– ತಡರಾತ್ರಿ ಬಹುದೊಡ್ಡ ದಾಳಿಯ ಎಚ್ಚರಿಕೆ ಕೊಟ್ಟ ಯುಎಸ್ ಅಧ್ಯಕ್ಷ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯ ಕನಸು ಕಾಣುತ್ತಿದ್ದ ವಿಶ್ವಶಾಂತಿ ಪ್ರಿಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಿಗ್ ಶಾಕ್ ನೀಡಿದ್ದಾರೆ. ʻಇರಾನ್ ಜೊತೆಗಿನ ಶಾಂತಿ ಒಪ್ಪಂದದ ಕಥೆ ಮುಗಿದಿದೆ, ಇನ್ನು ಮಾತನಾಡುವುದು ವ್ಯರ್ಥ, ಇರಾನ್‌ನವರು ನಾಲಾಯಕ್, ವಿಕೃತ ಮನಸ್ಸಿನವರುʼ ಎಂದೆಲ್ಲಾ ಲೇವಡಿ ಮಾಡಿದ್ದಾರೆ.
ಈ ಬೆನ್ನಲೇ ಮತ್ತೆ ಇರಾನ್ (Iran) ಮೇಲೆ ಬೃಹತ್ ದಾಳಿ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್, ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ.

ಹೌದು. ಇರಾನ್ – ಅಮೆರಿಕ (Iran Vs America) ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ನನ್ನ ಹತ್ಯೆಗೆ ಸಂಚು ರೂಪಿಸುತ್ತಿರಬಹುದು, ನಾನೇ ಅವರಿಗೆ ನಂ.1 ಟಾರ್ಗೆಟ್ ಎಂದು ಹೇಳಿದ್ದಾರೆ. ಇರಾನ್‌ನ ನನ್ನನ್ನೇ ನಂ.1 ಟಾರ್ಗೆಟ್ ಮಾಡಿಕೊಂಡಿದೆ. ಇರಾನ್ ನಾಯಕರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಬಹುದು ಎಂದಿದ್ದಾರೆ.
ಇರಾನ್‌ನವರು ಕೊಳಕು ಮನಸ್ಸಿನವರು, 47 ವರ್ಷಗಳಿಂದ ಹಾಗೆಯೇ ಇದ್ದಾರೆ. ಇರಾನ್ ಜೊತೆಗೆ ಉದ್ವಿಗ್ನತೆ ಹೆಚ್ಚಿಸುವ ಬದಲು ಸಮಸ್ಯೆಯನ್ನು ಮುಕ್ತಾಯಗೊಳಿಸಲು ಬಯಸಿದ್ದೆ, ಆದ್ರೆ ಶಾಂತಿ ಒಪ್ಪಂದಕ್ಕೆ ಬರುವ ಎಲ್ಲಾ ಪ್ರಯತ್ನಗಳೂ ಮುಗಿದಿವೆ ಎಂದಿದ್ದಾರೆ.
ತಡರಾತ್ರಿ ಇರಾನ್ ಮೇಲೆ ದಾಳಿ
ಇದಕ್ಕೂ ಮುನ್ನ ಮಾತನಾಡಿದ್ದ ಟ್ರಂಪ್, ಇಂದು (ಭಾರತೀಯ ಕಾಲಮಾನ ಜು.8) ತಡರಾತ್ರಿಯೇ ಇರಾನ್ ಮೇಲೆ ದಾಳಿ ಮಾಡುವುದಾಗಿ ದೊಡ್ಡ ಎಚ್ಚರಿಕೆ ನೀಡಿದ್ದರು. ಪ್ರತಿ ಹಂತದಲ್ಲೂ ಕದನ ವಿರಾಮ ಉಲ್ಲಂಘಿಸುತ್ತಲೇ ಬಂದಿದ್ದಾರೆ. ಇನ್ನೂ ಅವರೊಂದಿಗೆ ಮಾತನಾಡುವುದರಲ್ಲಿ ಅರ್ಥವಿಲ್ಲ, ನನ್ನಮಟ್ಟಿಗೆ ಕದನ ವಿರಾಮ ಮುಗಿದಿದೆ ಎಂದು ಹೇಳಿದ್ದರು.
