– ʼನಾರ್ವೆ ಸೋಲಲು ನೀನೇ ಕಾರಣʼ: ಅಲೆಕ್ಸಾಂಡರ್ ಸೊರ್ಲೋತ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್
ನ್ಯೂಯಾರ್ಕ್: ನಾರ್ವೆ ಸ್ಟಾರ್ ಅಲೆಕ್ಸಾಂಡರ್ ಸೊರ್ಲೋತ್ (Alexander Sorloth) ಮಾಡಿದ ಪ್ರಮಾದದಿಂದ ಫಿಫಾ ವಿಶ್ವಕಪ್ (FIFA World Cup 2026) ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆ ಮುಗ್ಗರಿಸಿ ಅತಿದೊಡ್ಡ ಬೆಲೆ ತೆತ್ತಿದೆ. ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ತಂಡದ ಟಾಪ್ ಸ್ಕೋರರ್ ಎರ್ಲಿಂಗ್ ಹಾಲೆಂಡ್‌ಗೆ (Erling Haaland) ಚೆಂಡನ್ನು ಪಾಸ್ ಮಾಡಲು ನಿರಾಕರಿಸಿ ಅಲೆಕ್ಸಾಂಡರ್ ದೊಡ್ಡ ಬ್ಲಂಡರ್ ಮಾಡಿದರು. ಆಟಗಾರನ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪಂದ್ಯಾವಳಿಯಲ್ಲಿ 1-0 ಮುನ್ನಡೆಯಲ್ಲಿದ್ದ ನಾರ್ವೆ ಮತ್ತೊಂದು ಅದ್ಭುತ ಪ್ರತಿದಾಳಿಯ ಅವಕಾಶವನ್ನು ಪಡೆದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧ 2-1 ಮುನ್ನಡೆಗೆ ನಾರ್ವೆಗೆ ಉತ್ತಮ ಅವಕಾಶ ಇತ್ತು. ಸುಲಭವಾದ ಫಿನಿಶ್‌ಗಾಗಿ ಹಾಲೆಂಡ್ ತನಗೆ ಚೆಂಡನ್ನು ವರ್ಗಾಯಿಸುವಂತೆ ಕೇಳಿಕೊಂಡರೂ ಸೊರ್ಲೋತ್ ಸ್ವತಃ ತಾವೇ ಗೋಲು ಹೊಡೆಯಲು ಮುಂದಾಗುತ್ತಾರೆ. ತನ್ನ ಸ್ವಾರ್ಥ ನಿರ್ಧಾರದಿಂದ ಗೋಲು ಗಳಿಸುವಲ್ಲಿ ವಿಫಲರಾಗುತ್ತಾರೆ. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಸೊರ್ಲೋತ್ ನಡೆಗೆ ನಾರ್ವೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ಯಾಮೆರಾ ಕೇಬಲ್‌ಗೆ ತಗುಲಿತ್ತೇ ಚೆಂಡು?- ವಿಡಿಯೋ ನೋಡಿ ನಾರ್ವೆ ಕೆಂಡಾಮಂಡಲ, ತಪ್ಪು ಸಂಭವಿಸಿಲ್ಲ ಎಂದ ಫಿಫಾ
watch this angle😭😭.
Sorloth genuinely let the whole country down pic.twitter.com/e5pUJeiTQZ
— foland (fan) (@propsMCFC) July 12, 2026
ಸೊರ್ಲೋತ್ ಒಂದೆರಡು ಡಿಫೆಂಡರ್‌ಗಳ ಹಿಂದೆ ಡ್ರಿಬಲ್ ಮಾಡಿ ಹೊಡೆತ ಬಿಡಲು ಪ್ರಯತ್ನಿಸಿದರು. ಆದರೆ, ಅವರ ದುರ್ಬಲ ಪ್ರಯತ್ನವು ಇಂಗ್ಲೆಂಡ್‌ನ ಗೋಲ್‌ನಲ್ಲಿ ಪಿಕ್‌ಫೋರ್ಡ್ ಅನ್ನು ತಲುಪಲು ವಿಫಲವಾಯಿತು. ತನ್ನ ತಂಡದ ಸಹ ಆಟಗಾರನ ನಿರ್ಧಾರದಿಂದ ನಿರಾಶೆಗೊಂಡ ಹಾಲೆಂಡ್, ಮೈದಾನದಲ್ಲಿ ತನ್ನ ಹತಾಶೆಯನ್ನು ವ್ಯಕ್ತಪಡಿಸಿದರು. ʼವಿಶ್ವಕಪ್‌ನ ಅತಿದೊಡ್ಡ ಪ್ರಮಾದ ಇದುʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಸೊರ್ಲೋತ್ ನಡೆಯಿಂದ ನಾರ್ವೆ ಸೋಲನುಭವಿಸಿತು ಎಂದು ಫ್ಯಾನ್ಸ್ ಬೇಸರಿಸಿದ್ದಾರೆ.
ಉತ್ತಮ ಫಾರ್ಮ್‌ನಲ್ಲಿರುವ ಆಟಗಾರ ಹಾಲೆಂಡ್‌ಗೆ ಸೊರ್ಲೋತ್ ಚೆಂಡನ್ನು ಪಾಸ್ ಮಾಡಿದ್ದರೆ, ಅದು ಅವರ ಮುನ್ನಡೆಯನ್ನು ದ್ವಿಗುಣಗೊಳಿಸಬಹುದಿತ್ತು. ಇದರಿಂದ ಇಂಗ್ಲೆಂಡ್ ತಂಡದ ಪುನರಾಗಮನವು ತುಂಬಾ ಕಷ್ಟಕರವಾಗುತ್ತಿತ್ತು. ಶಾಕಿಂಗ್ ಎಂಬಂತೆ, ಈ ಪ್ರಮಾದ ನಡೆದ ಕೆಲವೇ ನಿಮಿಷಗಳ ನಂತರ ಇಂಗ್ಲೆಂಡ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಮೂಲಕ ಸಮಬಲದ ಗೋಲು ಗಳಿಸಿತು. ಅಂತಿಮವಾಗಿ ನಾರ್ವೆ ವಿರುದ್ಧ ಇಂಗ್ಲೆಂಡ್ 2-1 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಇದನ್ನೂ ಓದಿ: ಬೆಲ್ಲಿಂಗ್‌ಹ್ಯಾಂ ಮ್ಯಾಜಿಕ್, ಹಾಲಂಡ್ ಎಡವಟ್ಟು – ನಾರ್ವೆ ವಿರುದ್ಧ ಗೆದ್ದು ಸೆಮಿಗೆ ಇಂಗ್ಲೆಂಡ್ ಎಂಟ್ರಿ
ಇಂಗ್ಲೆಂಡ್ ತಂಡವು 60 ವರ್ಷಗಳಲ್ಲಿ ವಿಶ್ವಕಪ್ ಫೈನಲ್ ತಲುಪಿಲ್ಲ. ಆ ಕನಸನ್ನು ನನಸಾಗಿಸಲು, ಟುಚೆಲ್ ತನ್ನ ತಂಡವು ಉತ್ತಮಗೊಳ್ಳಬೇಕೆಂದು ಬಯಸುತ್ತಾರೆ.
