮಂತರ್‌ನಲ್ಲಿ (Jantar Mantar) ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿಯೇ ಇಲ್ಲ. ರಾಹುಲ್ ಗಾಂಧಿ ದೇಶದ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜೆ.ಪಿ ನಡ್ಡಾ (JP Nadda) ತಿರುಗೇಟು ನೀಡಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನಾ (Protest) ನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ. ಜಂತರ್ ಮಂತರ್‌ನಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ರಾಹುಲ್ ಗಾಂಧಿ ಜನರನ್ನು ಹಾಗೂ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
#WATCH | Delhi: Union Minister JP Nadda says, “I once again challenge Rahul Gandhi: Come to the House. We are ready for a discussion, and you will receive a befitting reply. I would also like to clarify: Do not spread misinformation; no bullets were fired at Jantar Mantar, nor… pic.twitter.com/mMMoW2A6aX
— ANI (@ANI) August 10, 2026
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಪ್ರಶ್ನಿಸಿದ್ದ ರಾಹುಲ್ ಗಾಂಧಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲು ಯಾರು ಅನುಮತಿ ನೀಡಿದರು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಡ್ಡಾ, ಜಂತರ್ ಮಂತರ್‌ನಲ್ಲಿ ಗುಂಡು ಹಾರಿಸಲು ಯಾವುದೇ ಆದೇಶ ನೀಡಲಾಗಿರಲಿಲ್ಲ ಎಂದು ಹೇಳಿದ್ದಾರೆ.
‘ರಾಹುಲ್‌ಗೆ ಸಂಸತ್ ಕಲಾಪ ನಡೆಯುವುದು ಬೇಕಿಲ್ಲ’
ರಾಹುಲ್ ಗಾಂಧಿ ಸಂಸತ್‌ನಲ್ಲಿ ನಿರಂತರವಾಗಿ ತಮ್ಮ ಬೇಡಿಕೆಗಳನ್ನ ಬದಲಾಯಿಸುತ್ತಿದ್ದು, ಸದನದ ಕಲಾಪಕ್ಕೆ ಅಡ್ಡಿಪಡಿಸುವುದೇ ಅವರ ಉದ್ದೇಶವಾಗಿದೆ. ರಾಹುಲ್ ಗಾಂಧಿ ಪ್ರತಿದಿನ ಸಂಸತ್‌ನಲ್ಲೂ, ತಮ್ಮ ರಾಜಕೀಯ ನಿರೂಪಣೆಯಲ್ಲೂ ವಿಷಯವನ್ನ ಬದಲಾಯಿಸುತ್ತಿದ್ದಾರೆ. ಅವರ ಉದ್ದೇಶ ಸಂವಾದ ನಡೆಸುವುದಲ್ಲ, ಗೊಂದಲ ಸೃಷ್ಟಿಸುವುದು ಎಂದು ಕುಟುಕಿದ್ದಾರೆ.
ಮೊದಲಿಗೆ ಸಂಸತ್ ಅಧಿವೇಶನ ಆರಂಭವಾದಾಗ ನೀಟ್ ಕುರಿತು ಚರ್ಚೆಗೆ ಆಗ್ರಹಿಸಿದ್ದರು. ಸರ್ಕಾರ ಅದಕ್ಕೆ ಒಪ್ಪಿದ ಬಳಿಕ ರಾಮಮಂದಿರ ಟ್ರಸ್ಟ್ ವಿಚಾರ ಪ್ರಸ್ತಾಪಿಸಿದರು. ನಂತರ ಜಂತರ್ ಮಂತರ್ ಘಟನೆಯ ಕುರಿತು ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಕಳೆದ 15 ದಿನಗಳಿಂದ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಅವರ ಉದ್ದೇಶ ಸಂಸತ್ ನಡೆಯದಂತೆ ಮಾಡುವುದಾಗಿದೆ ಎಂದು ಆಕ್ಷೇಪಿಸಿದ್ದಾರೆ.
#WATCH | Delhi: Union Minister JP Nadda says, “…I want to say this clearly to Rahul Gandhi: Do not run away from the discussion. We are ready to discuss every issue inside the House. Furthermore, I would like to ask: Does he not hear the voices of the students in Jharkhand… pic.twitter.com/V5rZaOKSXC
— ANI (@ANI) August 10, 2026
‘ಗುಂಡು ಹಾರಿಸಿದರೆಂದು ಸುಳ್ಳು ಮಾಹಿತಿ ಹರಡುತ್ತಿದ್ದಾರೆ’
ಜಂತರ್ ಮಂತರ್ ವಿಚಾರ ಚರ್ಚಿಸಲು ಸರ್ಕಾರ ಸಿದ್ಧವಾದ ಬಳಿಕ ರಾಹುಲ್ ಗಾಂಧಿ ಜನರನ್ನ ತಪ್ಪುದಾರಿಗೆಳೆಯುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇಂದು ಜಂತರ್ ಮಂತರ್ ವಿಚಾರವನ್ನ ಚರ್ಚಿಸಲು ನಿರ್ಧರಿಸಲಾಗಿದೆ. ಆದರೆ ಅದೇ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ಗುಂಡು ಹಾರಿಸಲಾಗಿದೆ ಎಂದು ಹೇಳುವ ಮೂಲಕ ಅವರು ಜನರನ್ನ ಹಾಗೂ ದೇಶವನ್ನ ದಾರಿ ತಪ್ಪಿಸುತ್ತಿದ್ದಾರೆ. ವಾಸ್ತವವಾಗಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ನಡ್ಡಾ ಸ್ಪಷ್ಟಪಡಿಸಿದ್ದಾರೆ.
ʻತಪ್ಪು ಮಾಹಿತಿಯನ್ನು ಹರಡಬೇಡಿ. ಜಂತರ್ ಮಂತರ್‌ನಲ್ಲಿ ಯಾವುದೇ ಗುಂಡು ಹಾರಿಸಲಾಗಿಲ್ಲ. ಅಲ್ಲಿಗೆ ಗುಂಡು ಹಾರಿಸುವಂತೆ ಯಾವುದೇ ಆದೇಶವೂ ನೀಡಲಾಗಿಲ್ಲʼ ಎಂದರಲ್ಲದೇ, ಪೊಲೀಸ್ ಕ್ರಮ ಸೇರಿದಂತೆ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಸಿದ್ಧರಾಗಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.
ಸದನ ನಡೆಯಲಿ ಎಂಬುದು ಸರ್ಕಾರದ ನಿಲುವು. ಸದನ ಸರಿಯಾಗಿ ನಡೆದರೆ, ಪ್ರತಿಯೊಂದು ವಿಚಾರಕ್ಕೂ ಉತ್ತರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

