ಬೀದರ್: ಕೆಪಿಎಸ್‌ಸಿ (KPSC) ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತ ಬಸವರಾಜ್ ಕನ್ನಾಳೆ (Basavaraj Kannale) ಆಪ್ತ ಪವನ್ ರೆಡ್ಡಿ ಮನೆ ಮೇಲೆ ಸಿಐಡಿ ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿರುವ ಪವನ್ ರೆಡ್ಡಿ ಮನೆ ಮೇಲೆ ಸಿಐಡಿ ಟೀಂ ದಾಳಿ ಮಾಡಿದೆ. ಸತತ ನಾಲ್ಕು ಗಂಟೆ ಪರಿಶೀಲನೆ ಮಾಡಿ, ಎಲ್ಲಾ ದಾಖಲೆಗಳು ಮತ್ತು ಮನೆಯವರಿಂದ ಮಾಹಿತಿ ಪಡೆದ ಐದು ಜನರ ಸಿಐಡಿ ತಂಡ ಮನೆಯಲ್ಲ ಜಾಲಾಡಿ ದಾಖಲೆಗಳ ಸಮೇತ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೋರಾಟಕ್ಕೆ ಮಣಿದು ಪಾರ್ಕ್ ಮಸೂದೆ ವಾಪಸ್: ವಿಜಯೇಂದ್ರ ಲೇವಡಿ
ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಸಿಲುಕಿರುವ ಈ ಇಬ್ಬರು ಅತ್ಯಾಪ್ತರಾಗಿರುವ ಸ್ಟೋರಿಯೇ ಒಂದು ರೀತಿ ರೋಚಕವಾಗಿದೆ. ಪ್ರಮುಖ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಮತ್ತು ಪವನ್ ರೆಡ್ಡಿ ಇಬ್ಬರು ಕೆಪಿಎಸ್‌ಸಿ ಎಕ್ಸಾಂ ಬರೆಯಲು ಬಂದಾಗ ಪರಿಚಯವಾಗಿದ್ದರು. ಬಳಿಕ ದೆಹಲಿಯಲ್ಲಿ ಇಬ್ಬರು ಒಟ್ಟಿಗೆ ಯುಪಿಎಸ್‌ಸಿ ತರಬೇತಿ ಪಡೆಯುತ್ತಿರುವ ವೇಳೆ ಅತ್ಯಾಪ್ತರಾಗಿದ್ದು, ಹೀಗಾಗಿ ಬಸವರಾಜ್ ಕನ್ನಾಳೆಯ ಜೊತೆ ಪವನ್ ರೆಡ್ಡಿ ಕೋಟ್ಯಾಂತರ ರೂಯ ಹಣಕಾಸು ವ್ಯವಹಾರ ಹೊಂದಿದ್ದಾನೆ ಎನ್ನಲಾಗಿದೆ.
ಸದ್ಯ ಕೆಪಿಎಸ್‌ಸಿ ಅಕ್ರಮ ನೇಮಕಾತಿಯ ವ್ಯವಹಾರದಲ್ಲಿ ಪವನ್ ರೆಡ್ಡಿ ಪಾಲುದಾರನಾಗಿದ್ದಾನೆಂದು ಶಂಕಿಸಲಾಗಿದ್ದು, ಈ ಹಿನ್ನೆಲೆ ಕಲಬುರಗಿ ವಿಭಾಗೀಯ ಸಿಐಡಿ ತಂಡ ಮನೆ ಮೇಲೆ ದಾಳಿ ಮಾಡಿ ದಾಖಲೆ ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ:ಪ್ರಭಾಸ್ ಚಿತ್ರಕ್ಕಾಗಿ ವಾಸುಕಿ ಹಾಡು : ಹಾಡಿ ಹೊಗಳಿದ ಸಂದೀಪ್ ರೆಡ್ಡಿ ವಂಗ
