ಬೆಂಗಳೂರು: ವಾಲ್ಮೀಕಿ ನಿಗಮ (Valmiki Scam) ಬಹುಕೋಟಿ ಭ್ರಷ್ಟಾಚಾರ ಹಗರಣ ಸಂಬಂಧ ಮತ್ತೆ ಜಟಾಪಟಿ ಶುರುವಾಗಿದೆ. ಖಾತೆ ಸಿಗುವ ಮುನ್ನವೇ ನಾಗೇಂದ್ರರ (B.Nagendra) ಸಚಿವ ಸ್ಥಾನಕ್ಕೆ ಕುತ್ತು ಬಂದಿದೆ.
ಜೈಲು ಸೇರಿದ್ರೂ ಡಿಕೆ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಂಡಿರೋ ನಾಗೇಂದ್ರ ಇಡಿ ತನಿಖೆ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿಗೆ ಭೇಟಿ ನೀಡಿದ್ದಾರೆ. ಅನುಮತಿಯನ್ನೇ ಪಡೆಯದೆ ನಾಗೇಂದ್ರ ಅವರು ಕಳೆದ ಜುಲೈ 17ರಂದು ದೆಹಲಿಗೆ ಹೋಗಿದ್ದರ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ – ಸಚಿವ ನಾಗೇಂದ್ರಗೆ ಸಂಕಷ್ಟ, ರದ್ದಾಗುತ್ತಾ ಜಾಮೀನು?
ದೆಹಲಿಗೆ ತೆರಳಲು ಅನುಮತಿ ಕೋರಿ ನಾಗೇಂದ್ರ ಅರ್ಜಿ ಸಲ್ಲಿಸಿದ್ದರು. ಜುಲೈ 27ರಿಂದ ಆಗಸ್ಟ್ 10ರವರೆಗೆ ಅನುಮತಿ ಕೇಳಿದ್ದರು. ಪ್ರವಾಸಕ್ಕೆ ಸೂಕ್ತ ಕಾರಣ ಇಲ್ಲದೇ ಇದ್ದಿದ್ದರಿಂದ ಜನಪ್ರತಿನಿಧಿಗಳ ಕೋರ್ಟ್ ನಾಗೇಂದ್ರ ಅರ್ಜಿ ವಜಾ ಮಾಡಿತ್ತು. ಜುಲೈ 17ರಂದು ಅವರು ದೆಹಲಿಗೆ ತೆರಳಿದ್ದು, ಇಡಿ ಅಧಿಕಾರಿಗಳು ನಾಗೇಂದ್ರ ಟ್ರಾವೆಲ್ ಹಿಸ್ಟರಿ ಕೆದಕುತ್ತಿದ್ದಾರೆ.
ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬಿಟಿವಿ ದೃಶ್ಯಾವಳಿಗಳು, ಶಿಷ್ಟಾಚಾರ (Protocol) ವಿಭಾಗದ ರಿಜಿಸ್ಟರ್‌ಗಳು ಹಾಗೂ ವಿಮಾನಯಾನ ಸಂಸ್ಥೆಯ ದಾಖಲೆಗಳನ್ನು ಜಾಲಾಡಲು ಆರಂಭಿಸಿದ್ದಾರೆ. ದೆಹಲಿಗೆ ಹೋಗಿರುವ ಸಾಕ್ಷ್ಯ, ದಾಖಲೆ ಇಡಿ ಅಧಿಕಾರಿಗಳಿಗೆ ಸಿಕ್ಕರೆ ಕೋರ್ಟ್ ಗಮನಕ್ಕೆ ತರಲಿದ್ದಾರೆ.
ಒಂದು ವೇಳೆ ಜಾಮೀನು ರದ್ದಾದರೆ ನಾಗೇಂದ್ರ ಸಚಿವ ಸ್ಥಾನಕ್ಕೂ ಕುತ್ತು ಬರಲಿದೆ. ಖಾತೆ ಪಡೆಯುವ ಮುನ್ನವೇ ಕೆಳಗಿಳಿಯಬೇಕಾಗುತ್ತದೆ. ಇತ್ತ ಬಿಜೆಪಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದೆ. ಇತ್ತ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು, ತೊಂದರೆ ಕೊಡೋಕೆ ಐಟಿ, ಇಡಿ, ಸಿಬಿಐಯನ್ನು ಬಿಜೆಪಿ ಸಾಕಿದೆ. ಇದನ್ನ ನಾಗೇಂದ್ರ ಎದುರಿಸ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಬೇಡ ಸರ್, ಹೊಡೆಯುವುದು ಬಿಡಿ ಎಂದರೂ ಹೊಡೆದರು; ಸಿಗರೇಟ್‌ನಿಂದ ಸುಟ್ಟರು – ದರ್ಶನ್ ಬಗ್ಗೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿದ್ದೇನು?



