ತಮ್ಮ ಬಹುನಿರೀಕ್ಷಿತ ‘ಜನನಾಯಗನ್’ (Jana Nayagan) ಚಿತ್ರದ ಬಿಡುಗಡೆ ವೇಳೆ ಟಿಕೆಟ್ ದರ ಹೆಚ್ಚಿಸುವುದು, ಬ್ಲ್ಯಾಕ್ ಟಿಕೆಟ್ ಮಾರಾಟ ಸೇರಿದಂತೆ ಯಾವುದೇ ಅಕ್ರಮ ನಡೆಯಬಾರದು ಎಂದು ನಟ ಹಾಗೂ ತಮಿಳುನಾಡು ಸಿಎಂ ವಿಜಯ್(CM Vijay) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ‘ಜನನಾಯಗನ್’ ಬಿಡುಗಡೆಗೆ ದಳಪತಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಸಿಎಂ ವಿಜಯ್ ಥಿಯೇಟರ್‌ಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಚಿತ್ರದ ಮೇಲೆ ಭಾರೀ ನಿರೀಕ್ಷೆ ಇರುವುದರಿಂದ ಬಿಡುಗಡೆಯ ವೇಳೆ ಟಿಕೆಟ್ ದರ ಹೆಚ್ಚಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾದಾಗ, ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದು ಟಿಕೆಟ್ ಮಾರಾಟ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ವಿಜಯ್ ತಂಡ ಈಗಾಗಲೇ ಥಿಯೇಟರ್ ಮಾಲೀಕರಿಗೆ ಟಿಕೆಟ್ ದರ ಹೆಚ್ಚಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ಬ್ಲ್ಯಾಕ್ ಟಿಕೆಟ್ ಮಾರಾಟ, ಬೆನಿಫಿಟ್ ಶೋಗಳಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ‘ಜನನಾಯಗನ್’ ಚಿತ್ರದ ಪ್ರದರ್ಶನದ ವೇಳೆ ನಡೆಸದಂತೆ ಥಿಯೇಟರ್‌ಗಳು ಹಾಗೂ ಚಿತ್ರ ನಿರ್ಮಾಣ ಸಂಸ್ಥೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಮುಖ್ಯಮಂತ್ರಿಯಾಗಿರುವ ಕಾರಣ, ತಮ್ಮದೇ ಚಿತ್ರದ ವಿಚಾರದಲ್ಲಿ ನಿಯಮ ಉಲ್ಲಂಘನೆ ಆಯಿತು ಎಂಬ ಆರೋಪ ಬರಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಸಿಎಂ ವಿಜಯ್. ಇದನ್ನೂ ಓದಿ: ಟಾಕ್ಸಿಕ್ ಚಿತ್ರ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ – ಯಶ್ ಕಿಯಾರಾ ಕೆಮಿಸ್ಟ್ರಿಗೆ ನೆಟ್ಟಿಗರು ಫಿದಾ
ಚಿತ್ರ ಬಿಡುಗಡೆಯ ವೇಳೆ ಟಿಕೆಟ್ ದರ ಸರ್ಕಾರ ನಿಗದಿಪಡಿಸಿರುವ ಮಿತಿಯಲ್ಲೇ ಇರುವಂತೆ ಅಧಿಕಾರಿಗಳು ಚಿತ್ರಮಂದಿರಗಳ ಮೇಲೆ ವಿಶೇಷ ನಿಗಾ ವಹಿಸುವ ಸಾಧ್ಯತೆ ಇದೆ. ಅನುಮೋದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಕಂಡುಬಂದರೆ, ಥಿಯೇಟರ್‌ಗಳ ವಿರುದ್ಧ ಪರವಾನಗಿ ರದ್ದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬಹುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.ಇದನ್ನೂ ಓದಿ: ನಿರ್ಧಾರ ಬದಲಿಸಿದ ನಟ ಜಯಂ ರವಿ
