ಕನ್ನಡತಿ, ಕಿಸ್ ಖ್ಯಾತಿಯ ನಟಿ ಶ್ರೀಲೀಲಾ (Sreeleela) ಸಾಲು ಸಾಲಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಒಂದು ಕಡೆ ಸ್ಟಾರ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ಶ್ರೀಲೀಲಾ ಅವರು ರಶ್ಮಿಕಾ ಮಂದಣ್ಣ ಹಾದಿಯನ್ನೇ ತುಳಿಯುತ್ತಿದ್ದಾರೆ. ಸದ್ಯ ಶ್ರೀಲೀಲಾ ಹೆಸರಾಂತ ನಟ ಅಲ್ಲು ಅರ್ಜುನ್ (Allu Arjun) ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್‌ನಲ್ಲಿ ರಾಕಾ ಸಿನಿಮಾ ಮೂಡಿ ಬರುತ್ತಿದ್ದು, ಈ ಸಿನಿಮಾಗೆ ನಾಯಕಿಯನ್ನಾಗಿ ಕನ್ನಡದ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಇದಾಗಿದೆ. ಈಗಾಗಲೇ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಜನನಾಯಗನ್ ಬಿಡುಗಡೆಗೂ ಮುನ್ನ ಸಿಎಂ ವಿಜಯ್ ಸ್ಟ್ರಿಕ್ಟ್ ರೂಲ್ಸ್ – ಥಿಯೇಟರ್‌ಗಳಿಗೆ ವಾರ್ನಿಂಗ್
ಶ್ರೀಲೀಲಾಗೂ ಮೊದಲು ಬಾಲಿವುಡ್ ನಟಿ, ಮತ್ತೋರ್ವ ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿ ಅಂತ ಹೇಳಲಾಗಿತ್ತು. ಅಧಿಕೃತವಾಗಿ ಚಿತ್ರತಂಡ ಏನೂ ಹೇಳದೇ ಇದ್ದರೂ, ದೀಪಿಕಾ ಪಡುಕೋಣೆ ಹೆಸರು ಚಾಲ್ತಿಯಲ್ಲಿತ್ತು. ಇದೀಗ ಶ್ರೀಲೀಲಾ ಹೆಸರು ತೇಲಿ ಬಂದಿದೆ. ಮುಂದಿನ ದಿನಗಳಲ್ಲೇ ಚಿತ್ರತಂಡವೇ ಈ ಕುರಿತು ಅಂತಿಮ ಪ್ರಕಟನೆ ಹೊರಡಿಸಬಹುದು.
