ಕಾರವಾರ: ಉತ್ತರ ಕನ್ನಡ (Uttara kannada) ಜಿಲ್ಲೆಯ ಕಾರವಾರದ ( Karwar) ಬೈತಕೋಲ್ ಬಂದರಿನಲ್ಲಿ ಬಿಸಿ ಡಾಂಬರ್ ತುಂಬಿದ್ದ ಹಡಗಿನಿಂದ ಸಾವಿರಾರು ಲೀಟರ್ ಡಾಂಬರ್ ಸಮುದ್ರಕ್ಕೆ ಸೋರಿಕೆಯಾದ ಘಟನೆ ನಡೆದಿದೆ.
ಹಡಗಿನಿಂದ ಡಾಂಬರ್ ಇಳಿಸುವ ವೇಳೆ ಪೈಪ್ ಸಿಡಿದ ಪರಿಣಾಮ ಈ ಅವಘಡ ಸಂಭವಿಸಿದೆ. ಮಧ್ಯಪ್ರಾಚ್ಯ ದೇಶದಿಂದ ಮರಿನ್ ಫ್ಲೂಯಲ್ ಹಡಗು ಕಾರವಾರ ಬಂದರಿಗೆ ಡಾಂಬರ್ ಹೊತ್ತು ತಂದಿತ್ತು. ಈ ಡಾಂಬರ್ ಅಲಿಗದ್ದಾದ ಎಂ.ಎ.ಸಿ.ಎಲ್ ಕಂಪನಿಗೆ ಸೇರಿದ್ದು, ಬೈತಕೋಲ್ ಬಂದರಿನಲ್ಲಿ ಅನ್‌ಲೋಡ್ ಮಾಡಲಾಗುತ್ತಿತ್ತು.
ಡಾಂಬರ್ ಇಳಿಸುವ ವೇಳೆ ಪೈಪ್‌ನಲ್ಲಿ ಏಕಾಏಕಿ ಒತ್ತಡ ಹೆಚ್ಚಾಗಿದೆ. ಇದರಿಂದ ಪೈಪ್ ಸಿಡಿದು, ಬಿಸಿ ಡಾಂಬರ್ ನೇರವಾಗಿ ಸಮುದ್ರಕ್ಕೆ ಹರಿದಿದೆ. ಕ್ಷಣಾರ್ಧದಲ್ಲೇ ಸಾವಿರಾರು ಲೀಟರ್ ಡಾಂಬರ್ ಸಮುದ್ರ ಸೇರಿರುವುದಾಗಿ ತಿಳಿದುಬಂದಿದೆ.ಇದನ್ನೂ ಓದಿ; ಜಾನಕಿ ಅಮ್ಮ ಮೊದಲು, ಕೊನೆಯ ಹಾಡು ಹಾಡಿದ್ದು, ಗಾಯನ ನಿಲ್ಲಿಸಿದ್ದು ಮೈಸೂರಿನಲ್ಲೇ!
ಘಟನೆ ನಡೆದ ತಕ್ಷಣ ಹಡಗಿನ ಸಿಬ್ಬಂದಿ ಸೋರಿಕೆ ತಡೆಯಲು ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಪ್ರಯತ್ನದ ಬಳಿಕ ಪೈಪ್ ದುರಸ್ತಿ ಮಾಡಿ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಘಟನೆಯಿಂದ ಸಮುದ್ರದ ನೀರಿಗೆ ಡಾಂಬರ್ ಬೆರೆತಿದ್ದು, ಪರಿಸರದ ಮೇಲೆ ಇದರ ಪರಿಣಾಮ ಏನಾಗಲಿದೆ ಎಂಬ ಬಗ್ಗೆ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ.ಇದನ್ನೂ ಓದಿ; ಎಸ್.ಜಾನಕಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ: ಬೊಮ್ಮಾಯಿ

