ನವದೆಹಲಿ: ಜಾರಿ ನಿರ್ದೇಶನಾಲಯದ (ED) ನಿರ್ದೇಶಕ ರಾಹುಲ್ ನವೀನ್ (Rahul Navin) ಅವರ ಅಧಿಕಾರಾವಧಿಯನ್ನ ಕೇಂದ್ರ ಸರ್ಕಾರ ಒಂದು ವರ್ಷ ವಿಸ್ತರಿಸಿದೆ. ಇದರೊಂದಿಗೆ ಅವರು 2027ರ ಆಗಸ್ಟ್ 13ರ ವರೆಗೆ ED ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
ಈ ಸಂಬಂಧ 2026ರ ಆಗಸ್ಟ್ 8ರಂದು ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ನೇಮಕಾತಿ ಸಮಿತಿ (Appointments Committee of the Cabinet) ರಾಹುಲ್ ನವೀನ್, IRS (IT:93074) ಅವರ ಅಧಿಕಾರಾವಧಿಯನ್ನ 2026ರ ಆಗಸ್ಟ್ 13ರ ಬಳಿಕ ಮತ್ತೊಂದು ವರ್ಷ ವಿಸ್ತರಿಸಲು ಅನುಮೋದನೆ ನೀಡಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ – JPSC ಪರೀಕ್ಷೆ ರದ್ದುಪಡಿಸಲು ಸಿದ್ಧತೆ
ಆದೇಶದ ಪ್ರಕಾರ, ರಾಹುಲ್ ನವೀನ್ ಅವರ ಅಧಿಕಾರಾವಧಿ 2027ರ ಆಗಸ್ಟ್ 13ರ ವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ. ಅವರ ನಿಗದಿತ ನಿವೃತ್ತಿ ದಿನಾಂಕ 2027ರ ಜುಲೈ 31 ಆಗಿದ್ದರೂ, ಈ ವಿಸ್ತರಣೆಯಿಂದಾಗಿ ಅವರು ಅದರ ಬಳಿಕವೂ ಸೇವೆಯಲ್ಲಿ ಮುಂದುವರಿಯಲಿದ್ದಾರೆ.


ರಾಹುಲ್ ನವೀನ್ ಯಾರು?
ರಾಹುಲ್ ನವೀನ್ ಅವರು 1993ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ. ಆದಾಯ ತೆರಿಗೆ ಇಲಾಖೆಯಲ್ಲಿ ಅವರು 30 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ತೆರಿಗೆ ವ್ಯವಸ್ಥೆಯಲ್ಲೂ ಅವರು ಪರಿಣತಿ ಹೊಂದಿದ್ದಾರೆ.
2004 ರಿಂದ 2008 ರ ವರೆಗೆ ಮುಂಬೈನ ಅಂತಾರಾಷ್ಟ್ರೀಯ ತೆರಿಗೆ ನಿರ್ದೇಶನಾಲಯದಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಭಾರತದಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದ ಹಲವು ಆಫ್‌ಶೋರ್ ವಹಿವಾಟುಗಳಲ್ಲಿ ತೆರಿಗೆ ಬೇಡಿಕೆಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದನ್ನೂ ಓದಿ: ಮೇಲುಕೋಟೆಯಲ್ಲಿ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಭ್ರಮ – ಪುಷ್ಪಯಾಗದೊಂದಿಗೆ ತೆರೆಬಿದ್ದ ಮಹೋತ್ಸವ
2019 ರಲ್ಲಿ ED ಗೆ ಸೇರ್ಪಡೆ
ರಾಹುಲ್ ನವೀನ್ ಅವರು 2019ರ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯದಲ್ಲಿ ವಿಶೇಷ ಕರ್ತವ್ಯಾಧಿಕಾರಿ (OSD) ಆಗಿ ನಿಯೋಜನೆಗೊಂಡಿದ್ದರು. ಈ ಅವಧಿಯಲ್ಲಿ ಅವರು FATF (Financial Action Task Force) ಪರಸ್ಪರ ಮೌಲ್ಯಮಾಪನಕ್ಕೆ ಸಂಬಂಧಿಸಿದ ಕಾರ್ಯಗಳನ್ನ ನಿರ್ವಹಿಸಿದ್ದರು.

2020ರ ನವೆಂಬರ್‌ನಲ್ಲಿ ಅವರನ್ನ EDಯ ವಿಶೇಷ ನಿರ್ದೇಶಕ (ಮುಖ್ಯ ಕಚೇರಿ) ಹುದ್ದೆಗೆ ನೇಮಿಸಲಾಯಿತು. ದೇಶಾದ್ಯಂತ ನಡೆಯುವ ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ತನಿಖೆಗಳ ಸಮನ್ವಯ, ಅಂತಾರಾಷ್ಟ್ರೀಯ ಸಹಕಾರ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಆಸ್ತಿಗಳ ವಶಪಡಿಸಿಕೊಳ್ಳುವಿಕೆ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನ ಅವರು ನಿರ್ವಹಿಸಿದರು.
2023ರ ಸೆಪ್ಟೆಂಬರ್ 15ರಂದು ರಾಹುಲ್ ನವೀನ್ ಅವರು ED ನಿರ್ದೇಶಕರಾಗಿ (ಪ್ರಭಾರ) ಅಧಿಕಾರ ವಹಿಸಿಕೊಂಡರು. ಬಳಿಕ 2024ರ ಆಗಸ್ಟ್ 14ರಂದು ಅವರನ್ನು ಅಧಿಕೃತವಾಗಿ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕ ಮಾಡಲಾಯಿತು. ಇದನ್ನೂ ಓದಿ: ಯುಬಿ ಸಿಟಿಯ ಹೋಟೆಲ್‌ಗಳ ಮೇಲೆ ದಾಳಿ – 45 ಕೆಜಿ ಕೊಳೆತ ಮಾಂಸ ಪತ್ತೆ; SKY ಹೋಟೆಲ್ ಕಿಚನ್ ಸೀಜ್

