– ಸಿದ್ದರಾಮಣ್ಣ ಅವರ ನಡೆಯಿಂದ ಎದುರಾಳಿಗಳು ದಿಗ್ಬ್ರಾಂತರಾಗಿದ್ದಾರೆ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರ ಅವಶ್ಯಕತೆ ಇನ್ನೂ ನಮ್ಮ ಪಕ್ಷಕ್ಕೆ ಸಾಕಷ್ಟಿದೆ ಇದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅಂಥವರ ಆಶೀರ್ವಾದ ಇಲ್ಲದೇ ಕಾಂಗ್ರೆಸ್ ಪಕ್ಷ ಬೆಳೆಯೋದಕ್ಕೆ ಸಾಧ್ಯನೇ ಇಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ (Bengaluru) ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ರೀತಿಯನ್ನ ಶ್ಲಾಘಿಸಿದರು. ಅಲ್ಲದೇ ಮುಂದಿನ ಸಿಎಂ ಡಿಕೆ ಶಿವಕುಮಾರ್ ಅವರನ್ನ ಕೊಂಡಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್

ಡಿಕೆ ಶಿವಕುಮಾರ್ (DK Shivakumar) ಅವರು ಸಿಎಂ ಆಗ್ತಿರೋದು ಸಂತೋಷ ಆಗ್ತಿದೆ. ಇದೊಂದು ಹೊಸ ಜವಾಬ್ದಾರಿ. ಸಿದ್ದರಾಮಯ್ಯರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ. ಯಾವುದೇ ಗೊಂದಲ ಇಲ್ಲದೇ ಅಧಿಕಾರ ಹಸ್ತಾಂತರ ಆಗಿದೆ. ವಿಪಕ್ಷಗಳು ಏನೋ ಆಗುತ್ತೆ ಅಂತ ಆಸೆಯಲ್ಲಿ ಇದ್ದರು. ಅವರಿಗೆ ನಿರಾಸೆ ಆಗಿದೆ ಎಂದು ಕುಟುಕಿದ್ರು. ಇದನ್ನೂ ಓದಿ: ಲೋಕಭವನಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್ – ಇಂದೇ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಸಾಧ್ಯತೆ
ಡಿಕೆ ಶಿವಕುಮಾರ್ ಪಕ್ಷಕ್ಕೆ ದುಡಿದ್ದಾರೆ, ಬಿಜೆಪಿ ಅವರು ಕಷ್ಟ ಕೊಟ್ಟರೂ, ಜೈಲಿಗೆ ಹಾಕಿದ್ರು ಡಿಕೆಶಿ ಪಕ್ಷ ನಿಷ್ಠೆ ಬಿಟ್ಟಿಲ್ಲ. ಸ್ವತಂತ್ರ ಅಭ್ಯರ್ಥಿ ಆಗಿ ಗೆದ್ದಾಗ ದೇವೇಗೌಡರು ಮಂತ್ರಿ ಆಗೋ ಆಫರ್ ಕೊಟ್ಟರೂ, ಬಿಜೆಪಿ ಸಿಎಂ ಆಫರ್ ಕೊಟ್ಟರೂ ಅವರು ಹೋಗಲಿಲ್ಲ. ಹೊಸ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು. ಹೊಸ ನಾಯಕತ್ವಕ್ಕೆ ಇದು ಅವಶ್ಯಕತೆ ಇದೆ. ಆದ್ರೆ ಎಷ್ಟು ಆಗಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು. ಇದನ್ನೂ ಓದಿ: ಹಾಯ್ ಮೈ ಡಿಯರ್ ಗಾಡ್ ಗಿಫ್ಟ್ – ನನ್ನ ಬರ್ತಡೇಗೆ ಏನ್ ಕೊಡ್ತಿಯಾ?
