ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಮೇಲೆ ಬೃಹತ್ ಮರ ಬಿದ್ದ ಘಟನೆ ಯಲಹಂಕ (Yelahanka) ನ್ಯೂ ಟೌನ್ ಬಳಿ ನಡೆದಿದೆ.
ಸೆ.9ರ ಸಂಜೆ 4ರ ಸುಮಾರಿಗೆ ಮರ ಉರುಳಿ ಬಸ್ ಮೇಲೆ ಬಿದ್ದಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ದೂರು ನೀಡಲು ಬಂದವರ ಮೇಲೆ ಮಹಿಳಾ ಪೇದೆಯಿಂದ ಹಲ್ಲೆ – ಪ್ರಜ್ಞೆ ತಪ್ಪಿದರೂ ಆರೈಕೆ ಮಾಡದೆ ದುರ್ವರ್ತನೆ
ರಸ್ತೆ ಪಕ್ಕದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಮರದ ಪಕ್ಕದಲ್ಲೇ ಕಾಮಗಾರಿಗೆ ಮಣ್ಣು ಅಗೆಯಲಾಗಿತ್ತು. ಇದರಿಂದ ಮರದ ಬುಡ ಸಡೀಲಗೊಂಡು ಮರ ಬಿದ್ದಿದೆ.
ಮರ ಬಿದ್ದ ಪರಿಣಾಮ ಯಲಹಂಕ ನ್ಯೂ ಟೌನ್ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇದನ್ನೂ ಓದಿ: 9 ದಿನ `ಹರೆ ಕೃಷ್ಣ’ ಜಪ, ಜನ್ಮಾಷ್ಟಮಿಯಂದೇ ರಕ್ಷಣೆ – ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕ ಬದುಕಿದ್ದು ಪವಾಡವೇ ಸರಿ
