ವೈಯಕ್ತಿಕ ಜೀವನದ ಕಷ್ಟದಿಂದ ಸಿನಿಮಾ ರಂಗದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ತಮಿಳು ನಟ (Kollywood) ಜಯಂ ರವಿ (Jayam Ravi) ಇದೀಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವೇ ಮತ್ತೆ ಸಿನಿಮಾಗಳತ್ತ ಮರಳಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಡಿವೋರ್ಸ್ ಪ್ರಕರಣದಿಂದ ಮಾನಸಿಕವಾಗಿ ನೋವಾಗಿದ್ದು, ಸಮಸ್ಯೆ ಬಗೆಹರಿಯುವವರೆಗೆ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಜಯಂ ರವಿ ಈ ಹಿಂದೆ ತಿಳಿಸಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿ ಈ ನಿರ್ಧಾರವನ್ನು ಪ್ರಕಟಿಸಿದ್ದರು. ಇದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದರು.ಇದನ್ನೂ ಓದಿ: ಕಮಲ್ ಹಾಸನ್ ಕನ್ನಡ ಹೇಳಿಕೆ ವಿವಾದ; ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕೇಸ್ ವರ್ಗಾವಣೆ
ಈಗ ಮತ್ತೆ ಮಾತನಾಡಿರುವ ಜಯಂ ರವಿ, ಸಿನಿಮಾ ರಂಗದಿಂದ ದೂರ ಉಳಿಯಬೇಡಿ ಎಂದು ಅಭಿಮಾನಿಗಳು ಮತ್ತು ಆತ್ಮೀಯರು ಧೈರ್ಯ ತುಂಬಿದರು. ಅವರ ಪ್ರೋತ್ಸಾಹದಿಂದಲೇ ಮತ್ತೆ ಸಿನಿಮಾಗಳಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಅಭಿಮಾನಿಗಳಿಗೆ ನೋವುಂಟು ಮಾಡಿದಿದ್ದರೆ ಕ್ಷಮೆಯಾಚಿಸಿರುವ ಜಯಂ ರವಿ, ಇನ್ಮುಂದೆ ಅವರ ಮನಸ್ಸಿಗೆ ನೋವಾಗುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ತಮ್ಮ ನೆಚ್ಚಿನ ನಟ ಮತ್ತೆ ಸಿನಿಮಾಗಳಲ್ಲಿ ಮುಂದುವರಿಯುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಟಾಕ್ಸಿಕ್ ಚಿತ್ರ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ – ಯಶ್ ಕಿಯಾರಾ ಕೆಮಿಸ್ಟ್ರಿಗೆ ನೆಟ್ಟಿಗರು ಫಿದಾ
