CrimeDistrictsKarnatakaLatestMain PostMysuru

5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ

ಮೈಸೂರು: ಪತ್ನಿಯನ್ನು ಪತಿಯೇ ನೀರಿನಲ್ಲಿ ಮುಳುಗಿಸಿ ಕೊಂದ ಘಟನೆ ಮೈಸೂರಿನಲ್ಲಿ ನಡೆದಿದೆ.

ದೇವಿ (28) ಗಂಡನಿಂದಲೇ ಕೊಲೆಯಾದ ದುರ್ದೈವಿ. ನಂಜನಗೂಡು ಕಪಿಲಾ ನದಿಯಲ್ಲಿ 5 ತಿಂಗಳ ಗರ್ಭಿಣಿಯನ್ನು ಪತಿ ಹತ್ಯೆ ಮಾಡಿದ್ದಾನೆ. ನಂಜನಗೂಡು ತಾಲೂಕು ಮುದ್ದಳ್ಳಿ ರಾಜೇಶ್ ಕೊಲೆ ಆರೋಪಿ.

ಇಬ್ಬರು ಮಕ್ಕಳನ್ನು ಹಾಗೂ ಹೆಂಡತಿಯನ್ನು ಕೊಲ್ಲಲು ರಾಜೇಶ್ ಯತ್ನಿಸಿದ್ದ. ಆದರೆ ಇದನ್ನು ನೋಡಿದ ಸ್ಥಳೀಯರು ತಕ್ಷಣ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥ ಮಕ್ಕಳನ್ನು ಇನ್ಸ್‌​ಪೆ​ಕ್ಟರ್‌ ಲಕ್ಷ್ಮಿಕಾಂತ್ ತಳವಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

POLICE JEEP

ದೇವಿಯನ್ನು ರಕ್ಷಣೆ ಮಾಡುವಷ್ಟರಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ನಂಜನಗೂಡು ಪೊಲೀಸರು ದಾಖಲಿಸಿಕೊಂಡು, ಆರೋಪಿ ರಾಜೇಶನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಲವ್ವರ್ ಮಾತಾಡಲು ನಿರಾಕರಿಸಿದಳೆಂದು ಆಸ್ಪತ್ರೆ ವೈದ್ಯ, ರೋಗಿಗಳಿಗೆ ಚಾಕುವಿನಿಂದ ಇರಿದ!

Leave a Reply

Your email address will not be published.

Back to top button