ಬೆಂಗಳೂರು: ಸ್ನೇಹಿತನ ಮೇಲೆ ಹಲ್ಲೆ ಮಾಡಿ ಕಿಡ್ನ್ಯಾಪ್ ಮಾಡಿದ ಪ್ರಕರಣದಲ್ಲಿ ಇದೀಗ ನಟ ದುನಿಯಾ ವಿಜಯ್ (Duniya Vijay) ಮಗ ಸಾಮ್ರಾಟ್ಗೆ ನಿರೀಕ್ಷಣಾ ಜಾಮೀನು (Anticipatory Bail) ಆಗಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಎಸಿಜೆಎಂ 6ನೇ ನ್ಯಾಯಾಲಯ ಸಾಮ್ರಾಟ್ ವಿಜಯ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ವಿಚ್ಛೇದನ ಇತ್ಯರ್ಥದ ಬಳಿಕ ಪೋಸ್ಟ್ – ದುನಿಯಾ ವಿಜಯ್ ಕಳಕಳಿಯ ಮನವಿ
ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಾಮ್ರಾಟ್ ವಿಜಯ್ ಸ್ನೇಹಿತ ಮನೀಷ್ ಗೌಡ ವಿರುದ್ಧ ಪ್ರತಿದೂರು ದಾಖಲಿಸಿದ್ದು, ನನ್ನ ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ದೂರಿನನ್ವಯ ಮನೀಷ್ ಗೌಡ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆ ನಡೆದಿರುವ ಸ್ಥಳ ಆರ್ಆರ್ ನಗರ (RR Nagar) ಠಾಣಾ ವ್ಯಾಪ್ತಿಯಾಗಿರುವ ಕಾರಣದಿಂದ ಸದ್ಯ ಸಾಮ್ರಾಟ್ ವಿಜಯ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದೀಗ ಆರ್ಆರ್ ನಗರ ಠಾಣೆಗೆ ವರ್ಗಾವಣೆಯಾಗಿದೆ.ಇದನ್ನೂ ಓದಿ: ಕಾಲೇಜ್ ವಿದ್ಯಾರ್ಥಿಗೆ ಹಲ್ಲೆ, ಕಿಡ್ನ್ಯಾಪ್ – ದುನಿಯ್ ವಿಜಯ್ ಪುತ್ರನ ವಿರುದ್ಧ FIR