ಶಾಸಕಾಂಗ ಸಭೆ ಬಗ್ಗೆ ಇನ್ನು ಮಾಹಿತಿ ಕೊಟ್ಟಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ, ಏಕೆಂದ್ರೆ 5 ಬಾರಿ ಶಾಸಕನಾಗಿದ್ದೇನೆ. ಒಂದು ಅವಕಾಶ ಕೊಡಿ ಅಂತ ನಾನು ಮನವಿ ಮಾಡ್ತೀನಿ. ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಹಳಬರನ್ನು ಹೊಸ ಸಂಪುಟಕ್ಕೆ ಸೇರ್ಪಡೆ ಮಾಡಬೇಕಾ? ಬೇಡವಾ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರಲ್ಲದೇ, 2028 ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಡಿಕೆಶಿ- ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಡಿಕೆ ಶಿವಕುಮಾರ್ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗ್ತಾರೆ. ಡಿಕೆಶಿ ಹೈಕಮಾಂಡ್ ಮನವೊಲಿಕೆ ಮಾಡಿ, ಸಿದ್ದರಾಮಯ್ಯ ಮನವೊಲಿಕೆ ಮಾಡಿದ್ದಾರೆ. ಡಿಕೆಶಿ ಅವರಿಗೆ 40 ವರ್ಷ ಅನುಭವ ಇದೆ. ರಾಜ್ಯವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗ್ತಾರೆ. 2028ಕ್ಕೂ ಅಧಿಕಾರಕ್ಕೆ ಕಾಂಗ್ರೆಸ್ ಅನ್ನು ಡಿಕೆಶಿ ತರುತ್ತಾರೆ. ವಿಪಕ್ಷಗಳಿಗೆ ಈಗ ನಿದ್ದೆ ಕೆಟ್ಟಿದೆ. ಡಿಕೆ ಶಿವಕುಮಾರ್ ಜವಾಬ್ದಾರಿ ಜಾಸ್ತಿ ಇದೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಡಿಕೆಶಿ ಮಾಡ್ತಾರೆ. ಗಾಂಧಿ ಕುಟುಂಬಕ್ಕೆ ನಿಷ್ಠೆಯಿಂದಿದ್ದೇನೆ ಅಂತ ತಾಳ್ಮೆಯಿಂದ ಕಾದಿದ್ದಕ್ಕೆ ಈ ಸ್ಥಾನ ಸಿಕ್ಕಿದೆ ಎಂದು ಶ್ಲಾಘಿಸಿದರು.
ಜೆಡಿಎಸ್ ತೊರೆದಾಗ ಸಿದ್ರಾಮಣ್ಣ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನ ಪಕ್ಷದ ನಾಯಕರು ಕೊಡುತ್ತಿದ್ದರು. ಆದ್ರೆ ನಾನು ಆ ರೀತಿ ಇಲ್ಲ, ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅನ್ನೋದನ್ನ ಸಿದ್ದರಾಮಯ್ಯ ಅವರು ತೋರಿಸಿಕೊಟ್ಟಿದ್ದಾರೆ. ವಿರೋದಿಗಳು ಇದರಿಂದ ದಿಗ್ಬ್ರಾಂತರಾಗಿದ್ದಾರೆ. ಸಿದ್ದರಾಮಣ್ಣ, ಮಲ್ಲಿಕಾರ್ಜುನ ಖರ್ಗೆ ಅಂಥವರ ಆಶೀರ್ವಾದ ಸದಾ ಕಾಂಗ್ರೆಸ್ ಪಕ್ಷಕ್ಕೆ ಬೇಕು ಎಂದು ತಿಳಿಸಿದರು. ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣ – 2 ವರ್ಷ ವಿದೇಶಿ ಪ್ರವಾಸಕ್ಕೆ ತೆರಳಲು ಡಿಕೆಶಿಗೆ ಕೋರ್ಟ್ ಅನುಮತಿ
ಅನೇಕರು ಡಿಕೆ ಶಿವಕುಮಾರ್ ಅವರಿಗೆ ಧಕ್ಕೆ ತರುವ, ಕೆರಳಿಸುವ ಹೇಳಿಕೆ ಕೊಟ್ಟರು. ಏನೇ ಹೇಳಿಕೆ ಕೊಟ್ಟರೂ ಅದನ್ನ ದ್ವೇಷದಿಂದ ಸ್ವೀಕಾರ ಮಾಡದೇ, ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
